Advertisement
ತಾಲೂಕಿನ ವಿವಿಧ ಗ್ರಾಮಗಳಿಂದ ಉದ್ಯೋಗ ಅರಸಿ ವಿದೇಶಕ್ಕೆ ತೆರಳಿರುವವರು ಕೋವಿಡ್ 19 ಹಿನ್ನೆಲೆಯಲ್ಲಿ ತವರಿಗೆ ಆಗಮಿಸಿದ್ದಾರೆ. ಅಂತಹವರ ಮೇಲೆ ಆರೋಗ್ಯ ಇಲಾಖೆ ನಿಗಾ ಇರಿಸಿದ್ದು, 14 ದಿನಗಳ ಕಾಲ ಮುನ್ನೆಚ್ಚರಿಕೆ ವಹಿಸಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕೊಡಗಿನಲ್ಲಿ ಕೋವಿಡ್ 19 ಪ್ರಕರಣ ಪತ್ತೆ ಹಿನ್ನೆಲೆಯಲ್ಲಿ ಗಡಿಭಾಗ ಕಲ್ಲುಗುಂಡಿ ಮತ್ತು ಕೇರಳದಿಂದ ಸುಳ್ಯ ಪ್ರವೇಶಿಸುವ ಜಾಲೂÕರು ಬಳಿ ಆರೋಗ್ಯ, ಕಂದಾಯ, ಪೊಲೀಸ್ ಇಲಾಖೆ ಶುಕ್ರವಾರ ಜತೆಯಾಗಿ ತಪಾಸಣೆ ಆರಂಭಿಸಿದೆ. ಬೆಳಗ್ಗೆಯಿಂದ ರಾತ್ರಿ 10ರ ತನಕ ಪ್ರತಿ ವಾಹನದಲ್ಲಿ ಪ್ರಯಾಣಿಸುವ ವಾಹನ ಸವಾರರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅವರ ದೂರವಾಣಿ ಸಂಖ್ಯೆ ಪಡೆದುಕೊಳ್ಳಲಾಗುತ್ತಿದೆ. ಕೋವಿಡ್ 19 ಜಾಗೃತಿಯ ಕರಪತ್ರ ನೀಡಲಾಗುತ್ತಿದೆ. ವಿದೇಶದಿಂದ ಬಂದವರಾಗಿದ್ದರೆ ಅವರ ಆರೋಗ್ಯ ಬಗ್ಗೆ ವಿಚಾರಿಸಿ ತಪಾಸಣೆಗೆ ಸೂಚಿಸಲಾಗುತ್ತಿದೆ. ಮಾ.31ರ ವರೆಗೆ ತಪಾಸಣೆ ಮುಂದುವರಿಯಲಿದೆ ಎಂದು ತಾಲೂಕು ಆರೋಗ್ಯ ಇಲಾಖಾಧಿಕಾರಿ ಡಾಣ ಎಂ.ಆರ್.ಸುಬ್ರಹ್ಮಣ್ಯ ಉದಯವಾಣಿಗೆ ಮಾಹಿತಿ ನೀಡಿದ್ದಾರೆ.
Related Articles
Advertisement