ಭಟ್ಕಳ: ಕಟಗಾರಕೊಪ್ಪದ ಹೊಸ್ಮಕ್ಕಿ ರಸ್ತೆಯಲ್ಲಿ ಬೃಹತ್ ಗಾತ್ರದ ಹೊಂಡ ನಿರ್ಮಾಣವಾದ ಸ್ಥಳಕ್ಕೆ ಕಾರವಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ತಜ್ಞ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಗ್ರಾಮಸ್ಥರಾದ ಬಾಬಣ್ಣ ಹೆಗಡೆ, ನಾಗರಾಜ ಹೆಗಡೆ ಹಾಗೂ ವಿಷ್ಣುಮೂರ್ತಿ ಹೆಗಡೆ ಮುಂತಾದವರು ಹೊಂಡದ ಹಿನ್ನೆಲೆಯನ್ನು ವಿವರಿಸಿ, ಹೊಂಡದ ಕೆಳಭಾಗದಲ್ಲಿ ನೀರು ಹರಿವಿನ ಶಬ್ದ ಕೇಳುತ್ತಿದ್ದು, ಬಾವಿ ಆಳವಾಗಿರುವುದರಿಂದ ರಸ್ತೆಯಲ್ಲಿ ಓಡಾಡಲು ಭಯವಾಗುತ್ತಿದೆ. ಈ ಭಾಗದಲ್ಲಿ ಮತ್ತೆಲ್ಲಾದರೂ ಈ ರೀತಿ ಆಗಬಹುದೇ ಎಂದು ಪ್ರಶ್ನಿಸಿದರು.
ಹೊಂಡವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಭೂ ವಿಜ್ಞಾನಿಗಳ ತಂಡ, ಈ ಕಂದಕದಿಂದ ಯಾವುದೇ ಭಯಪಡುವ ಅಗತ್ಯವಿಲ್ಲ. ನೀರು ಹರಿದು ಹೋಗಲು ಉಂಟಾಗಿರುವ ಕಂದಕವಾಗಿದ್ದು, ಭಾರೀ ಮಳೆ ನೀರಿನ ರಭಸಕ್ಕೆ ದೊಡ್ಡ ಕಂದಕ ಉಂಟಾಗಿದೆ. ಇದನ್ನು ಮುಚ್ಚುವುದು ಸರಿಯಲ್ಲ. ಈ ಕಂದಕದ ಸುತ್ತ ಬೇಲಿ ಅಥವಾ ಬ್ಯಾರಿಕೇಡ್ ಹಾಕಿ, ಮರ ನೆಟ್ಟರೆ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು, ಇಲ್ಲಿಮರ ನೆಡುವಂತೆವಲಯಅರಣ್ಯಾಧಿಕಾರಿ ಅವರಿಗೂ ದೂರವಾಣಿ ಮೂಲಕ ತಿಳಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಬಂದ ಇಬ್ಬರು ಭೂ ವಿಜ್ಞಾನಿಗಳು ಹಾಗೂ ಕಾರವಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿದ್ದರು. ಹೊಸ್ಮಕ್ಕಿಗೆ ಸಹಾಯಕ ಆಯುಕ್ತರು, ಭೂ ವಿಜ್ಞಾನ ಅಧಿಕಾರಿಗಳು ಭೇಟಿ ನೀಡಿ ರಸ್ತೆಯಲ್ಲಿ ಸೃಷ್ಟಿಯಾದಕಂದಕ ಪರಿಶೀಲಿಸಿಯಾವುದೇ ಭಯಪಡುವುದು ಬೇಡ ಎಂದು ನಮಗೆ ಧೈರ್ಯ ತುಂಬಿದ್ದಾರೆ. ಶೀಘ್ರದಲ್ಲಿ ಪರ್ಯಾಯ ರಸ್ತೆ ವ್ಯವಸ್ಥೆ ಮಾಡಬೇಕು. ಈಭಾಗದಲ್ಲಿ ಭೂ ಕುಸಿತದ ಕುರಿತುಹೆಚ್ಚು ನಿಗಾ ಇಡುವಂತಾಗಬೇಕು. –
ಬಾಬಣ್ಣ ಹೆಗಡೆ, ಕೃಷಿಕರು.
ಹೊಸ್ಮಕ್ಕಿ ರಸ್ತೆಯಲ್ಲಿ ಉಂಟಾದಕಂದಕದ ಬಗ್ಗೆ ಗ್ರಾಮಸ್ಥರು ಭಯಪಡುವ ಅಗತ್ಯವಿಲ್ಲ. ಇಲ್ಲಿ ಪರ್ಯಾಯ ರಸ್ತೆಯ ಬಗ್ಗೆಯೂ ತಿಳಿಸಿದ್ದೇವೆ. ಈಕಂದಕದ ಬಗ್ಗೆ ಬೆಂಗಳೂರಿನಿಂದ ಬಂದ ಭೂ ವಿಜ್ಞಾನಿಗಳು ಕೂಲಂಕುಷವಾಗಿ ಪರಿಶೀಲಿಸಿದ್ದು, ಹದಿನೈದು ದಿನಗಳಲ್ಲಿ ವರದಿ ಸಲ್ಲಿಸಲಿದ್ದಾರೆ. –
ಅಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾರವಾರ