Advertisement

ವಲಸಿಗರನ್ನು ಗಡಿಯಲ್ಲೇ ತಪಾಸಣೆ ಮಾಡಿ

04:29 AM May 23, 2020 | Team Udayavani |

ಮಂಡ್ಯ: ಮುಂಬೈ ವಲಸಿಗರಿಂದ ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ  ಹರಡುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಅಲ್ಲೇ ಕೊರೊನಾ ತಪಾಸಣೆಗೊಳಪಡಿಸಿ ಸೋಂಕು ಇಲ್ಲದವರಿಗೆ ಮಾತ್ರ  ಪ್ರವೇಶ ನೀಡುವುದು ಉತ್ತಮ ಎಂದು ಶಾಸಕ ಶ್ರೀನಿವಾಸ್‌ ಹೇಳಿದರು.

Advertisement

ನಗರದಲ್ಲಿರುವ ಪೂಜಾ ಶಾಮಿಯಾನ ಕಚೇರಿಯಲ್ಲಿ ಶಾಮಿಯಾನ-ದೀಪಾಲಂಕಾರ ಮತ್ತು ಧ್ವನಿವರ್ಧಕ  ಮಾಲೀಕರ ಕ್ಷೇಮಾಭಿವೃದಿ ಸಂಘ ಮತ್ತು ಹನಕೆರೆ ಶ್ರೀನಿವಾಸ್‌ ಪ್ರತಿಷ್ಠಾನ ಸಹಯೋಗದಲ್ಲಿ ಧ್ವನಿವರ್ಧಕ ಕಾರ್ಮಿಕರಿಗೆ ಆಹಾರ ಕಿಟ್‌ ವಿತರಿಸಿ ಮಾತನಾಡಿದರು. ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ  ಅಧ್ಯಕ್ಷತೆಯಲ್ಲಿ ಜಿಲ್ಲೆಯ ಎಲ್ಲಾ ಶಾಸಕರು ಮತ್ತು ಉಸ್ತುವಾರಿ ಸಚಿವರ ಸಮ್ಮುಖದಲ್ಲಿ  ನಡೆದ ಸಭೆಯಲ್ಲಿ ಇಂತಹ ನಿರ್ಣಯವನ್ನು ಸರ್ಕಾರದ ಮುಂದಿಡಲಾಗಿದೆ.

ವಲಸಿಗರನ್ನು ಗಡಿಯಲ್ಲೇ ಕೋವಿಡ್‌ ತಪಾಸಣೆ ನಡೆಸಿ ಆನಂತರ ಸ್ವಂತ ಊರುಗಳಿಗೆ ಕಳಿಸುವುದು ಅಥವಾ ಕ್ವಾರಂಟೈನ್‌ನಲ್ಲಿ ಇರಿಸಿ ಸೂಕ್ತ  ಚಿಕಿತ್ಸೆ ನೀಡುವುದು ಉತ್ತಮ ಎಂದು ತಿಳಿಸಿದರು. ಶಾಮಿಯಾನ ಮಾಲೀಕರ ಸಂಘದ ಮುಖ್ಯಸ್ಥ ರಮೇಶ್‌ ಮಾತನಾಡಿ, ಶಾಮಿಯಾನದ ಅಂಗಡಿಗಳ ಕಾರ್ಮಿಕರು ಮತ್ತು ಮಾಲೀಕರು ಸಂಕಷ್ಟದಲ್ಲಿದ್ದಾರೆ. ಸರ್ಕಾರದೊಂದಿಗೆ ಮಾತನಾಡಿದರು.

ಕೋವಿಡ್‌ ಹಿನ್ನೆಲೆಯಲ್ಲಿ 2 ವರ್ಷ ಯಾವುದೇ ಸಭೆ ಸಮಾರಂಭ ನಡೆಯುವುದಿಲ್ಲ. ಧಾರ್ಮಿಕ ಕಾರ್ಯಗಳೂ ನಡೆಯುವುದಿಲ್ಲ. ಕೂಡಲೇ 50 ಸಾವಿರ ಪರಿಹಾರ ಕೊಡಿಸುವುದು, ತೆರಿಗೆ ಪಾವತಿಸುವುದರಿಂದ ವಿನಾಯಿತಿ  ನೀಡುವುದು, ಸರ್ಕಾರದಿಂದ ಬಾಕಿ ಬರಬೇಕಿರುವ ಬಿಲ್‌ಗ‌ಳನ್ನು ಶೀಘ್ರ ಬಿಡುಗಡೆ ಮಾಡಿಸುವುದು, ಬಾಡಿಗೆ, ತೆರಿಗೆ, ವಿದ್ಯುತ್‌ ಬಿಲ್‌ ಇತರೆ ವೆಚ್ಚಗಳಿಗೆ ರಿಯಾಯಿತಿ ನೀಡುವಂಗೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next