Advertisement

ಸಕಾಲಕ್ಕೆ ಬಸ್‌ ಸೌಕರ್ಯ ಕಲ್ಪಿಸುವಂತೆ ಒತ್ತಾಯ

02:34 PM Nov 14, 2021 | Team Udayavani |

ಭಾಲ್ಕಿ: ತಾಲೂಕಿನ ಖಟಕ ಚಿಂಚೋಳಿ, ಸಿಕಂದ್ರಬಾದ ವಾಡಿ, ಸುಲ್ತಾನ್‌ಬಾದವಾಡಿ, ಬರದಾಪುರ ಗ್ರಾಮಗಳಿಗೆ ಸಕಾಲಕ್ಕೆ ಬಸ್‌ ವ್ಯವಸ್ಥೆ ಇಲ್ಲದಿದ್ದರಿಂದ ಈ ಗ್ರಾಮದ ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಶನಿವಾರ ಕೆಲಕಾಲ ರಸ್ತೆ ತಡೆ ನಡೆಸಿದರು.

Advertisement

ಈ ಕುರಿತು ಘಟಕ ವ್ಯವಸ್ಥಾಪಕರಿಗೆ ಸ್ಥಳದಲ್ಲಿಯೇ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಸಿಕಂದ್ರಾಬಾದ್‌ ವಾಡಿ, ಸುಲ್ತಾನಬಾದವಾಡಿ ಗ್ರಾಮಗಳಿಗೆ ಇಲ್ಲಿವರೆಗೆ ಬಸ್‌ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ಮೂರನಾಲ್ಕು ಕಿ.ಮೀ ನಡೆದುಕೊಂಡೇ ಶಾಲಾ-ಕಾಲೇಜಿಗೆ ಹೋಗಬೇಕಾಗಿದೆ. ಇನ್ನು ಖಟಕ ಚಿಂಚೋಳಿ ಗ್ರಾಮಕ್ಕೆ ಯಾವುದೆ ಬಸ್‌ಗಳ ವಾಯಾ ಮಾಡುತಿಲ್ಲ. ಈ ವಿಷಯ ಕುರಿತು ಘಟಕ ವ್ಯವಸ್ಥಾಪಕ ಅಧಿಕಾರಿಗಳು ಹಾಗು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೂ ಮನವಿ ಸಲ್ಲಿಸಿದರೂ ಯಾವುದೆ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ರಸ್ತೆ ತಡೆ ಆಂದೋಲನ ಕೈಗೆತ್ತಿಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ರೇವಣಸಿದ್ದ ಜಾಡರ್‌ ಮಾತನಾಡಿ, ಭಾಲ್ಕಿ ಡಿಪೋ ಹಾಗು ಹುಮನಾಬಾದ್‌ ಡಿಪೋವಿನ ಎಲ್ಲ ಬಸ್‌ಗಳು ಕಡ್ಡಯವಾಗಿ ಖಟಕ ಚಿಂಚೋಳಿ ಗ್ರಾಮದಲ್ಲಿ ಬರುವಂತೆ ಮಾಡಬೇಕು. ಸಿಕಂದ್ರಬಾದ್‌ ವಾಡಿ ಹಾಗು ಸುಲ್ತಾನಬಾದ ವಾಡಿ ಗ್ರಾಮಕ್ಕೆ ಬೆಳಗ್ಗೆ ಹಾಗು ಸಾಯಂಕಾಲ ವಿಶೇಷ ಬಸ್‌ ಬಿಡಬೇಕು. ಬರದಾಪುರ ಗ್ರಾಮಕ್ಕೆ ಹಳ್ಳಿಖೇಡ(ಬಿ)ನಿಂದ ಬರುವ 9 ಗಂಟೆಯ ಬಸ್‌ ಸಕಾಲಕ್ಕೆ ಗ್ರಾಮಕ್ಕೆ ಆಗಮಿಸಿ ಅಲ್ಲಿಯ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:ತ್ರಿ‌ಸೂತ್ರ ಅನುಸರಿಸಿದರೆ‌ ಆರೋಗ್ಯವಂತ ಬದುಕು: ಸ್ವರ್ಣವಲ್ಲೀ ಶ್ರೀ

ಸ್ಥಳಕ್ಕೆ ಆಗಮಿಸಿದ ಭಾಲ್ಕಿ ಡಿಪೋ ವ್ಯವಸ್ಥಾಪಕ ಅಧಿಕಾರಿ ಮಾತನಾಡಿ, ಭಾಲ್ಕಿ ಹಾಗು ಹುಮನಾಬಾದ್‌ ಡಿಪೋವಿನ ಎಲ್ಲ ಬಸ್‌ಗಳು ಎಲ್ಲ ಟ್ರಿಪ್‌ ಕಡ್ಡಯವಾಗಿ ಖಟಕ ಚಿಂಚೋಳಿ ಗ್ರಾಮಕ್ಕೆ ಆಗಮಿಸುವಂತೆ ನೋಡಿಕೊಳ್ಳಲಾಗುವುದು. ಸಿಕಂದ್ರಬಾದ ವಾಡಿ, ಸುಲ್ತಾನಬಾದ ವಾಡಿ ಗ್ರಾಮಗಳಿಗೆ ಬೆಳಗ್ಗೆ ಹಾಗು ಸಾಯಂಕಾಲ ಬಸ್‌ ಒಡಿಸುವುದಾಗಿ, ಬರದಾಪುರ ಗ್ರಾಮದ ವಿದ್ಯಾರ್ಥಿಗಳಿಗೆ ಭಾಲ್ಕಿಗೆ ಬರಲು 9 ಗಂಟೆಗೆ ಬಸ್‌ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.

Advertisement

ಮುಖಂಡರಾದ ಮಲ್ಲಿಕಾರ್ಜುನ ಪಾಟಿಲ್‌, ಪ್ರಮುಖರಾದ ಗ್ರಾಪಂ ಸದಸ್ಯ ಆನಂದ ರಟಕಲೆ. ರಾಜಕುಮಾರ ಜಟಗುಂಡೆ, ಅನಿಲ್‌ ಸಿರ್ಶೇ, ವಿದ್ಯಾರ್ಥಿ ಮುಖಂಡರಾದ ಪ್ರಣವ ಚಿಲಶೆಟ್ಟಿ, ಪ್ರದೀಪ ಉಂಬರಗೆ, ರಾಮಲಿಂಗ ಮುಳಜಿ, ಸಂಗಮೇಶ ಜ್ಯಾಶೆಟ್ಟೆ, ರಾಜು ಹಂಡಗೆ, ವಿಠಲ ಉಂಬರಗೆ, ಸಚಿನ್‌ ಮಡಿವಾಳ, ಪ್ರಕಾಶ ಉಂಬರೆಗೆ, ಅಮರ ಮಾಕ, ವೀರಶೇಟ್ಟು ಡಾವರಗಾಂವ, ನಾಗರಾಜ ಶೀಲವಂತ, ಪ್ರಕಾಶ ಉಂಬರಗೆ, ಸ್ವಾತಿ, ಶ್ವೇತಾ, ಪೂಜಾ, ಭಾಗ್ಯ, ಸವಿತಾ, ಭವಾನಿ, ಕವಿತಾ, ಸಾವಿತ್ರಿ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next