Advertisement

ಮೌಡ್ಯ ನಿಷೇಧ ಕಾಯ್ದೆ ಜಾರಿಗೆ ಒತ್ತಾಯ

11:41 AM Jun 27, 2017 | Team Udayavani |

ಕೆ.ಆರ್‌.ನಗರ: ಮೌಡ್ಯ ಮತ್ತು ಮಾಟ, ಶಾಸ್ತ್ರ,  ಕಂದಚಾರ ಆಚರಣೆಗಳ ನಿಷೇಧ ಕಾಯ್ದೆ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರವನ್ನುಒತ್ತಾಯಿಸುವುದಾಗಿ ಮಾಜಿ ವಿಧಾನಪರಿಷತ್‌ ಸದಸ್ಯ ಕೆ.ಸಿ ಪುಟ್ಟಸಿದ್ದಶೆಟ್ಟಿ ಹೇಳಿದರು.

Advertisement

ಪಟ್ಟಣದ ಹೆಚ್‌.ಡಿ.ದೇವೇಗೌಡ ಸಮುದಾಯ ಭವನದಲ್ಲಿ ನಡೆದ ಸೃಜನ ಲೇಖಕರ ಮತ್ತು ಕಲಾವಿದರ ಬಳಗ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಯಲ್ಲಿ ಶೇಕಡ 90 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲಾ ರಂಗದಲ್ಲೂ ಖಾಸಗೀಕರಣ ಬಲಿಷ್ಠವಾಗುತ್ತಿದೆ. ಮಾಟ ಮಂತ್ರ ಕಂದಾಚಾರಗಳಿಂದ ಮಕ್ಕಳ ವೈಚಾರಿಕತೆಗೆ ಧಕ್ಕೆ ಉಂಟಾಗುತ್ತಿದೆ. ಜಾತಿ ಮತ ವಿರದ ವೈಜಾnನಿಕ ವೈಚಾರಿಕತೆ ಮನೋಭಾವ ಮಕ್ಕಳಲ್ಲಿ ಬೆಳೆಸುವ ಕಾರ್ಯಕ್ಕೆ ಪೋಷಕರು ಬೆಂಬಲಿಸಬೇಕು ಎಂದರು.

ಡಾ.ಎಸ್‌.ಪಿ.ಯೋಗಣ್ಣ ಮಾತನಾಡಿ, ಸಮಾಜದ ಎಲ್ಲಾ ರಂಗಗಳೂ ಕಲುಷಿತಗೊಂಡಿದ್ದು ಎಲ್ಲಾ ಕ್ಷೇತ್ರಗಳನ್ನೂ ನಿಯಂತ್ರಿಸುವ ಮೂಲಕ ರಾಜಕಾರ ಣಿಗಳು ತಮ್ಮ ಹಿಡಿತ ಸಾಧಿಸುತ್ತಿದ್ದಾರೆ. ಅಪಮೌಲ್ಯಗಳೇ ವಿಜೃಂಭಿಸುವ ಮೂಲಕ ಬದುಕು ಸಂಕೀರ್ಣವಾಗಿ ಜೀವಿಸುತ್ತಿದೆ. ಹಸಿವು ಮತ್ತು ವಸತಿ ಹೀನರಾಗಿ ಯಾರು ಕೂಡ ಇವತ್ತಿನ ಜಗತ್ತಿನಲ್ಲಿ ಇಲ್ಲ. ಆದರೂ ಸಮಾಜ ನೆಮ್ಮದಿಯಾಗಿಲ. ಜೊತೆಗೆ ಸಮಾಜಿಕ ಆರೋಗ್ಯ ಸರಿಯಾಗಿಲ್ಲ ಎಂದು ತಿಳಿಸಿದರು.

 ಜಾಗತಿಕ ಯುಗದಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ಜೊತೆಗೆ ಮೌಲ್ಯಾಧಾರಿತ ಶಿಕ್ಷಣದ ಅವಶ್ಯಕತೆ ಇದೆ ಮಕ್ಕಳಲ್ಲಿ ಪ್ರೀತಿ ವಾತ್ಸಲ್ಯ ಮಾನವೀಯ ಗುಣಗಳು ವೃದ್ಧಿಸುವ ನಿಟ್ಟಿನಲ್ಲಿ ಪೋಷಕರು ಮತ್ತು ಸಮಾಜ ಪ್ರಯತ್ನಿಸಬೇಕಾಗಿದೆ. ಇಂದಿನ ರಾಜಕೀಯ, ರಿಯಲ್‌ಎಸ್ಟೇಟ್‌ ಸಮಾಜ ಚಿಂತಕರಲ್ಲದ ಹಣವಂತರ ಕೈಯಲ್ಲಿ ಸಿಲುಕಿ ಸಮಾಜದ ಪೂರಕ ವಾತಾರಣಕ್ಕೆ ಮಾರಕವಾಗಿದೆ ಎಂದು ಹೇಳಿದರು.

ಪತ್ರಕರ್ತ ಸಿ.ಕೆ.ಮಹೇಂದ್ರ ಮಾತನಾಡಿ, ಪ್ರತಿಭೆ ಎನ್ನುವುದು ಯಾರ ಸ್ವತ್ತು ಅಲ್ಲ. ವಿದ್ಯಾರ್ಥಿಗಳ ಪರಿಶ್ರಮ ಅದಕ್ಕೆ ಪೂರಕವಾದ ಪರಿಸರ ಮತ್ತು ಪೋಷಕರ ಸಹಕಾರದಿಂದ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಪೋಷಕರು ಉತ್ತಮ ಪರಿಸರವನ್ನು ಮಕ್ಕಳಿಗೆ ನೀಡುವ ಮೂಲಕ ಉತ್ತಮ ಪ್ರಜೆ ಮಾಡುವ ಮೂಲಕ ದೇಶದ ಪ್ರಗತಿಗೆ ಸಹಕಾರಿಯಾಗಬೇಕು ಎಂದರು.

Advertisement

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಯಲ್ಲಿ ಶೇಕಡ 90 ಕ್ಕಿಂತ ಹೆಚ್ಚು ಅಂಕ ಪಡೆದ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಸೃಜನ ಲೇಖಕರ ಮತ್ತು ಕಲಾವಿದರ ಬಳಗದ ಅಧ್ಯಕ್ಷ ರಾ.ಸುರೇಶ್‌, ತಾಪಂ ಅಧ್ಯಕ್ಷ ಹೆಚ್‌.ಟಿ.ಮಂಜುನಾಥ್‌, ಎಪಿಎಂಸಿ ಅಧ್ಯಕ್ಷ ಕೃಷ್ಣೇಗೌಡ, ಕಾಂಗ್ರೆಸ್‌ ಮುಖಂಡ ಬಾಬು ಹನುಮಾನ್‌, ತಾಲೂಕು ರೈತ ಸಂಘದ ಮಾಜಿ ಅಧ್ಯಕ್ಷ ಸಿ.ಜೆ.ಕರ್ಮವೀರ, ಎಂಜಿನಿಯರ್‌ ಎಸ್‌.ವಿ.ಪ್ರಕಾಶ್‌, ನಿವೃತ್ತ ಶಿಕ್ಷಕ ಮಂಚೇಗೌಡ, ನಿವೃತ್ತ ಸಂಘದ ನೌಕರಕೃಷ್ಣೇಗೌಡ, ಮುಖಂಡ ಬಿ.ರಮೇಶ್‌, ಬಂಡಳ್ಳಿ ಕುಚೇಲ, ತಾಪಂ ಸದಸ್ಯೆ ಶಶಿಕಲಾ, ಕುಮಾರ್‌ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next