Advertisement

ಸೇವಾಭದ್ರತೆ ಒದಗಿಸಲು ಒತ್ತಾಯ

12:01 PM Nov 25, 2018 | |

ಬಸವನಬಾಗೇವಾಡಿ: ಹಾಸ್ಟೆಲ್‌ ಹೊರ ಸಂಪನ್ಮೂಲ ನೌಕರರಿಗೆ ಸೇವಾ ಭದ್ರತೆ ನೀಡುವಂತೆ ಆಗ್ರಹಿಸಿ ರಾಜ್ಯ ಸರಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

Advertisement

ನಾವು ಹತ್ತಾರು ವರ್ಷಗಳಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಸತಿ ಶಿಕ್ಷಣ ಸಂಘ ಸಂಸ್ಥೆಗಳ ಅಡಿಯಲ್ಲಿ ಇರುವ ಹಾಸ್ಟೆಲ್‌ಗ‌ಳಲ್ಲಿ ಅಡುಗೆ ಸಹಾಯಕರು ಸೇರಿದಂತೆ ಡಿ ವರ್ಗದ ಹುದ್ದೆಯಲ್ಲಿ ಅತ್ಯಂತ ಕಡಿಮೆ ಸಂಬಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ನಾವು ನೇರ ನೇಮಕಾತಿ ಕ್ರಮದಿಂದಾಗಿ ಕೆಲಸ ಕಳೆದುಕೊಂಡು  ಬೀದಿಪಾಲಾಗುವ ಆತಂಕದಲ್ಲಿದ್ದಾಗ ಜೂನ್‌ 28ರಂದು ಬೆಂಗಳೂರಿನಲ್ಲಿ ನಾವು ನಡೆಸಿದ ಧರಣಿಗೆ ಸ್ಪಂದಿಸಿ ಮರಳಿ
ಕೆಲಸಕ್ಕೆ ಸೇರಿಸಿಕೊಂಡು ಯಥಾಸ್ಥಿತಿ ಕಾಪಾಡುವ ಆದೇಶ ಹೊರಡಿಸಿ ಮಾನವೀಯತೆ ಮೆರೆದಿರುವಿರಿ ಎಂದು ಮುಖ್ಯಮಂತ್ರಿಗಳಿಗೆ ಬರೆದ ಮನವಿಯಲ್ಲಿ ತಿಳಿಸಲಾಗಿದೆ.

ಆದರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅ. 23ರಂದು ಅದೇಶ ಹೊರಡಿಸಿ 6 ತಿಂಗಳ ಅವಧಿಗೆ ಮಾತ್ರ ಕೆಲಸದಲ್ಲಿ ಮುಂದುವರೆಸಿ 6 ತಿಂಗಳ ಅವಧಿ ಮುಗಿದ ನಂತರ ನಮ್ಮನ್ನು ಬಿಡುಗಡೆಗೊಳಿಸುವಂತೆ ನಿರ್ದೇಶನ ನೀಡಿದ್ದರಿಂದ ನಾವು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದೇವೆ. ಮರಣ ಶಾಸನದಂತಿರುವ ಸುತ್ತೋಲೆಯನ್ನು ಹಿಂದಕ್ಕೆ ಪಡೆಯಬೇಕು. ನಿವೃತ್ತಿವರೆಗೆ ಕೆಲಸದಲ್ಲಿ ಮುಂದುವರಿಸಲು ಅವಕಾಶ ಮಾಡಿಕೊಡಬೇಕು ಎಂದು ನೌಕರರು ಆಗ್ರಹಸಿದರು.

ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಹುಲಗಪ್ಪ ಚಲವಾದಿ, ಕಾರ್ಯದರ್ಶಿ ಪಾವಡೆಪ್ಪ ಚಲವಾದಿ, ಲಕ್ಷ್ಮಣ ಮಸಳಿ, ಶರಣಗೌಡ ಅಂಗಡಿ, ಸುನೀಲ ಹೂಗಾರ, ಸುಧಿಧೀರ ಮಾಳಿ, ಡಿಎಸ್ಸೆಸ್‌ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಸುರೇಶ ಮಣ್ಣೂರ, ಅರವಿಂದ ಸಾಲವಾಡಗಿ, ಮಹಾಂತೇಶ ಸಾಸಬಾಳ, ಅಶೋಕ ಹಾಲ್ಯಾಳ, ಭೀಮು ಸನದಿ, ಬಸವರಾಜ ಪಟ್ಟಣಶೆಟ್ಟಿ, ಗೌರಕ್ಕ ಬೀಳೂರ, ರುಕ್ಮಿàಣಿ ಸುಬೇದಾರ, ತಿಪ್ಪವ್ವ ದೊಡಮನಿ, ಪಾತಿಮಾ ಚಪ್ಪರಬಂದ, ಮಹಾದೇವಿ ಮಾಲಗಾರ, ಶಂಕರ ಚಲವಾದಿ, ರಾಮಪ್ಪ ಚಲವಾದಿ ಇದ್ದರು.

ಮುದ್ದೇಬಿಹಾಳದಲ್ಲೂ ಪ್ರತಿಭಟನೆ ಮುದ್ದೇಬಿಹಾಳ: ಹಾಸ್ಟೆಲ್‌ ಹೊರ ಸಂಪನ್ಮೂಲ ನೌಕರರಿಗೆ ಮರಣ ಶಾಸನದಂತಿರುವ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆದೇಶ ಹಿಂಪಡೆದು ಮರಳಿ ಕೆಲಸಕ್ಕೆ ಸೇರಿಸಿಕೊಂಡು ಹೊರ ಸಂಪನ್ಮೂಲ ನೌಕರರಿಗೆ
ನಿವೃತ್ತಿವರೆಗೆ ಸೇವಾ ಭದ್ರತೆ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲೆ
ಹೊರ ಗುತ್ತಿಗೆ ನೌಕರರ ಸಂಘದ ತಾಲೂಕು ಘಟಕದ ಆಶ್ರಯದಲ್ಲಿ ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತ್ಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

Advertisement

ಹತ್ತಾರು ವರ್ಷಗಳಿಂದ ಹಿಂದುಳಿದ ವರ್ಗ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತ ಇಲಾಖೆ, ವಸತಿ ಶಿಕ್ಷಣ ಸಂಸ್ಥೆ ಅಡಿ ನಡೆಯುವ
ಹಾಸ್ಟೇಲ್‌ಗ‌ಳಲ್ಲಿ ಅಡುಗೆ ಸಹಾಯಕರೂ ಸೇರಿ ಡಿ ವರ್ಗದಲ್ಲಿ ಕೆಲಸ ಮಾಡುತ್ತಿದ್ದ ನೌಕರರನ್ನು ನೇರ ನೇಮಕಾತಿ ಪರಿಣಾಮ ಕೈ ಬಿಡಲಾಗಿತ್ತು.

ಈ ಬಗ್ಗೆ ಬೆಂಗಳೂರಿನಲ್ಲಿ ಜೂನ್‌ 27 ರಿಂದ 8 ದಿನ ಹಗಲು, ರಾತ್ರಿ ಪ್ರತಿಭಟನೆ ನಡೆಸಿದ ಪರಿಣಾಮ ಜುಲೈ 5ರಿಂದ ಮರಳಿ ಕೆಲಸಕ್ಕೆ
ಸೇರಿಸಿಕೊಂಡು ಯಥಾಸ್ಥಿತಿಗೆ ಸಿಎಂ ಆದೇಶಿಸಿ ಮಾನವೀಯತೆ ಮೆರೆದಿದ್ದರು. ಆದರೆ ಈಗ ಸೇವೆಯಿಂದ ಬಿಡುಗಡೆಗೊಳಿಸಲು
ಇಲಾಖೆ ಮುಂದಾಗಿರುವುದು ಸರ್ಕಾರಕ್ಕೆ, ಮುಖ್ಯಮಂತ್ರಿಗಳಿಗೆ ಕೆಟ್ಟ ಹೆಸರು ತರುವಂಥದ್ದಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಡಿ.ಬಿ. ಮುದೂರ, ಹುಲಗಪ್ಪ ಚಲವಾದಿ, ಮಲ್ಲಿಕಾರ್ಜುನ ಚಲವಾದಿ, ಮಹೇಶ ಓಲೇಕಾರ, ಲಾಳೇಮಶ್ಯಾಕ ಸುಗಂ ,
ಮಹೇಶ ಓಲೇಕಾರ, ತಾಲೂಕು ಘಟಕದ ಸದಸ್ಯರಾದ ಬಸವರಾಜ ಕೋಳೂರ, ಮಹಾದೇವಿ ಚಲವಾದಿ ಸೇರಿದಂತೆ ಹಲವರು
ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next