Advertisement

ಜನರಿಗೆ ಸಮರ್ಪಕ ನೀರು ಪೂರೈಸಲು ಒತ್ತಾಯ

10:10 AM Mar 01, 2022 | Team Udayavani |

ಚಿತ್ತಾಪುರ: ಪಟ್ಟಣದಲ್ಲಿ ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಸರಿಯಾದ ಸಮಯಕ್ಕೆ ಕುಡಿವ ನೀರು ಪೂರೈಕೆ ಮಾಡಬೇಕು ಎಂದು ಪುರಸಭೆ ಸದಸ್ಯರಾದ ನಾಗರಾಜ ಭಂಕಲಗಿ, ಶ್ರೀನಿವಾಸರೆಡ್ಡಿ, ರಮೇಶ ಬೊಮ್ಮನಳ್ಳಿ, ರಸೂಲ್‌ ಮುಸ್ತಫಾ, ಪ್ರಭು ಗಂಗಾಣಿ, ಕೋಟೇಶ್ವರ ರೇಷ್ಮಿ ಆಗ್ರಹಿಸಿದರು.

Advertisement

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ, ಪಟ್ಟಣದ ವಾರ್ಡ್‌ಗಳಲ್ಲಿ ಕುಡಿವ ನೀರು ಪೂರೈಕೆ ಮಾಡುವ ಸಿಬ್ಬಂದಿ ನಡುವೆ ಹೊಂದಾಣಿಕೆ ಮತ್ತು ಸಮನ್ವಯತೆ ಕೊರತೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದಾಗ ಅಧ್ಯಕ್ಷ ಚಂದ್ರಶೇಖರ ಕಾಶಿ ಮಧ್ಯಪ್ರವೇಶಿಸಿ ಕುಡಿಯುವ ನೀರು ಬಿಡುವ ಸಿಬ್ಬಂದಿ ಕರೆಯಿಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಒಂದು ಸಮಯ ನಿಗದಿಪಡಿಸಿ ಅದರಂತೆ ಸಮಯಕ್ಕೆ ಸರಿಯಾಗಿ ಕುಡಿವ ನೀರು ಪೂರೈಕೆ ಮಾಡಿ ಎಂದು ಸೂಚಿಸಿದರು.

ಆಯಾ ವಾರ್ಡ್‌ನ ಸಮಸ್ಯೆಗಳ ಕುರಿತು ಜನರು ಸದಸ್ಯರ ಗಮನಕ್ಕೆ ತರುತ್ತಾರೆ. ಆಗ ಸದಸ್ಯರು ಸಿಬ್ಬಂದಿ ಗಮನಕ್ಕೆ ತಂದಾಗ ಕೂಡಲೇ ಅದಕ್ಕೆ ಸ್ಪಂದಿಸಿ ಸಮಸ್ಯೆ ಪರಿಹರಿಸುವ ಕೆಲಸ ಮಾಡಬೇಕು ಎಂದು ಹೇಳಿದರು. ಪಟ್ಟಣದಲ್ಲಿ ಫ್ಲೆಕ್ಸ್‌ ಬ್ಯಾನರ್‌ಗಳು ಎಲ್ಲೆಂದರಲ್ಲಿ ಕಟ್ಟುವ ಹಾವಳಿ ಹೆಚ್ಚಾಗಿದೆ. ಆದ್ದರಿಂದ ಇದಕ್ಕೆ ಕಡಿವಾಣ ಹಾಕಲು ಪ್ರತಿ ಸ್ಕ್ವೆಯರ್‌ ಫೀಟ್‌ ಗೆ ದರ ನಿಗದಿಗೊಳಿಸಬೇಕು ಎಂದು ಸದಸ್ಯರು ಆಗ್ರಹಿಸಿದಾಗ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಮಾತನಾಡಿ, ಈಗಾಗಲೇ ಪ್ರಸ್ತಾವನೆ ಚರ್ಚೆಯಲ್ಲಿದೆ ಪುರಸಭೆಯಿಂದ ಒಂದು ದರ ನಿಗದಿಪಡಿಸಲಾಗುವುದು ಎಂದರು.

ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಮಾತನಾಡಿ, ಜನವರಿ ತಿಂಗಳಲ್ಲಿ ಆಸ್ತಿ ತೆರಿಗೆ 8,65,345 ರೂ, ವರ್ಗಾವಣೆ 2,39,150 ರೂ, ಜನನ ಮರಣ 1480 ರೂ, ಪೇನಲ್ಟಿ ಮತ್ತು ದಂಡ 2600 ರೂ, ಖಾತಾ ಪ್ರತಿಗಳ ಶುಲ್ಕ 10000 ರೂ, ಮುಕ್ತಿ ವಾಹನ ಶುಲ್ಕ 1200 ರೂ, ವ್ಯಾಪಾರ ತೆರಿಗೆ 15500 ರೂ, ನೀರಿನ ಕರ 260170 ರೂ, ಜಾಹೀರಾತು ತೆರಿಗೆ 1000 ರೂ, ಇತರೆ ಶುಲ್ಕಗಳು 4000 ರೂ. ಸೇರಿದಂತೆ ಒಟ್ಟು 1400445 ರೂ. ಆದಾಯದ ಮೊತ್ತ ಜಮೆವಾಗಿದೆ ಎಂದು ಮಾಹಿತಿ ನೀಡಿದರು.

ಸ್ಥಾಯಿ ಸಮಿತಿಗೆ ರಾಜೀನಾಮೆ

Advertisement

ಪುರಸಭೆ ಸದಸ್ಯೆ ಅನ್ನಪೂರ್ಣ ನಾಗಪ್ಪ ಕಲ್ಲಕ್‌ ಅವರು ಇಚೇಗೆ ಸ್ಥಾಯಿ ಸಮಿತಿಗೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಆದರೆ ಸೋಮವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿಗೆ ರಾಜೀನಾಮೆ ನೀಡಿರುವ ಪತ್ರ ಮುಖ್ಯಾಧಿಕಾರಿಗೆ ಸಲ್ಲಿಸಿದ್ದನ್ನು ಅಧ್ಯಕ್ಷ ಚಂದ್ರಶೇಖರ ಕಾಶಿ ಪ್ರಸ್ತಾಪಿಸಿ ಯಾಕೆ ರಾಜೀನಾಮೆ ನೀಡಿದ್ದೀರಿ ಸ್ವಲ್ಪ ವಿಚಾರ ಮಾಡಿ ಎಂದಾಗ ಇದಕ್ಕೆ ಎರಡು ದಿನಗಳ ಕಾಲವಕಾಶ ನೀಡಲು ನಿರ್ಧರಿಸಲಾಯಿತು. ರಾಜೀನಾಮೆ ನೀಡಿರುವ ವಿಷಯ ತಿಳಿಯುತ್ತಿದ್ದಂತೆ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವನ್ನುಂಟು ಮಾಡಿತ್ತು.

ಪುರಸಭೆ ಉಪಾಧ್ಯಕ್ಷೆ ಶ್ರುತಿ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷ ಗೋವಿಂದ ನಾಯಕ, ಸದಸ್ಯರಾದ ಪಾಶಾಮೀಯ್ನಾ ಖುರೇಷಿ, ಮಲ್ಲಿಕಾರ್ಜುನ ಕಾಳಗಿ, ಶೀಲಾ ಕಾಶಿ, ಸುಮಂಗಲಾ ಅಣ್ಣಾರಾವ್‌, ಕಾಶಿಬಾಯಿ ಮರೇಪ್ಪ, ಬೇಬಿ ಸುಭಾಷ, ಸಂತೋಷ ಚೌದರಿ, ಶಾಮ ಮೇಧಾ, ಖಾಜಾಬಿ ರಸೂಲ್‌ ಆಡಕಿ, ಪ್ರಭು ಗಂಗಾಣಿ, ಅತೀಯಾ ಬೇಗಂ, ಅನ್ನಪೂರ್ಣ ಕಲ್ಲಕ್‌, ಯಮನಪ್ಪ ಬೋಸಗಿ, ಶಶಿಕಾಂತ ಭಂಡಾರಿ, ಹನುಮಾನ ಪ್ರಸಾದ, ಅಧಿಕಾರಿಗಳಾದ ಲೋಹಿತ್‌ ಕಟ್ಟಿಮನಿ, ಜಯ ಭಾರತಿ, ಸಾಬಣ್ಣ ಸುಂಗಲಕರ್‌, ರಾಹುಲ್‌ ಕಾಂಬಳೆ, ವೆಂಕಟೇಶ, ರೇವಣಸಿದ್ದಪ್ಪ, ಸಿದ್ದಪ್ಪ ಸೋಮಪುರ್‌, ಕ್ರಾಂತಿದೇವಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next