Advertisement

ವೇತನ ಪಾವತಿಸಲು ಒತ್ತಾಯ

04:26 PM Dec 22, 2021 | Team Udayavani |

ಹಟ್ಟಿಚಿನ್ನದಗಣಿ: ಕಳೆದ 28 ತಿಂಗಳುಗಳಿಂದ ಬಾಕಿ ಇರುವ ವೇತನ ಪಾವತಿಸಬೇಕೆಂದು ಒತ್ತಾಯಿಸಿ ಪೌರ ಕಾರ್ಮಿಕರು ಹಾಗೂ ಸಿಬ್ಬಂದಿ ಹಟ್ಟಿ ಪ.ಪಂ ಮುಂದೆ ಪ್ರತಿಭಟನೆ ನಡೆಸಿದರು.

Advertisement

ಪ.ಪಂನಲ್ಲಿ 35 ಜನ ಪೌರ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಕಳೆದ 28 ತಿಂಗಳುಗಳಿಂದ ವೇತನ ಪಾವತಿಸಿಲ್ಲ. ಇಷ್ಟು ದಿನಗಳ ಕಾಲ ಸಾಲ ಮಾಡಿ ಕುಟುಂಬ ನಿರ್ವಹಣೆ ಮಾಡಿದ್ದೇವೆ. ಈಗ ಮಕ್ಕಳ ಶಿಕ್ಷಣಕ್ಕೆ, ಆಸ್ಪತ್ರೆ ಚಿಕಿತ್ಸೆಗೆ ಸೇರಿದಂತೆ ಕುಟುಂಬ ನಿರ್ವಹಣೆಗೆ ಬಿಡಿಗಾಸೂ ಇಲ್ಲದಂತಾಗಿದೆ. ಕುಟುಂಬ ನಿರ್ವಹಣೆಗೆ ತೊಂದರೆಯಾಗಿದೆ. ವೇತನ ಪಾವತಿಸುವಂತೆ ಪ.ಪಂ ಮುಖ್ಯಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮೇಲಧಿಕಾರಿಗಳು ಅನುಮೋದನೆ ನೀಡುವವರೆಗೂ ವೇತನ ಪಾವತಿಸುವುದಿಲ್ಲವೆಂದು ಹೇಳುತ್ತಾರೆ. ಕೊರೊನಾದಂತ ಸಂದರ್ಭದಲ್ಲೂ ಪ್ರಾಣವನ್ನು ಪಣಕ್ಕಿಟ್ಟು ದುಡಿದ ನಮಗೆ ವೇತನ ಪಾವತಿಸದಿರುವುದು ಬೇಸರ ತಂದಿದೆ ಎಂದು ಪ್ರತಿಭಟನಾನಿರತ ಪೌರಕಾರ್ಮಿಕರು ಹೇಳಿದರು.

ಈ ವೇಳೆ ಪೌರ ಕಾರ್ಮಿಕ ಸಿಬ್ಬಂದಿಗಳಾದ ಅಮರಪ್ಪ, ನೀಲಮ್ಮ, ಸುನೀಲ್‌, ಅಜೀಮ್‌ಪಾಶ, ಅಮ್ಜದ್‌, ಯಂಕಣ್ಣ, ಹನುಮಂತ, ತುಳಸಮ್ಮ, ಪದ್ಮಾ, ನಿಂಗಪ್ಪ, ದುರುಗಮ್ಮ, ಮಾಳಪ್ಪ, ಹನುಮಂತ, ಪರಶುರಾಮ, ವಿಜಯ, ಸಿದ್ದಲಿಂಗ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next