Advertisement

ಮೇಕೆದಾಟು ಯೋಜನೆಗೆ ಒತ್ತಾಯ

04:15 PM Jun 29, 2019 | Team Udayavani |

ರಾಮನಗರ: ಮೇಕೆದಾಟು ಯೋಜನೆಯ ಆರಂಭಕ್ಕೆ ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್‌ ನಾಗರಾಜ್‌ ಮತ್ತು ಸ್ಥಳೀಯ ಕನ್ನಡಪರ ಸಂಘಟನೆಗಳ ಪದಾಧಿಕಾರಿ ಗಳು ಬೆಂಗಳೂರು- ಮೈಸೂರು ಹೆದ್ದಾರಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

Advertisement

ನಗರದ ಐಜೂರು ವೃತ್ತದಲ್ಲಿ ಹೆದ್ದಾರಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ಮೇಕೆದಾಟು ಯೋಜನೆಗೆ ವಿಳಂಬ ಮಾಡುತ್ತಿರವ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ, ಯೋಜನೆಗೆ ವಿನಾಃಕಾರಣ ತಕರಾರು ಮಾಡುತ್ತಿರುವ ತಮಿಳುನಾಡು ಸರ್ಕಾರದ ವಿರುದ್ಧ ಘೋಷ ಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಯೋಜನೆ ಜಾರಿಗೆ ಸ್ಪಷ್ಟ ಅಭಿಪ್ರಾಯವಿಲ್ಲ: ಈ ವೇಳೆ ಮಾತನಾಡಿದ ವಾಟಾಳ್‌ ನಾಗರಾಜು, ಶೀಘ್ರದ ಲ್ಲೇ ಮೇಕದಾಟು ಯೋಜನೆ ಯನ್ನು ಆರಂಭಿಸಬೇಕು. ಪೊಲೀಸ್‌ ಸಿಬ್ಬಂದಿ ಗಾಗಿ ಔರಾದ್ಕಾರ್‌ ಸಮಿತಿ ಶಿಫಾರಸ್ಸು ಜಾರಿ ಮಾಡಬೇಕು. ಜಿಂದಾ ಲ್ ಕಂಪನಿ ಗೆ ನೀಡಿರುವ ಭೂಮಿ ಹಿಂಪಡೆಯ ಬೇಕು ಎಂದು ಆಗ್ರಹಿಸಿದರು.

ಮೇಕೆದಾಟು ಯೋಜನೆ ಜಾರಿ ಕುರಿತು ಸರ್ಕಾರ ಮಾತುಕತೆಯಲ್ಲಿಯೇ ಕಾಲಹರಣ ಮಾಡುತ್ತಿದೆ. ಕೇಂದ್ರ ಹಾಗೂ ತಮಿಳುನಾಡು ಸರ್ಕಾರದೊಂ ದಿಗೆ ಮಾತುಕತೆ ಮಾಡಲಾಗುತ್ತದೆ ಎಂದು ರಾಜ್ಯದ ನಾಯಕರು ಹೇಳುತ್ತಿ ದ್ದಾರೆ. ಆದರೆ, ರಾಜ್ಯ ಸರ್ಕಾರಕ್ಕೆ ಯೋಜನೆ ಜಾರಿ ಕುರಿತು ಸ್ಪಷ್ಟ ಅಭಿಪ್ರಾ ಯವಿಲ್ಲ. ಜು.28ರೊಳಗೆ ಯೋಜನೆಗೆ ಶುಂಕು ಸ್ಥಾಪನೆ ಮಾಡದಿದ್ದರೆ ಪ್ರತಿಭಟನೆಯನ್ನು ತೀವ್ರ ಗೊಳಿಸುವುದಾಗಿ ಎಚ್ಚರಿಸಿದರು.

ಬಯಲು ಸೀಮೆ ಜಿಲ್ಲೆಗಳಿಗೆ ಅನುಕೂಲ: ಮೇಕೆದಾಟು ಯೋಜನೆ ಅನುಷ್ಠಾನಗೊಂಡರೆ ರಾಮನಗರ, ಬೆಂಗಳೂರು ಕೋಲಾರ ಹಾಗೂ ತುಮಕೂರು ಸೇರಿದಂತೆ ಬಯಲು ಸೀಮೆ ಜಿಲ್ಲೆಗಳಿಗೆ ನೀರು ಕೊಡಬ ಹುದು. ಆದರೆ, ಯೋಜನೆಯ ವಿಚಾರ ದಲ್ಲಿ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂ ತ್ರಿಗಳಿಂದ ಹಿಡಿದು ಎಲ್ಲಾ ಸಚಿವರು ನಾಟಕ ಮಾಡುತ್ತಿದ್ದಾರೆ. ನಾಟಕ ಮಾಡುವುದನ್ನು ಬಿಟ್ಟು ಯೋಜನೆ ಆರಂಭಕ್ಕೆ ಮುಂದಾಗಿ ಎಂದರು.

Advertisement

ಕರ್ನಾಟಕದಿಂದ 25 ಮಂದಿ ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. ಆದರೆ, ಇವರಿಗೆ ಮೋದಿ ಎಂಬ ಪದ ಬಿಟ್ಟರೇ, ಕಾವೇರಿ, ಮೇಕೆದಾಟು, ಜಿಂದಾಲ್ ಕುರಿತು ಗೊತ್ತಿಲ್ಲ. ರಾಜ್ಯದ ಸಂಸದ್‌ ಸದಸ್ಯರೆಲ್ಲಾ ಸೇರಿ ಮಂಡ್ಯ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಕಾವೇರಿ ಕೊಳ್ಳದ ಜಲಾಶಯಗಳಿಂದ ನೀರು ಬಿಡುಗಡೆ ಮಾಡಿಸಬೇಕು ಎಂದು ಒತ್ತಾಯಿಸಿದರು.

ಜಲಾಶಯ ಮಾರಿಬಿಟ್ಟಿದ್ದಾರಾ?: ಮಂಡ್ಯದ ರೈತರು ಸತ್ಯಾಗ್ರಹ ನಡೆಸುತ್ತಿದ್ದಾರೆ. ಆದರೆ, ಸಿಎಂ ಕುಮಾರಸ್ವಾಮಿ ಕಾವೇರಿ ಪ್ರಾಧಿಕಾರದ ಮುಂದೆ ಪ್ರತಿಭಟನೆ ಮಾಡಿ ಎಂದು ಬಾಲಿಷ ಹೇಳಿಕೆ ನೀಡುತ್ತಿದ್ದಾರೆ. ಸಿಎಂ ಜಲಾಶಯಗಳನ್ನು ಪ್ರಾಧಿಕಾರಕ್ಕೆ ಮಾರಾಟ ಬಿಟ್ಟಿದ್ದಾರ? ಎಂದು ಪ್ರಶ್ನಿಸಿದರು. ರಾಜ್ಯಕ್ಕೆ ತೊಂದರೆಯಾ ಗುವ ಪ್ರಾಧಿಕಾರದ ತೀರ್ಮಾನವನ್ನು ಒಪ್ಪಲೇ ಬಾರದು. ಜಿಲ್ಲೆಯ ರೈತರಿಗೆ ನೀರು ಕೊಡಲೇ ಬೇಕು. ಇಲ್ಲಾವದರೇ ರಾಜಾದ್ಯಾಂತ ಹೋರಾಟ ಮಾಡಲಾ ಗುವುದು ಎಂದು ಎಚ್ಚರಿಕೆ ನೀಡಿದರು.

ಪೊಲೀಸರ ಬಗ್ಗೆ ಸರ್ಕಾರಕ್ಕೆ ಪ್ರಾಮಾಣಿಕತೆ ಇಲ್ಲ: ಪೊಲೀಸರ ನರಕದ ಜೀವನ ಸಾಗಿಸುತ್ತಿದ್ದಾರೆ. ಗೃಹ ರಕ್ಷಕ ದಳ ಚರಂಡಿಯಲ್ಲಿದ್ದಾರೆ. ಇವರ ಬಗ್ಗೆ ಕೇಳುವವರು ಗತಿಯಿಲ್ಲ. ಸರ್ಕಾರಕ್ಕೆ ಇವರ ಬಗ್ಗೆ ಕಾಳಜಿಯೂ ಇಲ್ಲ, ಪ್ರಾಮಾಣಿಕತೆಯೂ ಇಲ್ಲ. ಪೊಲೀಸರ ಪರವಾಗಿರುವ ಔರಾದ್ಕರ್‌ ವರದಿ ಜಾರಿ ಆಗಬೇಕು. ಇಲ್ಲವಾದರೇ, ರಾಜ್ಯ ಬಂದ್‌ಗೆ ಕರೆ ನೀಡುವುದಾಗಿ ಸರ್ಕಾರಕ್ಕೆ ಮತ್ತೂಂದು ಎಚ್ಚರಿಕೆ ನೀಡಿದರು.

ಜಿಂದಾಲ್ ಕಂಪನಿಗೆ ಸರ್ಕಾರದಿಂದ ಭೂಮಿ ಮಾರಾಟ: ಜಿಂದಾಲ್ ಕಂಪನಿಗೆ 1995ರಿಂದ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಭೂಮಿ ಮಾರಾಟ ಮಾಡಿದ್ದಾರೆ. ವಿಚಾರದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಕನ್ನಡ ಪರ ಸಂಘಟನೆ ಮೇಲೆ ನೋಟಿಸ್‌ ನೀಡಲಾಗಿದೆ. ಇದಕ್ಕೆ ಹೆದರದೇ, ಜುಲೈ 6ರಂದು ರಸ್ತೆ ತಡೆ ನಡೆಸಲಾಗುತ್ತದೆ. ಕಂಪನಿಗೆ 3666 ಎಕರೆ ಭೂಮಿ ನೀಡಬಾರದು ಎಂದು ಒತ್ತಾಯ ಮಾಡುವುದಾಗಿ ತಿಳಿಸಿದರು.ಪ್ರತಿಭಟನೆಯಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರಗತಿಗೆ ಮಧ್ಯಂತರ ಚುನಾವಣೆ ಅವಶ್ಯ:

ಸಿಎಂ ಅವರು ಗ್ರಾಮವಾಸ್ತವ್ಯ ಮಾಡುತ್ತಿರುವುದು ಅಭಿವೃದ್ಧಿಗಿಂತ ಮಧ್ಯಂತರ ಚುನಾವಣೆ ನಡೆಯದಂತೆ ತಡೆಯುವುದೇ ಮೂಲ ಉದ್ದೇಶ ಎಂದು ವಾಟಾಳ್‌ನಾಗರಾಜ್‌ ಅಭಿಪ್ರಾಯಪಟ್ಟರು. ಮೈತ್ರಿ ಸರ್ಕಾರದ ಮಂತ್ರಿಗಳು ಅಭಿವೃದ್ಧಿ ಹೊರತು ಪಡಿಸಿ ರಾಜಕೀವಯ ವಿಚಾರಗಳಲಿ ವೇಗ ತೋರಿಸುತ್ತಿದ್ದಾರೆ. ರಾಜ್ಯದ ಸಮಗ್ರ ಅಭಿವೃದ್ಧಿ ಆಗಬೇಕಾದರೆ ಮಧ್ಯಂತರ ಚುನಾವಣೆಯ ಅವಶ್ಯಕತೆ ಇದೆ. ಜೆಡಿಎಸ್‌, ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳನ್ನು ಜನ ತಿರಸ್ಕರಿಸಬೇಕು. ನಾಡು, ನುಡಿ, ಜಲಕ್ಕಾಗಿರುವ ಹೋರಾಟಗಾರರು, ಚಳವಳಿಗಾರರು ಶಾಸನ ಸಭೆಯನ್ನು ಪ್ರವೇಶಿಸಬೇಕಾಗಿದೆ ಎಂದರು.
Advertisement

Udayavani is now on Telegram. Click here to join our channel and stay updated with the latest news.

Next