Advertisement

ಮನೆಗೆ ಪರವಾನಗಿ ನೀಡಲು ಒತ್ತಾಯ

05:22 PM Feb 11, 2021 | Team Udayavani |

ಹುಮನಾಬಾದ: ಪುರಸಭೆ ವ್ಯಾಪ್ತಿಯಲ್ಲಿನ ಅನಧಿಕೃತ ಬಡಾವಣೆಗಳಲ್ಲಿ ಮನೆ ಕಟ್ಟಡ ಕಾಮಗಾರಿಗೆ ಪುರಸಭೆ ಅ ಧಿಕಾರಿಗಳು ಹಾಗೂ ಆಡಳಿತ ಮಂಡಳಿ ಅವಕಾಶ ಕಲ್ಪಿಸಬೇಕು. ಅಧಿಕಾರಿಗಳು ಜಪ್ತಿ ಮಾಡಿದ ಕಟ್ಟಡ ಕಾಮಗಾರಿ ವಸ್ತುಗಳನ್ನು ಮರಳಿ ನೀಡಬೇಕು ಎಂದು ಮನೆ ಮಾಲೀಕರು ಒತ್ತಾಯಿಸಿದ ಪ್ರಸಂಗ ನಡೆಯಿತು.

Advertisement

ಪಟ್ಟಣದ ಪುರಸಭೆಯಲ್ಲಿ 2021-22ನೇ ಸಾಲಿನ ಬಜೆಟ್‌ ಮಂಡನೆ ಕ್ರಿಯಾ ಯೋಜನೆ ತಯಾರಿಸುವ ನಿಟ್ಟಿನಲ್ಲಿ ಮಂಗಳವಾರ ಕರೆದ ಸಾರ್ವಜನಿಕರ ಅನಿಸಿಕೆ, ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಮನೆ ಮಾಲೀಕರು ಅಧಿ ಕಾರಿಗಳನ್ನು ಒತ್ತಾಯಿಸಿದರು. ಪುರಸಭೆಯಿಂದ ಅಧಿಕೃತಗೊಂಡ ಬಡಾವಣೆಗಳಲ್ಲಿ ಪರವಾನಗಿ ಲಭ್ಯವಾಗುತ್ತಿಲ್ಲ. ಈಗಾಗಲೇ ಹಣ ಸುರಿದು ಮನೆ ಕಟ್ಟಡ ಕಾಮಗಾರಿ ನಡೆಸಲಾಗಿದೆ. ಅರ್ಧ ಕಾಮಗಾರಿಯಾಗಿದ್ದು, ಪುರಸಭೆ ಸಿಬ್ಬಂದಿ ಬಂದು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಅಲ್ಲದೆ, ಕಾಮಗಾರಿ ವಿವಿಧ ವಸ್ತುಗಳು ಜಪ್ತಿ ಮಾಡಿಕೊಂಡು ಬಂದಿದ್ದಾರೆ.

ಕಟ್ಟಡ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದರು. ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಮಾತನಾಡಿ, ಈ ಕುರಿತು ಈಗಾಗಲೇ
ಮೇಲಧಿಕಾರಿಗಳಿಗೆ ಪತ್ರ ಬರೆದು ಮನವರಿಕೆ ಮಾಡುವ ಕೆಲಸ ಮಾಡಲಾಗಿದೆ ಎಂದರು. ಪುರಸಭೆ ಸದಸ್ಯ ಅಪ್ಸರ್‌ ಮಿಯ್ನಾ ಮಾತನಾಡಿ, ಮುಂದಿನ 15 ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಮಲ್ಲಿಕಾರ್ಜುನ ಶರ್ಮಾ ಮಾತನಾಡಿ, ವಾಂಜರಿ ಬಡಾವಣೆಯ ವಾರ್ಡ್‌ ನಂ.26ರಲ್ಲಿ ಸರ್ಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಂಡ ಕುಟುಂಬಗಳಿಗೆ ಪುರಸಭೆ ವತಿಯಿಂದ ಎನ್‌ಒಸಿ ನೀಡಬೇಕು. ಅಲ್ಲದೆ, 500ಕ್ಕೂ ಅಧಿಕ ನಳಗಳ ಸಂಪರ್ಕವಿದ್ದು, ಪುರಸಭೆ ತೆರಿಗೆ ಪಡೆದುಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಸದಸ್ಯ ಎಸ್‌.ಎ ಬಾಸಿದ್‌ ಮಾತನಾಡಿದರು. ಪಟ್ಟಣದ ವಿವಿಧಡೆ ಪುರಸಭೆ ವತಿಯಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಪ್ರವಾಸಿ ಮಂದಿರ ಹತ್ತಿರ ಅರ್ಧಕ್ಕೆ ನಿಂತಿರುವ ಸ್ವಾಗತ ಕೋರುವ ಕಮಾನು ನಿರ್ಮಾಣ ಮಾಡಬೇಕು ಎಂದು ಸದಸ್ಯ ರಮೇಶ ಕಲ್ಲೂರ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next