ಕುಷ್ಟಗಿ: ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ಮಾದಿಗ ದಂಡೋರ (ಮಾದಿಗ ಮೀಸಲಾತಿ) ತಾಲೂಕು ಸಮಿತಿಯಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಕಳೆದ ಜೂನ್ 2012ರಲ್ಲಿ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವಆಯೋಗದ ವರದಿ ರಾಜ್ಯ ಸರ್ಕಾರಕ್ಕೆಸಲ್ಲಿಸಲಾಗಿದೆ. ರಾಜ್ಯ ಸರ್ಕಾರ ಒಪ್ಪಿಸಿ 8 ವರ್ಷಗಳಾದರೂ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡದೇ ನಿರ್ಲಕ್ಷವಹಿಸಿವೆ. ಹಲವು ಹೋರಾಟ ಸತ್ಯಾಗ್ರಹ ಮಾಡಿದರೂ, ಈ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸಿವೆ.
ಮಾದಿಗ ಸಮಾಜದವರನ್ನು ಮತ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದ್ದಾರೆಯೇ ವಿನಃ ಆಯೋಗದ ವರದಿಯ ಬಗ್ಗೆ ದಿಟ್ಟ ನಿರ್ಣಯ ಕೈಗೊಳ್ಳದೇ ನಾಟಕೀಯವಾಗಿ ವರ್ತಿಸುತ್ತಿವೆ. ಅಲ್ಲದೇ ಸುಳ್ಳು ಆಶ್ವಾಸನೆಗಳು ನೀಡುತ್ತಾ ಬಂದಿದ್ದು, ನಮ್ಮ ಸಮಾಜಕ್ಕೆ ಮೋಸ ಮಾಡುತ್ತಾ ಬಂದಿದೆ. ರಾಜ್ಯದಲ್ಲಿ ಹಾಗೂ ಕೆಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಒಳ ಮೀಸಲಾತಿ ಬಗ್ಗೆ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ಬೇವಿನಕಟ್ಟಿ ಒತ್ತಾಯಿಸಿದರು.
ಇದನ್ನೂ ಓದಿ: ಬಾರದ ಬೆಳೆವಿಮೆ: ರೈತರ ಆಕ್ರೋಶ
ಅಧ್ಯಕ್ಷ ಸುರೇಶ ಇಂಡಿ, ರಮೇಶ ಬೂತಬಿಲ್ಲಿ, ವೆಂಕಟೇಶ ಗುನ್ನಾಳ, ಸುಖಮುನು ಹಿರೇಮನಿ, ನಾಗರಾಜ್ ಇಂಡಿ, ಬಾಲಪ್ಪ ಕಟ್ಟಿಮನಿ, ಪಾಂಡುರಂಗ ಕಟ್ಟಿಮನಿ, ಶಿವರಾಜ್ ಕಟ್ಟಿಮನಿ ಹಾಜರಿದ್ದರು.