Advertisement

ಪರಿಷ್ಕೃತ ವೇತನದಲ್ಲಿನ ಗೊಂದಲ ಸರಿಪಡಿಸಲು ಒತ್ತಾಯ  

05:13 PM Oct 08, 2018 | |

ಹಾವೇರಿ: ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಪ್ರಾಚಾರ್ಯರು ಹಾಗೂ ಬೋಧಕೇತರ ಸಿಬ್ಬಂದಿಯವರಿಗೆ ಆರನೇ ವೇತನ ಆಯೋಗದ ಪರಿಷ್ಕೃತ ವೇತನ ಶ್ರೇಣಿಗಳನ್ನು ನೀಡುವಲ್ಲಿ ಸೃಷ್ಟಿಯಾದ ಗೊಂದಲಗಳನ್ನು ನಿವಾರಿಸಬೇಕು ಎಂದು ಒತ್ತಾಯಿಸಿ ಜಿಲ್ಲೆಯ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರರ, ಉಪನ್ಯಾಸಕರ ಹಾಗೂ ನೌಕರರ ಸಂಘ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದೆ.

Advertisement

ಇತ್ತೀಚೆಗೆ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ನೌಕರರು ಜಿಲ್ಲಾಧಿಕಾರಿ ಡಾ| ವೆಂಕಟೇಶ್‌ ಅವರ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.

ರಾಜ್ಯದ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ 6ನೇ ವೇತನ ಆಯೋಗದ ಶಿಪಾರಸ್ಸಿನಂತೆ ಪಪೂ ನೌಕರರ ವೇತನ ತಾರತಮ್ಯ ಸರಿಪಡಿಸಲು ರಚಿಸಿದ ಕುಮಾರ ನಾಯಕ ವರದಿಯಂತೆ 01-06-2016ರಿಂದ ಒಂದು ವಾರ್ಷಿಕ ವೇತನ ಬಡ್ತಿಯನ್ನು ಹೊಸ ವೇತನ ಶ್ರೇಣಿ ಮೂಲ ವೇತನದಲ್ಲಿ ಸೇರಿಸಿ ಈಗಾಗಲೇ ಏಪ್ರಿಲ್‌ನಿಂದ ಅಗಷ್ಟ ತಿಂಗಳವರೆಗೆ; ಅಂದರೆ 5 ತಿಂಗಳ ಹೊಸ ವೇತನ ಶ್ರೇಣಿಯನ್ನು ನೀಡಲಾಗಿದೆ. 

ಆದರೆ, ಸರ್ಕಾರವು ಇತ್ತೀಚಿಗೆ ಮತ್ತೊಂದು ಆದೇಶ ಹೊರಡಿಸಿ ಈ ಹಿಂದೆ ಪಡೆದ ಒಂದು ವಾರ್ಷಿಕ ವೇತನ ಬಡ್ತಿಯನ್ನು ಮೂಲವೇತನದಲ್ಲಿ ಸೇರಿಸದೇ ಪ್ರತ್ಯೇಕವಾಗಿ ‘ವೈಯಕ್ತಿಕ ವೇತನ’ ಎಂದು ಎಚ್‌ಆರ್‌ ಎಂಎಸ್‌ನಲ್ಲಿ ನಮೂದಿಸಿ ವೇತನವನ್ನು ಬಿಡುಗಡೆ ಮಾಡಲು ಪಪೂ ಶಿಕ್ಷಣ ಇಲಾಖೆಯ ಎಲ್ಲ ಜಿಲ್ಲಾ ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಈ ರೀತಿ ಮಾಡುವುದರಿಂದ ಉಪನ್ಯಾಸಕರುಗಳಿಗೆ ಪ್ರಾಂಶುಪಾಲರುಗಳಿಗೆ ಆರ್ಥಿಕವಾಗಿ ನಷ್ಟವಾಗುತ್ತದೆ. ಆದ್ದರಿಂದ ಈ ಲೋಪದೋಷವನ್ನು ಸರಿಪಡಿಸಿ ಹಿಂದೆ ನೀಡಿದಂತೆ ಒಂದು ಹೆಚ್ಚುವರಿ ವೇತನ ಬಡ್ತಿಯನ್ನು ಪರಿಷ್ಕೃತ ಮೂಲವೇತನದಲ್ಲಿ ಸೇರ್ಪಡಿಸಿ ವೇತನ ಬಿಡುಗಡೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

6ನೇ ವೇತನ ಆಯೋಗದ ಪರಿಷ್ಕೃತ ವೇತನ ಶ್ರೇಣಿಗಳನ್ನು ಇದುವರೆಗೆ ಅಂದರೆ 6 ತಿಂಗಳು ಕಳೆದರೂ ಅನುದಾನಿತ ಸಿಬ್ಬಂದಿಗೆ ನೀಡಿಲ್ಲ. ಆದಷ್ಟು ಬೇಗನೇ 6ನೇ ವೇತನ ಆಯೋಗದ ಪರಿಷ್ಕೃತ ವೇತನ ಶ್ರೇಣಿ ಅನುದಾನಿತ ಪಪೂ ಕಾಲೇಜುಗಳ ಉಪನ್ಯಾಸಕರಿಗೆ ಪ್ರಾಚಾರ್ಯರಿಗೆ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ನೀಡಲು ಕ್ರಮ ಕೈಗೊಳ್ಳಬೇಕು. ಅನುದಾನಿತ ನೌಕರರಿಗೆ ವೇತನಾನುದಾನ ಸಮಯಕ್ಕೆ ಸರಿಯಾಗಿ ಬಿಡುಗಡೆಯಾಗುತ್ತಿಲ್ಲ. ಒಂದೊಂದು ಸಾರಿ ಎರಡೆರಡು ತಿಂಗಳಾದರೂ ವೇತನಾನುದಾನ ಬಿಡುಗಡೆಯಾಗದೆ, ನೌಕರರಿಗೆ ಬಹಳ ತೊಂದರೆಯಾಗುತ್ತಿದೆ. ಈ ಬಗ್ಗೆಯೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಅನುಕೂಲ ಮಾಡಿಕೊಡಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next