Advertisement

ಅತಿಥಿ ಉಪನ್ಯಾಸಕರ ಸೇವೆ ಮುಂದುವರಿಸಲು ಒತ್ತಾಯ

06:55 PM Sep 18, 2020 | Suhan S |

ಕಾರವಾರ: ಕರ್ನಾಟಕ ರಾಜ್ಯದ 429ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಅತಿಥಿ ಉಪನ್ಯಾಸಕರು ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಅವರ ಸೇವೆ ತಕ್ಷಣ ಮುಂದುವರಿಸುವಂತೆ ಉನ್ನತ ಶಿಕ್ಷಣ ಸಚಿವ ಆಶ್ವಥ್‌ ನಾರಾಯಣ ಅವರನ್ನು ಕಾಂಗ್ರೆಸ್‌ ಧುರೀಣ ಆರ್‌.ವಿ.ದೇಶಪಾಂಡೆ ಒತ್ತಾಯಿಸಿದ್ದಾರೆ.

Advertisement

ಕಡಿಮೆ ವೇತನ ಪಡೆದು ಉನ್ನತ ಶಿಕ್ಷಣದಲ್ಲಿ ಬೋಧನೆಗೆತೊಂದರೆಯಾಗದಂತೆ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಸೇವೆ ಅನುಪಮವಾದುದು. ಆದರೆ ಕೋವಿಡ್‌-19 ಹಿನ್ನೆಲೆಯಲ್ಲಿ ಕಳೆದ 24ಮಾರ್ಚ್‌ 2020ರಿಂದ ಅವರನ್ನು ಮರು ನೇಮಕ ಮಾಡಿಕೊಂಡಿಲ್ಲ. ಹೀಗಾಗಿ ಅವರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಅವರು ಅಭದ್ರತೆ ಮತ್ತು ಕೀಳರಿಮೆಯಿಂದ ನರಳುತ್ತಿದ್ದಾರೆ. ಈ ಹಿಂದೆ ಉನ್ನತ ಶಿಕ್ಷಣ ಸಚಿವನಾಗಿದ್ದ ಅವಧಿಯಲ್ಲಿ ನಾನು ಪ್ರತಿವರ್ಷ ಅತಿಥಿ ಶಿಕ್ಷಕರನ್ನು ಮುಂದುವರೆಸುವ ಪದ್ಧತಿ ಚಾಲ್ತಿಯಲ್ಲಿಟ್ಟು, ಅವರಿಗೆ ಅನುಕೂಲ ಮಾಡಲಾಗಿತ್ತು. ಹೀಗಾಗಿ ಕೂಡಲೇ ಪ್ರತಿವರ್ಷದಂತೆ ಅವರ ಸೇವೆ ಮುಂದುವರೆಸಿ, ಕಷ್ಟಗಳಿಗೆ ಸ್ಪಂದಿಸಿ ಎಂದು ಉನ್ನತ ಶಿಕ್ಷಣ ಸಚಿವರನ್ನು ವಿನಂತಿಸಿದ್ದಾರೆ.

ಯುಜಿಸಿ ನಿರ್ದೇಶನದಂತೆ ಸೆ. 1ನೇ ತಾರಿಖೀನಿಂದ ಆನ್‌ಲೈನ್‌ ಕ್ಲಾಸ್‌ ಆರಂಭವಾಗಿವೆ. ಶೀಘ್ರ ತರಗತಿಗಳನ್ನು ಪ್ರಾರಂಭಿಸುವ ಅನಿವಾರ್ಯತೆಯಿದೆ. ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿಪ್ರವೇಶ ಪಡೆದ ಲಕ್ಷಾಂತರ ಮಕ್ಕಳಿಗೆ ಅತಿಥಿ ಉಪನ್ಯಾಸಕರನ್ನು ಮುಂದುವರೆಸದೇ ಇರುವ ಕಾರಣದಿಂದ ವ್ಯವಸ್ಥಿತವಾಗಿ ಸಂಪೂರ್ಣವಾಗಿ ಬೋಧನೆ ನಡೆಯುತ್ತಿಲ್ಲ. ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರವೇಶಪಡೆದ ವಿದ್ಯಾರ್ಥಿಗಳಿಗೆ ಆತಂಕ ಆರಂಭವಾಗಿದೆ. ಆದ್ದರಿಂದ ಈ ವಿಷಯವನ್ನು ಪ್ರಾಧಾನ್ಯತೆ ಮೇರೆಗೆ ಪರಿಗಣಿಸಿ ತಕ್ಷಣವೇ ಅತಿಥಿ ಉಪನ್ಯಾಸಕರ ಸಂಕಷ್ಟಕ್ಕೆ ಹಾಗೂ ವಿದ್ಯಾರ್ಥಿಗಳ ಆತಂಕಕ್ಕೆ ಸ್ಪಂದಿಸಿ ಎಂದು ಸಚಿವರಿಗೆ ಪತ್ರ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next