Advertisement
ವಿದ್ಯಾರ್ಥಿಗಳ ಎಲ್ಲ ಶೈಕ್ಷಣಿಕ ಶುಲ್ಕಗಳನ್ನು ಆರು ತಿಂಗಳ ಕಾಲ ಮನ್ನಾ ಮಾಡಬೇಕು. ಆನ್‌ಲೈನ್ ಶಿಕ್ಷಣ ಕಡ್ಡಾಯ ಸರಿಯಾದ ಕ್ರಮವಲ್ಲ. ಪೋಷಕರಿಂದ ಹಣ ವಸೂಲಿ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿನ 12 ತರಗತಿವರೆಗೆ ಎಲ್ಲ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿಯೂಟ ನೀಡಬೇಕು. ಇಲ್ಲವೇ ಕೇರಳ ರಾಜ್ಯ ಸರ್ಕಾರದ ಮಾದರಿಯಲ್ಲಿ ಪ್ರತಿ ತಿಂಗಳು 10 ಅಕ್ಕಿ ಹಾಗೂ ಅಗತ್ಯ ಆಹಾರ ಪದಾರ್ಥಗಳನ್ನು 6 ತಿಂಗಳು ಕಾಲ ವಿದ್ಯಾರ್ಥಿಗಳ ಮನೆಗೆ ತಲುಪಿಸಬೇಕು ಎಂದುಮನವಿ ಮಾಡಿದರು.
ಮತ್ತು ಅತಿಥಿ ಉಪನ್ಯಾಸಕರು ಹಾಗೂ ಕಾರ್ಮಿಕರಿಗೆ ಬಾಕಿ ಸಂಬಳ ಬಿಡುಗಡೆ ಮಾಡಬೇಕು ಎಂದು ವಿನಂತಿಸಿದರು. ದೇಶಾದ್ಯಂತ ಯುವತಿಯರ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೋವಿಡ್-19 ಪರೀಕ್ಷೆ ಉಚಿತವಾಗಿ ಮಾಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆಗೆ ದರ ನಿಗದಿ ಮಾಡಿರುವುದು ಖಂಡನೀಯ. ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ವಿರೋ ಧಿಸಿ ಮತ್ತು ಪೆಟ್ರೋಲ್-ಡೀಸೆಲ್ ಗ್ಯಾಸ್‌ಗಳನ್ನು ಜಿಎಸ್‌ಟಿ ಪರಿ ಯೊಳಗೆ ತರುವಂತಾಗಬೇಕು. ಉದ್ಯೋಗ ಸೃಷ್ಟಿಗೆ ಅವಕಾಶ ನೀಡಬೇಕು. ಹೊಸ ಶಿಕ್ಷಣ ನೀತಿ-2019 ಜಾರಿಯಿಂದಾಗುವ ಶಿಕ್ಷಣದ ಖಾಸಗೀಕರಣ ಮತ್ತು ಕೇಸರೀಕರಣದ ಅಪಾಯಕಾರಿ ಅಂಶ ಅರಿತು ತಡೆಯುವ ಕೆಲಸ ಸರ್ಕಾರ ಮಾಡಲು ಮುಂದಾಗಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ, ಪ್ರಸನ್ನ ಕಡಕೋಳ ಸೇರಿದಂತೆ ಇತರರು ಇದ್ದರು.