Advertisement
ಜಾನುವಾರುಗಳಲ್ಲಿನ ರೋಗನಿರೋಧಕ ಶಕ್ತಿ ಹೆಚ್ಚಿಸಿ, ಅವುಗಳಿಗೆ ಯಾವುದೇ ಮಾರಕ ರೋಗಗಳು ಬಾರದಂತೆ ತಡೆಯುವ ನಿಟ್ಟಿನಲ್ಲಿ ಔಷಧ ಅಥವಾ ಲಸಿಕೆ ಅಭಿವೃದ್ಧಿಗಾಗಿ, ಮುಂಬರುವ ದಿನಗಳಲ್ಲಿ ಸರಕಾರ 13,343 ಕೋಟಿ ರೂ. ವೆಚ್ಚದ ಕಾರ್ಯಕ್ರಮ ಆರಂಭಿಸಲಿದೆ.
– ಮೇ 15ರಂದು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ ಘೋಷಣೆ.
Related Articles
Advertisement
– ದೇಶದಾದ್ಯಂತ ಇರುವ ಹಸುಗಳು, ಎಮ್ಮೆ, ಕುರಿ, ಮೇಕೆ ಮತ್ತು ಹಂದಿಗಳನ್ನು ರೋಗ ಮುಕ್ತಗೊಳಿಸುವ ಉದ್ದೇಶ.
– ರೋಗ ನಿರೋಧಕ ಕಾರ್ಯಕ್ರಮದ ಅನುಷ್ಠಾನ ಮತ್ತು ಲಸಿಕೆಗಾಗಿ ಸರಕಾರ ಹಣ ವೆಚ್ಚ ಮಾಡಲಿದೆ.
ಪ್ರಮುಖ ಪ್ರಾಣಿ ಲಸಿಕೆಗಳುಮೇಕೆಗಳಿಗೆ ವೈರಲ್ ಪ್ಲೇಗ್‌ನಿಂದ ರಕ್ಷಣೆ ನೀಡುವ ಪೆಸ್ಟ್ ಡೆಸ್ ಪೆಟಿಟ್ಸ್‌ರುಮಿನಂಟ್ಸ್ (ಪಿಪಿಆರ್), ಪ್ರ್ತೈಸೆಲ್ಲೋಸಿಸ್ ಕಾಯಿಲೆಯಿಂದ ರಕ್ಷಣೆ ಒದಗಿಸುವ ಬ್ರೂಸೆಲ್ಲಾ ಮತ್ತು ಕಾಲುಬಾಯಿ ಜ್ವರ ಹೊಡೆದೋಡಿಸುವ ಎಫ್‌ಎಂಡಿ ಲಸಿಕೆ. ಕಾರ್ಯಕ್ರಮಕ್ಕೆ ಸರಕಾರ ಮಾಡುತ್ತಿರುವ ವೆಚ್ಚ: 13,343 ಕೋಟಿ ರೂ. 53 ಕೋಟಿ ಜಾನುವಾರುಗಳಿಗೆ ರೋಗ ನಿರೋಧಕ ಲಸಿಕೆ ದೇಶದಲ್ಲಿರುವ ಹಸುಗಳ ಅಂದಾಜು ಸಂಖ್ಯೆ: 14.6 ಕೋಟಿ ದೇಶದಲ್ಲಿರುವ ಮೇಕೆಗಳ ಸಂಖ್ಯೆ: 14.9 ಕೋಟಿ ಭಾರತಾದ್ಯಂತ ಇರುವ ಎಮ್ಮೆಗಳು: 10 ಕೋಟಿ ಲಸಿಕೆ ನೀಡಬೇಕಿರುವ ಕುರಿಗಳ ಸಂಖ್ಯೆ: 7.4 ಕೋಟಿ ಈವರೆಗೆ ಲಸಿಕೆ ನೀಡಿರುವ ಹಸು, ಎಮ್ಮೆಗಳು: 1.5 ಕೋಟಿ ಬ್ರೂಸೆಲ್ಲಾ ಲಸಿಕೆಯ 4,13 ಕೋಟಿ ಡೋಸ್‌ಗೆ ಆಗುವ ವೆಚ್ಚ: 100ಕೋಟಿ ರೂ.