Advertisement
ಮೇ 18ರಂದು ನಡೆದ ಪೊಲೀಸ್ ಫೋನ್-ಇನ್ ಕಾರ್ಯಕ್ರಮದಲ್ಲಿ ವಾಹನಗಳಿಗೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಕೋನ್‌ಗಳನ್ನು ಅಳವಡಿಸುವ ಸಾರ್ವಜನಿಕರಿಂದ ಬೇಡಿಕೆಗಳು ಕೇಳಿಬಂದಿ ದ್ದವು. ಮುಖ್ಯವಾಗಿ ನಗರದ ಪಾಂಡೇಶ್ವರ ರೈಲ್ವೇಗೇಟ್ ಹಾಗೂ ಬಾವುಟಗುಡ್ಡೆ ಬಸ್‌ಬೇಗಳಲ್ಲಿ ಕೋನ್‌ಗಳ ಅಳವಡಿಕೆಗೆ ಒತ್ತಾಯಿಸಿದ್ದರು.
ಕೆಲವೊಂದು ಪ್ರದೇಶಗಳಲ್ಲಿ ಕೋನ್ ಗಳಿದ್ದರೂ ಅವುಗಳು ಹಳತಾಗಿದ್ದವು. ಇನ್ನು ಕೆಲವು ಪ್ರದೇಶಗಳಲ್ಲಿ ಹೊಸದಾಗಿ ಕೋನ್ ಗಳನ್ನು ಅಳವಡಿಸಲಾಗಿದೆ. ಹೊಸದಾಗಿ ಕಾಮಗಾರಿ ನಡೆದ ಪ್ರದೇಶಗಳಲ್ಲೂ ಕೋನ್‌ಗಳ ಅಳವಡಿಕೆಯಾಗಿದೆ. ರಾತ್ರಿ ವೇಳೆಯೂ ವಾಹನ ಚಾಲಕರು ಕೋನ್ ಗಳನ್ನು ಗುರುತಿಸುವ ನಿಟ್ಟಿನಲ್ಲಿ ರಿಫ್ಲೆಕ್ಟರ್ ಗಳೂ ಇವೆ. ಅಡ್ಡಾದಿಡ್ಡಿ ವಾಹನ ನಿಲುಗಡೆ
ಪಾಂಡೇಶ್ವರ ರೈಲ್ವೇಗೇಟ್ ಬಳಿ ಎರಡೂ ಬದಿಗಳಲ್ಲೂ ಕೋನ್‌ಗಳ ಅಳವಡಿಕೆಯಾಗಿದೆ. ಇಲ್ಲಿ ರೈಲು ಸಾಗುವ ಸಂದರ್ಭದಲ್ಲಿ ರೈಲ್ವೇ ಗೇಟ್ ಹಾಕಿ ವಾಹನ ಸಂಚಾರ ನಿಲ್ಲಿಸಲಾಗುತ್ತದೆ. ಆಗ ವಾಹನ ಚಾಲಕರು ವಿರುದ್ಧ ದಿಕ್ಕಿನಲ್ಲಿ ವಾಹನ ಸಾಗುವ ರಸ್ತೆಯಲ್ಲೂ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸುತ್ತಾರೆ. ಗೇಟ್ ತೆಗೆದ ತತ್‌ಕ್ಷಣ ಎಲ್ಲ ವಾಹನಗಳು ಏಕಕಾಲದಲ್ಲೇ ನುಗ್ಗುವುದರಿಂದ ಅನಗತ್ಯ ಟ್ರಾಫಿಕ್ ಜಾಮ್ ಕೂಡ ಸಂಭವಿಸುತ್ತದೆ.
Related Articles
Advertisement
ಇದರ ಜತೆಗೆ ಇತರ ಕಡೆಗಳಲ್ಲಿ ಪ್ರಯಾಣಿಕರನ್ನು ಪಿಕ್‌ಅಪ್ ಮಾಡುವ ಬಸ್‌ಗಳು ನಿಗದಿತ ಬಸ್ ಬೇನಲ್ಲೇ ನಿಲ್ಲಿಸುವಂತೆಯೂ ಕೋನ್ ಗಳ ಅಳವಡಿಕೆಯಾಗಿದೆ. ಡಿವೈಡರ್ ಗಳು, ಪಾದಚಾರಿಗಳಿಗೆ ನಡೆದಾಡಲು ಅನುಕೂಲವಾಗುವ ನಿಟ್ಟಿನಲ್ಲೂ ಕೋನ್ ಅಳವಡಿಕೆಯಾಗಿದೆ.
ವಿವಿಧೆಡೆ ಅಳವಡಿಕೆ ರವಿವಾರ ಪೊಲೀಸರು ನಗರದ ಹಂಪನಕಟ್ಟೆ, ಆರ್‌ಟಿಒ ಕಚೇರಿ ಬಳಿ, ಪಾಂಡೇಶ್ವರ ರೈಲ್ವೇ ಗೇಟ್, ಕಾಶಿಯಾ ರಸ್ತೆ, ಜಿಎಚ್‌ಎಸ್ ರಸ್ತೆ, ಕರಾವಳಿ ವೃತ್ತ ಮೊದಲಾದ ಪ್ರದೇಶಗಳಲ್ಲಿ ಫೈಬರ್ ಕೋನ್ ಗಳನ್ನು ಅಳವಡಿಸಿದ್ದಾರೆ. ರವಿವಾರ ನಗರದಲ್ಲಿ ವಾಹನಗಳ ಸಂಚಾರ ಕಡಿಮೆ ಇರುವ ಹಿನ್ನೆಲೆಯಲ್ಲಿ ಕೋನ್‌ಗಳ ಅಳವಡಿಕೆಗೆ ಅನುಕೂಲವಾಗಿತ್ತು.