ಹುಣಸೂರು: ಇತ್ತೀಚಿನ ದಿನಗಳಲ್ಲಿ ಭತ್ತದ ಬೆಳೆಗೆ ಬೆಂಕಿ ರೋಗ, ಎಲೆ ಸುರುಳಿ ಹುಳಗಳು ಕಾಣಿಸಿಕೊಳ್ಳುತ್ತಿದ್ದು ಇವುಗಳು ಭತ್ತದ ಬೆಳೆಯನ್ನು ನಾಶ ಮಾಡುತ್ತಿರುವುದರಿಂದ ರೈತರು ಸಂಕಷ್ಟಗೀಡಾಗುತ್ತಿದ್ದಾರೆ. ಇದಕೆಕ ಪರಿಹಾರವಾಗಿ ಬಣಕಲ್ ನ ರೈತ ಸಂಪರ್ಕ ಕೇಂದ್ರ ಕಚೇರಿ ಪ್ರಕಟಣೆಯೊಂದನ್ನು ನೀಡಿದೆ.
ಬೆಂಕಿ ರೋಗ: ಎಲೆಗಳ ಮೇಲೆ ಕಂದು ಬಣ್ಣದ ಚುಕ್ಕೆಗಳು ಕಾಣುತ್ತವೆ. ಇಂತಹ ಚುಕ್ಕೆಗಳ ಮಧ್ಯಭಾಗವೂ ನಂತರದ ದಿನಗಳಲ್ಲಿ ಬೂದಿ ಬಣ್ಣಕ್ಕೆ ತಿರುಗುತ್ತದೆ. ಹಾಗೂ ಇಂತಹ ಹಲವಾರು ಚುಕ್ಕೆಗಳು ಸೇರಿ ಎಲೆಗಳು ಸುಟ್ಟಂತೆ ಕಾಣುತ್ತವೆ.
ಬೆಂಕಿ ರೋಗದ ಹತೋಟಿಗೆ ಬರಲು TRICYCLAZOLE ಶಿಲೀಂದ್ರ ನಾಶಕವನ್ನು 0.6 ಗ್ರಾಂ ಅನ್ನು ಪ್ರತಿ ಲೀಟರಿಗೆ ಬೆರೆಸಿ ಸಿಂಪರಣೆ ಮಾಡಬೇಕು.
ಎಲೆ ಸುರುಳಿ ಹುಳು: ಮರಿ ಹುಳುಗಳು ಎಲೆಗಳನ್ನು ಸುರುಳಿ ಮಾಡಿ ಅದರೊಳಗೆ ಇದ್ದು ಹಸಿರು ಭಾಗವನ್ನು ಕೆರೆದು ತಿನ್ನುವುದರಿಂದ ಎಲೆಗಳ ಮೇಲೆ ಬಿಳಿ ಪಟ್ಟಿಗಳು ಕಾಣುತ್ತವೆ.
ಈ ಹುಳುಗಳನ್ನು ಹತೋಟಿಗೆ ತರಲು ಕ್ಲೋರೋಫೈರಿಪಾಸ್ ಕೀಟನಾಶಕವನ್ನು 2 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು.
Tricyclazole ಶಿಲೀಂದ್ರ ನಾಶಕ ಹಾಗೂ ಕ್ಲೋರೋಫೈರಿಫಾಸ್ ಕೀಟನಾಶಕ ಬಣಕಲ್ ನ ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಬಣಕಲ್ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವೆಂಕಟೇಶ್ ಎಂ ಆರ್ ವಿನಂತಿಸಿಕೊಂಡಿದ್ದಾರೆ.