Advertisement

ಲಿಂಗಾಕರ್ಷಕ ಬಲೆಯಿಂದ ಕೀಟಬಾಧೆ ನಿರ್ವಹಣೆ ಸಾಧ್ಯ

04:35 PM Mar 15, 2022 | Team Udayavani |

ಬೀದರ: ಪರಿಸರ ಸ್ನೇಹಿ ತಂತ್ರಜ್ಞಾನಗಳಾದ ಲಿಂಗಾಕರ್ಷಕ ಬಲೆಗಳನ್ನು ಬಳಸುವುದರಿಂದ ಕೀಟನಾಶಕ ಕಡಿಮೆ ಬಳಸಬಹುದು ಹಾಗೂ ಕೀಟ ಬಾಧೆ ಸಮಗ್ರವಾಗಿ ನಿರ್ವಹಿಸಲು ಸಾಧ್ಯ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಡೀನ್‌ ಡಾ| ಎಸ್‌.ವಿ. ಪಾಟೀಲ ತಿಳಿಸಿದರು.

Advertisement

ಬೇಮಳಖೇಡದ ರಾಘವೇಂದ್ರ ಪಟ್ನೆ ಅವರ ಮಾವಿನ ತೋಟದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿವಿ ಬಾಗಲಕೋಟೆ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ಆಶ್ರಯದಲ್ಲಿ ನಡೆದ ಮಾವಿನಲ್ಲಿ ಹಣ್ಣಿನ ನೊಣ ಬಾಧೆ ಹಾಗೂ ಮಿಡಿಕಾಯಿ ಉದುರುವಿಕೆ ನಿರ್ವಹಣೆ ಕುರಿತು ತಿಳಿವಳಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬದಲಾಗುತ್ತಿರುವ ವಾತಾವರಣದಲ್ಲಿ ಬಹು ಬೆಳೆ ಪದ್ಧತಿ ಹಾಗೂ ಅಂತರ ಬೆಳೆಗಳನ್ನು ಬೆಳೆಯುವುದರಿಂದ ಹೆಚ್ಚಿನ ಆದಾಯ ಪಡೆಯಬಹುದು ಎಂದರು.

ಪ್ರಾಧ್ಯಾಪಕ ಡಾ| ಪ್ರವೀಣ ಜೋಳಗಿಕರ, ಡಾ| ಪ್ರಶಾಂತ, ಡಾ| ಶ್ರೀನಿವಾಸ್‌ ಎನ್‌., ಡಾ| ಆನಂದ ಪಾಟೀಲ, ಡಾ| ರಾಜಕುಮಾರ ಎಂ., ಡಾ| ಶಶಿಕಲಾ ರುಳಿ ಮಾವಿನಲ್ಲಿ ಮಿಡಿ ಹಣ್ಣಿನ ಹಾಗೂ ಹಣ್ಣು ನೊಣದ ನಿರ್ವಹಣೆ, ಕಬ್ಬಿನ ಬೇಸಾಯದ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಮೂಲಕ ಹತೋಟಿ ಕ್ರಮಗಳಾದ ಹಣ್ಣಿನ ಮಿಡಿಕಾಯಿ ಉದುರುವುದನ್ನು ತಡೆಗಟ್ಟಲು ಸಸ್ಯಚೋದಕವಾದ ಪ್ಲಾನೋಫಿಕ್ಸ್‌ 0.5 ಮಿ.ಲೀ. ನೀರಿಗೆ ಸೇರಿಸಿ ಸಿಂಪಡಣೆ ಮಾಡಬೇಕು, ಹಣ್ಣಿನ ನೊಣ ಬಾಧೆ ತಡೆಗಟ್ಟಲು ಪ್ರತಿ ಎಕರೆಗೆ 4-5 ಲಿಂಗಾಕರ್ಷಕ ಬಲೆ ಹಾಕುವುದರಿಂದ ನೊಣದ ಬಾಧೆ ನಿರ್ವಹಣೆ ಮಾಡಲು ಸೂಚಿಸಿದರು.

ಈ ವೇಳೆ ಗ್ರಾಪಂ ಉಪಾಧ್ಯಕ್ಷ ವಿನೋದಕುಮಾರ ಗುಮ್ಮೆದ್‌, ಸದಸ್ಯ ಲಕ್ಷ್ಮೀಕಾಂತ ಬೀರನಳ್ಳಿ, ರಾಘವೇಂದ್ರ ಪಟ್ನೆ ಡಾ| ಮುಹಮ್ಮದ ಫಾರೂಕ್‌, ನೀಲಕಂಠ ರೆಡ್ಡಿ ಇದ್ದರು. ಮಹಾವಿದ್ಯಾಲಯದ ವಿಸ್ತರಣಾ ಮುಂದಾಳು ಡಾ| ಶ್ರೀನಿವಾಸ ಎನ್‌. ಪ್ರಾಸ್ತಾವಿಕ ಮಾತನಾಡಿದರು. ಡಾ| ಆನಂದ ಪಾಟೀಲ ಸ್ವಾಗತಿಸಿದರು. ಡಾ| ಪ್ರಶಾಂತ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next