Advertisement

ಇತಿಹಾಸ ಅರಿಯಲು ಶಾಸನಗಳು ಪೂರಕ: ಲೋಕಣ್ಣ

05:28 PM Mar 24, 2022 | Team Udayavani |

ಬಾದಾಮಿ: ಬಾದಾಮಿಯಲ್ಲಿ ಚಾಲುಕ್ಯ ಅರಸರ ಶಾಸನಗಳು ಆಗಿನ ಕಾಲದ ಸಂಸ್ಕೃತಿ ಮತ್ತು ಆಗಿನ ಕಾಲದ ಸಾಮಾಜಿಕ, ರಾಜಕೀಯ, ಜೀವನವನ್ನು ತಿಳಿದುಕೊಳ್ಳಲು ನಮಗೆ ಸಹಾಯಕವಾಗಿವೆ ಎಂದು ನಗರದ ಕಾಳಿದಾಸ ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಡಾ| ಲೋಕಣ್ಣ ಭಜಂತ್ರಿ ಹೇಳಿದರು.

Advertisement

ನಗರದ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವೇದಮೂರ್ತಿ ಮಲ್ಲಯ್ಯ ಹಿರೇಮಠ, ವೀರಮ್ಮ ಮಲ್ಲಯ್ಯ ಹಿರೇಮಠ, ಅನಸೂಯಾ ವೈ.ಎನ್‌, ಪೊಲೀಸ್‌ ನಾಯಿ ಗದಗ ಕುರಿತ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ “ಬಾದಾಮಿ ಶಾಸನಗಳ ಸಾಂಸ್ಕೃತಿಕ ವಿಶ್ಲೇಷಣೆ’ ಎಂಬ ವಿಷಯ ಕುರಿತು ಅವರು ಉಪನ್ಯಾಸ ನೀಡಿ ಮಾತನಾಡಿದರು.

ಚಾಲುಕ್ಯರ ಕಾಲದ ಅರಸರು ಸರ್ವಧರ್ಮ ಸಮನ್ವಯ ಹೊಂದಿದ್ದರೆಂದು ತಿಳಿದುಬಂದಿದ್ದೆ, ನಮಗೆ ಶಾಸನ ಹಾಗೂ ಗುಡಿಗುಂಡಾರಗಳಿಂದ. ಪಟ್ಟದಕಲ್ಲು ಬಾದಾಮಿ ಮಹಾಕೂಟದಲ್ಲಿ ತಯಾರಿಸಿದ ದೇವಾಲಯಗಳು ಆಗಿನ ಕಾಲದ ಸಾಂಸ್ಕೃತಿಕ ಉತ್ಸವ ಪರಂಪರೆಯನ್ನು ಎತ್ತಿತೋರಿಸುತ್ತದೆ ಎಂದು ಹೇಳಿದರು. ನಿಕಟಪೂರ್ವ ತಾಲೂಕು ಕಸಾಪ ಅಧ್ಯಕ್ಷ ಬಿ.ಸಿ.ಪ್ಯಾಟಿ ಜಾನಪದ ಸಾಹಿತ್ಯ ವಿಶೇಷಣೆ ಕುರಿತು ಮಾತನಾಡಿ, ಜೀವನದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಜಾನಪದ ಸಾಹಿತ್ಯ ಒಂದು ಅಪಾರವಾದ ಕೊಡುಗೆಯನ್ನು ಕೊಟ್ಟಿದೆ.

ಹಳ್ಳಿಗಳಲ್ಲಿ ಜನರಿಂದ ಜನರಿಗೆ ಬಂದಂತ ಸಂಸ್ಕೃತಿ ಬಹಳ ಉತ್ತಮ ಪರಂಪರೆಯನ್ನು ಬೆಳೆಸಿಕೊಂಡು ಬಂದಿದೆ. ಹಲವಾರು ಜಾನಪದ ಗೀತೆಗಳನ್ನು ಹಾಡುತ್ತಾ, ಅದರ ಒಳಾರ್ಥವನ್ನು ಜನರಿಗೆ ವಿವರಿಸುತ್ತಾ ಹೋದರು. ಜನಪದ ಸಾಹಿತ್ಯಕ್ಕೆ ಯಾವುದೇ ರೀತಿಯ ಸಾಕ್ಷರತೆ ಅವಶ್ಯಕತೆಯಿರುವುದಿಲ್ಲ. ಬಹಳಷ್ಟು ಜನಪದ ಸಾಹಿತಿಗಳು ಅನಕ್ಷರಸ್ಥರಾಗಿ ಅತ್ಯುತ್ತಮ ಸಾಹಿತ್ಯ  ಕೃಷಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಸ್ಥಳೀಯ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಎಸ್‌.ಎಂ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಸಾಪ ಅಧ್ಯಕ್ಷ ಬಿ.ಎಫ್‌. ಹೊರಕೇರಿ, ಚೊಳಚಗುಡ್ಡ ಸಮೂಹ ಸಂಪನ್ಮೂಲ ವ್ಯಕ್ತಿ ಆರ್‌.ಎಂ. ಸಾರವಾಡ, ಹೊಸೂರ ಸಮೂಹ ಸಂಪನ್ಮೂಲ ವ್ಯಕ್ತಿ ಪಿ.ಟಿ. ನೀಲಗುಂದ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next