Advertisement

ಬಸ್ರೂರು ದೇಗುಲದ ಪ್ರಭಾವಳಿಯಲ್ಲಿ ಶಾಸನ ಪತ್ತೆ

05:21 PM Feb 20, 2024 | Team Udayavani |

ಬಸ್ರೂರು: ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುರಾತನ ಕಂಚಿನ ಪ್ರಭಾವಳಿಯಲ್ಲಿ ಶಾಸನ ಪತ್ತೆಯಾಗಿದೆ. ಪ್ರಭಾವಳಿಯ ಹಿಂಭಾಗದಲ್ಲಿ ಮೇಲೆ ಹಾಗೂ ಕೆಳಗಿನ ಭಾಗದಲ್ಲಿಶಾಸನ ಇರುವುದು ಕಂಡು ಬಂದಿದೆ. ಶ್ರೀ ಮಹಾಲಿಂಗೇಶ್ವರನ ಸನ್ನಿಧಿಯನ್ನು ನಖರೇಶ್ವರ ಎಂದು ಸಂಬೋಧಿಸಲಾಗಿದೆ. ನಖರ ವ್ಯಾಪಾರಿ ಸಂಘ ಬಸರೂರು ಮತ್ತು ದೇವಾಲಯಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿರುವುದು ತಿಳಿದು ಬಂದಿದೆ.

Advertisement

ಕ್ರಿ.ಶ. 1513-1545ರ ಕಾಲಮಾನದಲ್ಲಿ ತುಳು ರಾಜ್ಯವನ್ನು ಆಳುತ್ತಿದ್ದುದು ಸದಾಶಿವ ನಾಯಕರು ಎನ್ನಲಾಗಿದ್ದು, ಕೆಳದಿಯ ಸದಾಶಿವ ನಾಯಕರು ಹಲವಾರು ಯುದ್ಧಗಳಲ್ಲಿ ತೋರಿಸಿದ ಸಾಹಸದಿಂದಾಗಿ ಅವರಿಗೆ ರಾಯರು ರಾಜ್ಯಪಾಲರ ಹುದ್ದೆ ನೀಡಿ ನಾಯಕ ಹುದ್ದೆ ನೀಡಿದ್ದರು. ಅಂದು ಸದಾಶಿವ ನಾಯಕರು ಬಾರಕೂರು ಮತ್ತು ಮಂಗಳೂರು ರಾಜ್ಯದ ಅಧಿಕಾರ ಹೊಂದಿದ್ದರು ಎಂದು ತಿಳಿದು ಬರುತ್ತದೆ. ತಮ್ಮ ಇಬ್ಬರು ಮಕ್ಕಳಿಗೆ ದೊಡ್ಡ ಸಂಕಣ್ಣ ಮತ್ತು ಚಿಕ್ಕ ಸಂಕಣ್ಣ ಎಂದು ನಾಮಕರಣ ಮಾಡಿರುತ್ತಾರೆ.

ಮಕ್ಕಳು ತಮ್ಮ ಅವಧಿಯಲ್ಲಿ ತಂದೆಯ ಹೆಸರಿನಲ್ಲಿ ಈ ಶಾಸನ ಬರೆಸಿರುವುದು ಕಂಡು ಬರುತ್ತದೆ. ಬಸ್ರೂರಿನಲ್ಲಿ ದೊರೆತ ಪ್ರಭಾವಳಿ ಶಾಸನ ಹೊಸ ಅಧ್ಯಯನಕ್ಕೆ ಸಾಕಷ್ಟು ಅವಕಾಶ ನೀಡಿದೆ. ಐತಿಹಾಸಿಕ ತಾಳೀಕೋಟೆ ಯುದ್ಧದ ತರುವಾಯ ಕೆಳದಿಯ ಸಾಮ್ರಾಜ್ಯ ಗೋವೆಯಿಂದ ಕೇರಳದ ನೀಲೇಶ್ವರದವರೆಗೂ ವಿಸ್ತರಿಸಿತ್ತು ಎಂದೂ ತಿಳಿದುಬರುತ್ತದೆ.

ಈ ಶಾಸನಗಳನ್ನು ಪತ್ತೆ ಹಚ್ಚುವಲ್ಲಿ ಭಾರತೀಯ ಇತಿಹಾಸ ಸಂಕಲನ ಸಮಿತಿಯ ಜಿಲ್ಲಾ ಸಂಚಾಲಕ ಪ್ರದೀಪ್‌ ಕುಮಾರ್‌ ಅವರಿಗೆ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಅವರು ಮಾರ್ಗದರ್ಶನ ನೀಡಿದ್ದು, ಬಸ್ರೂರು ಗ್ರಾ.ಪಂ. ಸದಸ್ಯ ಮಹೇಶ್‌ ಮೆಂಡನ್‌ ಸಹಕರಿಸಿದ್ದಾರೆ. ಅಧ್ಯಯನಕ್ಕೆ ಭಾರತೀಯ ಇತಿಹಾಸ ಸಂಕಲನ ಸಮಿತಿಯ ರಾಜ್ಯ ಸದಸ್ಯ ಅಜಯ ಕುಮಾರ್‌ ಶರ್ಮ ಮತ್ತು ಶ್ರೀಪತಿ ಆಚಾರ್ಯ ಸಹಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next