ನವದೆಹಲಿ: ಗುಜರಿ ಸೇರುವ ಅಪಾಯದಲ್ಲಿದ್ದ, ಜಗತ್ತಿನಲ್ಲೇ “ಸುದೀರ್ಘ ಸೇವೆ ಸಲ್ಲಿಸಿದ ಯುದ್ಧ ನೌಕೆ’ ಖ್ಯಾತಿಯ ಐಎನ್ಎಸ್ ವಿರಾಟ್ ರಕ್ಷಣೆಗೆ ಸುಪ್ರೀಂ ಕೋರ್ಟ್ ಧ್ವನಿಯೆತ್ತಿದೆ.
ನಿವೃತ್ತ ಯುದ್ಧ ನೌಕೆಯ ಭಗ್ನಗೊಳಿಸುವ ಕಾರ್ಯಕ್ಕೆ ಸುಪ್ರೀಂ ಮಧ್ಯಂತರ ತಡೆ ನೀಡಿದ್ದು, ಈ ಸಂಬಂಧ ಶ್ರೀರಾಮ್ ಗ್ರೂಪ್‌ಗೆ ನೋಟಿಸ್ ಜಾರಿ ಮಾಡಿದೆ.
ಐಎನ್‌ಎಸ್ ವಿರಾಟ್ ಅನ್ನು ಮ್ಯೂಸಿಯಂ ಮತ್ತು ಬಹುಕ್ರಿಯಾತ್ಮಕ ಸಾಹಸ ಕೇಂದ್ರವಾಗಿ ಪರಿವರ್ತಿಸಲು ಅನುಮತಿ ಕೋರಿದ್ದ ಎನ್ವಿಟೆಕ್ ಮರೈನ್ ಕನ್ಸಲ್ಟಂಟ್ಸ್ ಪ್ರೈ.ಲಿ.ಯ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಕೋರ್ಟ್ ಈ ತೀರ್ಪು ಪ್ರಕಟಿಸಿದೆ.
ಇದನ್ನೂ ಓದಿ:ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ರಿಪಬ್ಲಿಕನ್‌ನ 6 ಸಂಸದರ ಮತ!
ಸೇನೆಯಿಂದ ನಿವೃತ್ತಗೊಂಡ ಐಎನ್‌ಎಸ್ ವಿರಾಟ್ ಅನ್ನು ಶ್ರೀರಾಮ್ ಗ್ರೂಪ್ ಸಂಸ್ಥೆ ಈ ಹಿಂದೆ ಹರಾಜಿನಲ್ಲಿ ಖರೀದಿಸಿ, ಯುದ್ಧ ನೌಕೆಯನ್ನು ಭಗ್ನಗೊಳಿಸಿ, ಬಿಡಿಭಾಗ ಮಾರುವ ಉದ್ದೇಶ ಹೊಂದಿತ್ತು. ಇದಕ್ಕಾಗಿ ಕಳೆದ ಸೆಪ್ಟೆಂಬರ್‌ನಲ್ಲಿ ಅಲಂಗ್ ನಲ್ಲಿನ ಶಿಪ್ ಬ್ರೇಕಿಂಗ್ ಯಾರ್ಡ್‌ಗೆ ಯುದ್ಧ ನೌಕೆ ಕೂಡ ತಲುಪಿತ್ತು. ಕಾನೂನಾತ್ಮಕವಾಗಿ ಐಎನ್‌ಎಸ್ ವಿರಾಟ್‌ನ ಖರೀದಿ ಹಕ್ಕು ಪಡೆಯಲು ಎನ್ವಿಟೆಕ್ ಸಂಸ್ಥೆಗೆ ಕೇಂದ್ರ ಸರ್ಕಾರ ಸೂಚಿಸಿದ್ದರಿಂದ, ಸಂಸ್ಥೆ ಸುಪ್ರೀಂನಲ್ಲಿ ಹೋರಾಟ ನಡೆಸಿತ್ತು.