Advertisement

ಭಾರತದ ಮೊದಲ ಸ್ವದೇಶಿ ನಿರ್ಮಿತ  ಐಎನ್‌ಎಸ್‌ ವಿಕ್ರಾಂತ್‌ ಪರೀಕ್ಷೆ ಯಶಸ್ವಿ

10:42 AM Jul 11, 2022 | Team Udayavani |

ನವದೆಹಲಿ: ಸ್ವದೇಶೀಯವಾಗಿ ನಿರ್ಮಿಸಲಾಗಿರುವ ಐಎನ್‌ಎಸ್‌ ವಿಕ್ರಾಂತ್‌ ಸಮರ ನೌಕೆಯ ನಾಲ್ಕನೇ ಹಂತದ ಪರೀಕ್ಷಾರ್ಥ ಯಾನ ಯಶಸ್ವಿಯಾಗಿ ಪೂರ್ಣಗೊಂಡಿದೆ.

Advertisement

ಈ ಸಂದರ್ಭದಲ್ಲಿ, ಹಡಗಿನಲ್ಲಿ ಹಲವಾರು ಶಸ್ತ್ರಾಸ್ತ್ರಗಳನ್ನು ಹಾಗೂ ಯುದ್ಧ ಸಂಬಂಧಿ ತಂತ್ರಜ್ಞಾನ ವ್ಯವಸ್ಥೆಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಸಮುದ್ರದಲ್ಲಿ ಹಡಗು ಸಂಚಾರದ ವೇಳೆ ಅವಲ್ಲವನ್ನೂ ಪ್ರಯೋಗಿಸಲಾಗಿದ್ದು ಆ ಪರಿಕರಗಳು ನಿರೀಕ್ಷಿತ ಮಟ್ಟದಲ್ಲಿ ಫ‌ಲಿತಾಂಶ ನೀಡಿವೆ ಎಂದು ಮೂಲಗಳು ತಿಳಿಸಿವೆ.

ಇದೇ ಆ. 15ರ ಸ್ವಾತಂತ್ರ್ಯೋತ್ಸವ ದಿನಾಚರಣೆಯಂದು ಈ ಸಮರ ನೌಕೆಯನ್ನು ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಗುತ್ತದೆ.

ಈ ಹಿನ್ನೆಲೆಯಲ್ಲಿ, ನಾಲ್ಕನೇ ಹಂತದ ಪರೀಕ್ಷೆಯನ್ನು ನಡೆಸಲಾಗಿದೆ.ಇದುವರೆಗೆ, ಐಎನ್‌ಎಸ್‌ ವಿಕ್ರಮಾದಿತ್ಯದಲ್ಲಿ ಮಾತ್ರ ಬಳಸಲಾಗುತ್ತಿದ್ದ ಮಿಗ್‌-29 ಕೆ ಯುದ್ಧ ವಿಮಾನವನ್ನು ಹೊತ್ತೂಯ್ಯುವ ಸಾಮರ್ಥ್ಯ ಐಎನ್‌ಎಸ್‌ ವಿಕ್ರಾಂತ್‌ಗೂ ಇದ್ದು, ನಾಲ್ಕನೇ ಹಂತದ ಪರೀಕ್ಷೆಯ ವೇಳೆ ಈ ಹೆಲಿಕಾಪ್ಟರನ್ನೂ ಬಳಸಲಾಗಿತ್ತೆಂದು ನೌಕಾಪಡೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next