Advertisement

ಭಾರತೀಯ ನೌಕಾಪಡೆಗೆ ಐಎನ್‌ಎಸ್‌ ವೇಲಾ ಸೇರ್ಪಡೆ

09:01 PM Nov 09, 2021 | Team Udayavani |

ಮುಂಬೈ: ಭಾರತದ ನೌಕಾಪಡೆಯ “ಪ್ರಾಜೆಕ್ಟ್ 75’ರ ಅಡಿ ತಯಾರಿಸಲಾಗಿರುವ ನಾಲ್ಕನೇ ಜಲಾಂತರ್ಗಾಮಿ ನೌಕೆಯಾದ ಐಎನ್‌ಎಸ್‌ ವೇಲಾವನ್ನು ಮಂಗಳವಾರ ನೌಕಾಪಡೆಗೆ ಹಸ್ತಾಂತರಿಸಲಾಗಿದೆ. ಈ ಮೂಲಕ, ದೇಶೀಯವಾಗಿ ಜಲಾಂತರ್ಗಾಮಿಗಳನ್ನು ತಯಾರಿಸುವ ದೇಶಗಳ ಸಾಲಿಗೆ ಭಾರತ ಸೇರ್ಪಡೆಯಾಗಿದೆ.

Advertisement

ಭಾರತೀಯ ನೌಕಾಪಡೆಯಲ್ಲಿ ಈಗಾಗಲೇ ಸೇವೆಯಲ್ಲಿರುವ ಸ್ಕಾರ್ಪಿಯನ್‌ ಮಾದರಿಯ ಜಲಾಂತರ್ಗಾಮಿ ನೌಕೆಗಳ ಸರಣಿಯಲ್ಲೇ ಐಎನ್‌ಎಸ್‌ ವೇಲಾ ಸಿದ್ಧಗೊಂಡಿದ್ದು, ಇದನ್ನು ಮುಂಬೈನ ಮಜಗಾನ್‌ ಡಾಕ್‌ ಶಿಪ್‌ಬಿಲ್ಡರ್ಸ್‌(ಎಂಡಿಎಲ್‌) ಕಂಪನಿ ತಯಾರಿದೆ. ಈಗಾಗಲೇ ನೌಕಾಪಡೆಗೆ ಎಂಡಿಎಲ್‌, ಕಾಲ್ವರಿ, ಖಂಡೇರಿ ಹಾಗೂ ಕಾರಂಜ್‌ ಎಂಬ ಮೂರು ಜಲಾಂತರ್ಗಾಮಿಗಳನ್ನು ತಯಾರಿಸಿ ಕೊಟ್ಟಿದೆ.

ಈಗ ಹೊಸದಾಗಿ ಸೇರ್ಪಡೆಗೊಂಡಿರುವ ಐಎನ್‌ಎಸ್‌ ವೇಲಾ ನೌಕೆಯಿಂದಾಗಿ ಭಾರತೀಯ ನೌಕಾಪಡೆಯ ಸಾಮರ್ಥ್ಯ ಇನ್ನಷ್ಟು ಹೆಚ್ಚಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ :ಎಲ್ಲಾ ಯೋಜನೆಗಳಲ್ಲೂ ಜಾತಿ ತುರುಕಿದ ಕಾಂಗ್ರೆಸ್‌ : ಸಿ.ಟಿ.ರವಿ ಟೀಕೆ

Advertisement

Udayavani is now on Telegram. Click here to join our channel and stay updated with the latest news.

Next