ವಿಶಾಖಪಟ್ಟಣದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಹಸ್ಯವಾಗಿ ಚಲಿಸಬಲ್ಲ ಈ ಯುದ್ಧನೌಕೆ ಯನ್ನು ನೌಕಾಪಡೆಗೆ ಅಧಿಕೃತವಾಗಿ ಹಸ್ತಾಂತರಿಸಿದ್ದಾರೆ. ಶತ್ರು ನೌಕೆಗಳನ್ನು ಟಾರ್ಗೆಟ್ ಮಾಡುವಲ್ಲಿ ಹಾಗೂ ಭಾರತೀಯ ಯುದ್ಧನೌಕೆಗಳನ್ನು ರಕ್ಷಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ. ಅಷ್ಟೆ ಅಲ್ಲ, ಹೆಚ್ಚುತ್ತಿರುವ ಭಾರತದ ನೌಕಾಶಕ್ತಿಯ ಕನ್ನಡಿಯಾಗಿದೆ.
ಕಿಲ್ಟನ್‌ನಲ್ಲಿ ಏನಿವೆ?: ನೌಕೆಯಲ್ಲಿ ಭಾರೀ ತೂಕದ ನೌಕಾ ಸ್ಫೋಟಕಗಳು, ಎಎಸ್‌ಡಬ್ಲ್ಯು ರಾಕೆಟ್‌ಗಳು, 76 ಎಂಎಂ ಮಧ್ಯಮ ವ್ಯಾಪ್ತಿಯ ಗನ್, 2 ಮಲ್ಟಿ ಬ್ಯಾರೆಲ್ 30 ಎಂಎಂ ಗನ್, ಅಗ್ನಿ ನಿರೋಧಕ ವ್ಯವಸ್ಥೆ, ಕ್ಷಿಪಣಿ ನಾಶದ ರಾಕೆಟ್, ಸುಧಾರಿತ ಇಎಸ್‌ಎಂ(ಎಲೆಕ್ಟ್ರಾನಿಕ್ ಸಪೋರ್ಟ್ ಮೆಷರ್) ವ್ಯವಸ್ಥೆ ಹೊಂದಿದೆ.
Advertisement
ಐಎನ್‌ಎಸ್ ಕಿಲ್ಟನ್ ವಿಶೇಷ– ಪ್ರಾಜೆಕ್ಟ್ 28ರಡಿ ನಿರ್ಮಾಣವಾದ 4 ಎಎಸ್‌ಡಬುÉ é ಗಸ್ತುನೌಕೆಗಳಲ್ಲಿ ಒಂದು
– ಸಹೋದರ ನೌಕೆಗಳಾದ ಐಎನ್‌ಎಸ್ ಕಮೋರ್ತಾ, ಐಎನ್‌ಎಸ್ ಕಡ್ಮಟ್ ಈಗಾ ಗಲೇ ನೌಕಾಪಡೆಗೆ ಸೇರಿವೆ.
– ನೌಕಾಪಡೆಯ ಡೈರೆಕ್ಟೊರೇಟ್ ಆಫ್ ನೇವಲ್ ಡಿಸೈನ್ ವಿಭಾಗ ಇದನ್ನು ವಿನ್ಯಾಸಗೊಳಿಸಿದೆ.
– ಸ್ವೀಡನ್‌ನಿಂದ ಆಮದು ಮಾಡಲಾದ ಕಾರ್ಬನ್ ಫೈಬರ್ ಸಮ್ಮಿಳಿತ ಬಿಡಿಭಾಗಗಳಿವೆ.
– ರಹಸ್ಯ ಚಲನವಲನದ ಗುಣ ವಿಶೇಷ ಸುಧಾರಿಸಲು, ತೂಕ ಕಡಿಮೆ ಮಾಡಲು ಹಾಗೂ ನಿರ್ವಹಣ ವೆಚ್ಚ ತಗ್ಗಿಸಲು ಸಹಕಾರಿಯಾಗಿದೆ.
– ನಿರ್ಮಲಾ ಸೀತಾರಾಮನ್, ರಕ್ಷಣಾ ಸಚಿವೆ