ನವದೆಹಲಿ: ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್ ಬ್ರಹ್ಮಪುತ್ರ(INS Brahmaputra )ಬೆಂಕಿ ಅವಘಡಕ್ಕೀಡಾಗಿದ್ದು, ಬಹುತೇಕ ಸುಟ್ಟು ಹೋಗಿದೆ. ಘಟನೆಯಲ್ಲಿ ಯುದ್ಧನೌಕೆಯ ಕಿರಿಯ ನಾವಿಕರೊಬ್ಬರು ನಾಪತ್ತೆಯಾಗಿದ್ದಾರೆ.
ಮುಂಬೈನ ನೌಕಾ ನೆಲೆಯಲ್ಲಿ ಭಾನುವಾರ ನೌಕೆಯ ನಿರ್ವಹಣೆ ಕಾರ್ಯ ನಡೆಯುತ್ತಿತ್ತು. ಈ ವೇಳೆ ಇದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ.
5,300 ಟನ್ ತೂಕದ ನೌಕೆ ಬೆಂಕಿ ಹೊತ್ತುಕೊಳ್ಳುತ್ತಿದ್ದಂತೆ ಒಂದು ಬದಿಗೆ ವಾಲಲು ಆರಂಭಿಸಿದೆ. ಅದನ್ನು ಸರಿಯಾಗಿ ನಿಲ್ಲಿಸುವ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದು, ಒಂದು ಬದಿಗೆ ನೌಕೆ ಬಿದ್ದು, ಬೆಂಕಿ ಬಹುತೇಕ ಆವರಿಸಿದೆ.
ಬೆಂಕಿ ನಂದಿಸುವ ಪ್ರಯತ್ನ ಭಾನುವಾರದಿಂದಲೂ ನಡೆದಿದ್ದು, ಸೋಮವಾರ ಪರಿಸ್ಥಿತಿ ಹತೋಟಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿಯ ಲೆಕ್ಕ ಸರಿಯಾಗಿದ್ದು, ಒಬ್ಬ ಕಿರಿಯ ನಾವಿಕ ಮಾತ್ರ ನಾಪತ್ತೆಯಾಗಿದ್ದಾರೆ. ರಕ್ಷ ಣಾ ತಂಡಗಳು ಅವರಿಗಾಗಿ ಶೋಧ ನಡೆಸುತ್ತಿವೆ. ಘಟನೆ ಸಂಬಂಧ ನೌಕಾಪಡೆ ತನಿಖೆಗೆ ಆದೇಶಿಸಿದೆ ಎಂದೂ ಮಾಹಿತಿ ನೀಡಿದ್ದಾರೆ.
ಐಎನ್‌ಎಸ್ ಬ್ರಹ್ಮಪುತ್ರ ಯುದ್ಧನೌಕೆಯು ಬ್ರಹ್ಮಪುತ್ರ ಕ್ಲಾಸ್‌ನಲ್ಲಿ ದೇಶೀಯವಾಗಿ ನಿರ್ಮಿಸಿದ ಮೊದಲ ಮಾರ್ಗದರ್ಶಿ ಕ್ಷಿಪಣಿ ಹೊಂದಿ ರುವ ಯುದ್ಧ ನೌಕೆಯಾಗಿದೆ.