Advertisement

ಉಗ್ರ ಕೃತ್ಯಕ್ಕೆ ಫಾರಿನ್‌ ಫಂಡ್‌ ಬಗ್ಗೆ ವಿಚಾರಣೆ

02:41 PM Jul 29, 2023 | Team Udayavani |

ಬೆಂಗಳೂರು: ಬೆಂಗಳೂರು ಸ್ಫೋಟ ಮಾಡಲು ಸಂಚು ರೂಪಿಸಿದ್ದ ಪ್ರಕರಣದ ಸೂತ್ರದಾರ ನಾಸೀರ್‌ಗೆ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಡ್ರಿಲ್‌ ಮಾಡುತ್ತಿದ್ದು, ಹಲವು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ.

Advertisement

ಮತ್ತೂಂದೆಡೆ ಶಂಕಿತ ಐವರು ಉಗ್ರರಿಗೆ ಶಸ್ತ್ರಾಸ್ತ್ರ ಪೂರೈ ಸಿರುವ ಆರೋ ಪಿಯು ವಿದೇಶಕ್ಕೆ ಹಾರಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಪ್ರಕರಣದ ಸೂತ್ರದಾರ ನಾಸೀರ್‌ನನ್ನು ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾ ಲಯ (ಎಫ್ಎಸ್‌ಎಲ್‌) ಆವರಣದಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು, ಆತನಿಗೆ ಉಗ್ರ ಕೃತ್ಯಕ್ಕೆ ಬೆಂಬಲ ನೀಡುತ್ತಿದ್ದವರ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. ಆದರೆ, ನಾಸೀರ್‌ ಗೊಂದಲದ ಹೇಳಿಕೆ ನೀಡುತ್ತಿರುವುದರಿಂದ ಪ್ರಕರಣದ ಹಿಂದಿರುವ ಕಾಣದ ಕೈಗಳ ಮಾಹಿತಿ ಕೆದಕು ವುದೇ ಸಿಸಿಬಿ ಪೊಲೀಸರಿಗೆ ಸವಾಲಾಗಿದೆ. ಸಿಸಿಬಿ ಪೊಲೀಸರ ವಿಚಾರಣೆ ಎದುರಿಸಿದ್ದ ಐವರು ಶಂಕಿತ ಭಯೋತ್ಪಾದಕರಿಗೆ ವಿದೇಶದಿಂದ ಲಕ್ಷಾಂತರ ರೂ. ಆನ್‌ಲೈನ್‌ ಫ‌ಂಡಿಂಗ್‌ ಆಗಿರುವ ಬ್ಯಾಂಕ್‌ ಖಾತೆಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಬಂಧಿತ ಶಂಕಿತರು ಹಾಗೂ ಅವರ ಕುಟುಂಬ ಸದಸ್ಯರಿಗೆ ಸೇರಿದ 26ಕ್ಕೂ ಹೆಚ್ಚಿನ ಬ್ಯಾಂಕ್‌ ಖಾತೆಯಲ್ಲಿ ಕಳೆದ ಕೆಲ ತಿಂಗಳುಗಳಿಂದ ನಡೆದ ದೊಡ್ಡ ಮೊತ್ತದ ವಹಿವಾಟಿನ ಬಗ್ಗೆ ಪರಿಶೀಲಿಸಿದ್ದಾರೆ.

ಆರೋಪಿಗಳ ಬ್ಯಾಂಕ್‌ ಖಾತೆಗೆ ದುಡ್ಡು ಜಮೆಯಾಗಿದೆ ಮೂಲ ಪತ್ತೆಯಾದರೆ ಪ್ರಕರಣದಲ್ಲಿ ಶಾಮೀಲಾಗಿರುವ ಮತ್ತಷ್ಟು ಆರೋಪಿಗಳ ಮಾಹಿತಿ ಸಿಗಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Advertisement

ರೈಲಿನಲ್ಲಿ ಶಸ್ತ್ರಾಸ್ತ್ರ ತಂದಿದ್ದ ಆರೋಪಿ: ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾದ ಶಂಕಿತ ಭಯೋತ್ಪಾದಕರಿಗೆ ಸಲ್ಮಾನ್‌ ಎಂಬಾತ ಶಸ್ತ್ರಾಸ್ತ್ರ ಪೂರೈಸಿರುವುದು ಪತ್ತೆಯಾಗಿದೆ. ಪೊಲೀಸರು ತಾಂತ್ರಿಕ ತನಿಖೆ ನಡೆಸಿದಾಗ ಈ ಅಂಶ ಬಯಲಾಗಿದೆ. ಅರಬ್‌ ದೇಶದಲ್ಲಿ ತಲೆಮರೆಸಿಕೊಂಡಿರುವ ಜುನೇದ್‌ ಸೂಚನೆ ಮೇರೆಗೆ ಆರೋಪಿ ಸಲ್ಮಾನ್‌ ಹೊರ ರಾಜ್ಯದಿಂದ ರೈಲಿನಲ್ಲಿ ಪಿಸ್ತೂಲ್‌, ಜೀವಂತ ಗುಂಡು ಸೇರಿದಂತೆ ವಿವಿಧ ಶಸ್ತ್ರಾಸ್ತ್ರ ಗಳೊಂದಿಗೆ ಬೆಂಗಳೂರಿಗೆ ಬರು ತ್ತಿದ್ದ. ಯಶವಂತಪುರದ ರೈಲ್ವೆ ನಿಲ್ದಾಣದಲ್ಲಿ ಇಳಿದು ಟಿ.ಬೇಗೂ ರಿನಲ್ಲಿ ಶಂಕಿತರ ಕೈಗೆ ಶಸ್ತ್ರಾಸ್ತ್ರ ಕೊಟ್ಟು ಅಲ್ಲಿಂದ ಪರಾರಿಯಾಗುತ್ತಿದ್ದ. ಸಲ್ಮಾನ್‌ ಇತ್ತೀಚೆಗೆ ನೇಪಾಳಕ್ಕೆ ತೆರಳಿ ಅಲ್ಲಿಂದ ಅರಬ್‌ ದೇಶಕ್ಕೆ ಪರಾರಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸಲ್ಮಾನ್‌ಗೆ ವಿದೇಶಕ್ಕೆ ತೆರಳಲು ಪ್ರಮುಖ ಆರೋಪಿ ಜುನೇದ್‌ ಆರ್ಥಿಕ ನೆರವು ನೀಡಿರುವ ಶಂಕೆ ವ್ಯಕ್ತವಾಗಿದೆ. ಇದೀಗ ಪ್ರಮುಖ ಆರೋಪಿ ಜುನೇದ್‌ ಹಾಗೂ ಸಲ್ಮಾನ್‌ ಪತ್ತೆಹಚ್ಚುವ ತಾಂತ್ರಿಕ ಕಾರ್ಯಾಚರಣೆ ನಡೆಯುತ್ತಿದೆ. ಆತ ಅರಬ್‌ನ ಯಾವ ದೇಶದಲ್ಲಿ ನೆಲೆಸಿದ್ದಾನೆ ಎಂಬುದು ಖಚಿತವಾದರೆ ಕೆಲ ಪ್ರಕ್ರಿಯೆ ಮೂಲಕ ವಿದೇಶಕ್ಕೆ ತೆರಳಿ ಕರೆತರುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next