Advertisement

ಭಾರತೀಯ ಒಲಿಂಪಿಕ್ಸ್‌ ತಂಡಕ್ಕೆ ಐನಾಕ್ಸ್‌ ಪ್ರಾಯೋಜಕತ್ವ

07:39 PM Aug 13, 2020 | mahesh |

ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್‌ಗೆ ತೆರಳಲಿರುವ ಭಾರತೀಯ ಕ್ರೀಡಾ ತಂಡಕ್ಕೆ “ಐನಾಕ್ಸ್‌ ಗ್ರೂಪ್‌’ ಸ್ಪಾನ್ಸರ್‌ ಆಗಲು ಮುಂದೆ ಬಂದಿದೆ. ಭಾರತೀಯ ಒಲಿಂಪಿಕ್‌ ಅಸೋಸಿಯೇಶನ್‌ (ಐಒಎ) ಗುರುವಾರ ಇದನ್ನು ಪ್ರಕಟಿಸಿತು.

Advertisement

“ಭಾರತದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಐನಾಕ್ಸ್‌ ಗ್ರೂಪ್‌ ಯಾವತ್ತೂ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಇದೀಗ ಭಾರತೀಯ ಒಲಿಂಪಿಕ್ಸ್‌ ಕನಸನ್ನು ಸಾಕಾರಗೊಳಿಸುವ ಅಪೂರ್ವ ಅವಕಾಶವೊಂದು ನಮಗೆ ಎದುರಾಗಿದೆ’ ಎಂಬುದಾಗಿ ಗ್ರೂಪ್‌ನ ನಿರ್ದೇಶಕ ಸಿದ್ಧಾರ್ಥ್ ಜೈನ್‌ ಹೇಳಿದ್ದಾರೆ.

“ಐನಾಕ್ಸ್‌ ಗ್ರೂಪ್‌ ಜತೆ ಬಾಂಧವ್ಯ ಬೆಳೆಸುವುದೊಂದು ಸಂತಸದ ಸಂಗತಿ. ಇಂಥ ಸ್ಥಿತಿಯಲ್ಲೂ ಟೀಮ್‌ ಇಂಡಿಯಾ ಬೆಂಬಲಕ್ಕೆ ನಿಲ್ಲಲು ಕಾರಣರಾದ ನಿರ್ದೇಶಕ ಜೈನ್‌ ಅವರಿಗೆ ಕೃತಜ್ಞತೆಗಳು’ ಎಂಬುದಾಗಿ ಐಒಎ ಕಾರ್ಯದರ್ಶಿ ರಾಜೀವ್‌ ಮೆಹ್ತಾ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next