ಬೆಂಗಳೂರು: ದೇಶದ ಹೆಸರಾಂತ ಕಾರು ತಯಾರಕ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ, ಸೋಮವಾರ ತನ್ನ ಪ್ರೀಮಿಯಂ ಸೆಡಾನ್ ಕಾರು “ಸಿಯಾಜ್’ನ ಹೊಚ್ಚ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ.
ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ದಿ ತಾಜ್ ಹೋಟೆಲಲ್ಲಿ ನೂತನ ಕಾರನ್ನು ಅನಾವರಣಗೊಳಿಸಿ ಮಾತನಾಡಿದ ಸಂಸ್ಥೆಯ ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಆರ್.ಎಸ್. ಕಾಲ್ಸಿ ಅವರು ಈ ಸಿಯಾಜ್ ಕಾರು ಕ್ರಾಂತಿಕಾರಕ ಹೊಸ 1.5 ಲೀ. ಕೆ15 ಪೆಟ್ರೋಲ್ ಇಂಜಿನ್ ಹೊಂದಿದೆ.
ಅಲ್ಲದೆ, ಮುಂದಿನ ಪೀಳಿಗೆಯ ಲೀಥಿಯಂ ಇಯಾನ್ ಬ್ಯಾಟರಿ ಇದಕ್ಕಿದ್ದು ಕಾಂಪ್ಯಾಕ್ಟ್ ಆಗಿದ್ದು, ಸ್ಮಾರ್ಟ್ ಹೈಬ್ರಿàಡ್ ತಂತ್ರಜ್ಞಾನವನ್ನು ಮೊದಲ ಬಾರಿಗೆ ಬಳಸಿಕೊಳ್ಳುವ ಮೂಲಕ ದೀರ್ಘಾವಧಿ ಆಯುಸ್ಸು ಹೊಂದಿದೆ. ತನ್ನ ಎಲ್ಲ ದರ್ಜೆಯ ಕಾರುಗಳ ಪೈಕಿ ಅಧಿಕ ಕಂಫರ್ಟ್, ಪರಿಣಾಮಕಾರಿ ಹೊರವಿನ್ಯಾಸ, ಎಲೈಟ್ ಒಳವಿನ್ಯಾಸ, ಸುರಕ್ಷತೆ ಹಾಗೂ ಅನುಕೂಲಕರ ಅಂಶಗಳನ್ನು ಒಳಗೊಂಡಿರುವ ಸರಿಸಾಟಿಯಿಲ್ಲದ ಸಾಮರ್ಥ್ಯ ಇದಕ್ಕಿದೆ ಎಂದರು.
2014ರಲ್ಲಿ ಬಿಡುಗಡೆಯಾದ ಸಿಯಾಜ್ ಎ3 ಮಧ್ಯಮ ಗಾತ್ರದ ಪ್ರೀಮಿಯಂ ಸೆಡಾನ್ ವರ್ಗದಲ್ಲಿ ಜನಪ್ರಿಯ ಕಾರು ಎನಿಸಿಕೊಂಡಿದ್ದು, 2.20 ಲಕ್ಷ ಕಾರುಗಳು ಮಾರಾಟಗೊಂಡಿವೆ ಎಂದು ಅವರು ತಿಳಿಸಿದರು. ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಸಿವಿ ರಾಮನ್ ಇದ್ದರು.
ಅತ್ಯಾಕರ್ಷಕ ವಿನ್ಯಾಸ: ಹೊಸ ಸಿಯಾಜ್ ಹೊರ ವಿನ್ಯಾಸ ಆಕರ್ಷಣೀಯವಾಗಿದ್ದು, ಗ್ರಿಲ್ ಮತ್ತು ಬಂಪರ್‌ನೊಂದಿಗೆ ಶಾರ್ಪ್ ಫ್ರಂಟ್ ಫೇಷಿಯಾ, ಡಿಆರ್‌ಎಲ್ ಸ್ಲಿಕ್ ಮತ್ತು ಕಂಟೆಂಪರರಿ ಎಲ್‌ಇಡಿ ಪ್ರೊಜೆಕ್ಟರ್ ಆಟೋ ಹೆಡ್‌ಲ್ಯಾಂಪ್, ಎಲ್‌ಇಡಿ ಫಾಗ್ ಲ್ಯಾಂಪ್ ಮತ್ತು ಕ್ರೋಮ್ ಗಾರ್ನಿಷ್, ಹಿಂಬದಿಯಲ್ಲಿ ಎಲ್‌ಇಡಿ ಲ್ಯಾಂಪ್‌ಗ್ಳು, ಆಕರ್ಷಕ ಕ್ರೋಮ್ ಬೆಝೆಲ್ಸ್, ಡುಯೆಲ್ ಟೋನ್ ಮೆಟಾಲಿಕ್ ಪೆಬೆಲ್ ಗ್ರೇ ಫಿನಿಷ್‌ನ 16 ಇಂಚ್ ಪ್ರೀಸಿಷನ್ ಕಟ್ ಅಲಾಯ್ ಚಕ್ರಗಳು ಇದಕ್ಕಿವೆ.
ಒಳವಿನ್ಯಾಸ ಆರಾಮದಾಯಕ ಮತ್ತು ಲಕ್ಸುರಿಯಿಂದ ಕೂಡಿದೆ. ಹಲವು ಅಪ್‌ಮಾರ್ಕೆಟ್ ಫೀಚರ್ ಸೇರಿಸಲಾಗಿದ್ದು, ಹೊಸ ಬೀರ್ಚ್ ಬ್ಲೊಂಡೆ ವುಡ್‌ಗೆನ್ ಆಕರ್ಷಕ ಕಡಿಮೆ ಹೊಳಪಿನ ಫಿನಿಷ್ ಹಾಗೂ ಡ್ಯಾಷ್‌ಬೋರ್ಡ್, ಡೋರ್ ಟ್ರಿಮ್‌ಗಳ ಮೇಲೆ ಸ್ಯಾಟಿನ್ ಕ್ರೋಮ್ ಇದಕ್ಕಿದೆ. 4.2 ಇಂಚಿನ ಕಲರ್ ಟಿಎಫ್‌ಟಿ ಡಿಸ್‌ಪ್ಲೇ, ಸ್ಪೀಡೋಮೀಟ್‌ನಲ್ಲಿ ಇಕೋ ಇಲ್ಯುಮಿನೇಷನ್ ಹಾಗೂ ಚಾಲನೆಗೆ ಅನುಗುಣವಾಗಿ ಸ್ವಯಂಚಾಲಿತ ಬಣ್ಣ ಬದಲಿಸುವಂತೆ ರೂಪಿಸಲಾಗಿದೆ.