Advertisement

ಮಾದರಿ ಕೃಷಿಗೆ ಮೋದಿ ಪ್ರೇರಣೆ ಎಂದ ಪ್ರಶಸ್ತಿ ಪುರಸ್ಕೃತ ಕೃಷಿಕ

04:06 PM Mar 03, 2020 | Hari Prasad |

ಭದೇರ್ವಾ: ಜಮ್ಮು ಮತ್ತು ಕಾಶ್ಮೀರದ ಕುಗ್ರಾಮವೊಂದರ ರೈತ ಭರತ್‌ ಭೂಷಣ್‌ (42) ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ನೀಡುವ ಪ್ರತಿಷ್ಠಿತ ‘ಇನ್ನೊವೇಟಿವ್‌ ಫಾರ್ಮರ್‌ ಅವಾರ್ಡ್‌’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Advertisement

ಮಂಗಳವಾರ ದಿಲ್ಲಿಯಲ್ಲಿ ನಡೆಯುವ ‘ಪುಸ ಕೃಷಿ ವಿಜ್ಞಾನ ಮೇಳ 2020’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. 62 ಎಕರೆ ಜಮೀನಿನಲ್ಲಿ ಅವರು ಲ್ಯಾವೆಂಡರ್‌ ಕೃಷಿ ಕೈಗೊಂಡು ಯಶಸ್ಸು ಪಡೆದಿದ್ದಾರೆ.

ತಾವು ಬಡತನ ರೇಖೆಗಿಂತ ಕೆಳಗಿನವರಾಗಿದ್ದು 4 ವರ್ಷಗಳ ಹಿಂದೆ ಪ್ರಧಾನಿ ಮೋದಿ ಜತೆ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡುವ ಅವಕಾಶ ದೊರೆಯಿತು. ಅದು ನನ್ನ ಜೀವನವನ್ನೇ ಬದಲಿಸಿತು. ನನಗೆ ಮೋದಿಯವರೇ ಸ್ಫೂರ್ತಿ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next