Advertisement

ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಹೆಚ್ಚಳಕ್ಕೆ ವಿನೂತನ ಪ್ರಯತ್ನ

01:31 PM Dec 02, 2019 | Team Udayavani |

ಬೆಟಗೇರಿ: ಎಸ್ಸೆಸ್ಸೆಲ್ಸಿ ಫಲಿಂತಾಂಶದಲ್ಲಿ ಸುಧಾರಣೆ ಕಂಡುಕೊಳ್ಳುವ ನಿಟ್ಟಿನಲ್ಲಿ ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ಗ್ರಾಮದ ವಿ.ವಿ. ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಳೆದ ಒಂದು ತಿಂಗಳಿಂದ ಪ್ರತಿದಿನ ಸಂಜೆ ವಿನೂತನಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Advertisement

ಶಾಲೆಯ ಮುಖ್ಯೋಧ್ಯಾಪಕ, ಶಿಕ್ಷಕರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉತ್ಸಾಹತುಂಬಲು ವಿದ್ಯಾರ್ಥಿಗಳಿಂದ ವಾಗ್ಧಾನಎಂಬ ವಿನೂತನ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ಸ್ವ ಸಾಮಥ್ಯದಮೂಲಕ ಶೇ 75, ಶೇ 80, ಶೇ 90, ಶೇ 95,ಶೇ 100ರಷ್ಟು ಹೀಗೆ ಫಲಿತಾಂಶ ಘೋಷಣೆಬಗ್ಗೆ ತಮ್ಮ ಭಾವಚಿತ್ರ ಶಾಲೆಯ ನೋಟಿಸ್‌ ಫಲಕ ಮೇಲೆ ಅಂಟಿಸಬೇಕು. ಅಂಕ ಗಳಿಕೆ ಸಾಮರ್ಥ್ಯದ ಮೇಲೆ 20 ವಿದ್ಯಾರ್ಥಿಗಳಂತೆ7 ಗುಂಪು ರಚನೆ ಮಾಡಿ, ಒಬ್ಬಬ್ಬರೂಶಿಕ್ಷಕ ಒಂದೊಂದು ಗುಂಪು ದತ್ತು ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಉತ್ಸಾಹ, ಪ್ರೋತ್ಸಾಹ, ಪಠ್ಯದವಿಶೇಷ ಉಪನ್ಯಾಸ ಸೇರಿದಂತೆ ಪಠ್ಯೇತರ ಚಟುವಟಿಕೆ ಕುರಿತು ಶಿಕ್ಷಕರು ತರಬೇತಿ ನೀಡಲು ಅಣಿಯಾಗಿದ್ದಾರೆ.

ಪ್ರಸಕ್ತ ವರ್ಷ 266 ಜನವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆ ಬರೆಯಲಿದ್ದಾರೆ. 100ಕ್ಕೆ 100ರಷ್ಟು ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿಹಲವಾರು ವಿನೂತನ ಕಾರ್ಯಕ್ರಮ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡುಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ಅರಿವು, ಭಯ ಮುಕ್ತ ವಾತಾವರಣ ನಿರ್ಮಾಣ, ಬರೆಯುವವಿಧಾನ ತಿಳಿಸಲಾಗುವುದು. ಕಲಿಕೆಗೆ ಬೇಕಾದ

ಪಾಠೊಪಕರಣಗಳ ಸಮಸ್ಯೆಗಳನ್ನು ಅರಿತು ಅಂತಹ ವಿದ್ಯಾರ್ಥಿಗಳಿಗೆ ಸ್ಥಳೀಯ ಶಿಕ್ಷಣ ಪ್ರೇಮಿಗಳ ಮೂಲಕ ಸಹಾಯ, ಸಹಕಾರಪೂರೈಸಲಾಗುತ್ತಿದೆ ಎಂದು ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next