Advertisement

ಹಸರೀಕರಣಕ್ಕೆ ವಿನೂತನ ಪ್ರಯತ್ನ

03:21 PM Jun 03, 2018 | |

ಇಂಡಿ: ಪ್ರಾದೇಶಿಕ ಅರಣ್ಯ ಇಲಾಖೆಯಿಂದ ವಿಜಯಪುರ ಜಿಲ್ಲೆಯಲ್ಲಿಯೇ ಅತ್ಯಂತ ಹೆಚ್ಚಿಗೆ ಮತ್ತು ಉತ್ತಮ ತಳಿಯ ಸಸಿಗಳನ್ನು ತಯಾರಿಸುವ ಕಾರ್ಯವನ್ನು ಇಂಡಿ ತಾಲೂಕಿನ ಜೇವೂರ ಗ್ರಾಮದಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆಯವರು ಮಾಡಿದ್ದಾರೆ.

Advertisement

ಒಟ್ಟು 16.93 ಹೆಕ್ಟೇರ್‌ ಪ್ರದೇಶ ಸ್ಥಳ ಅರಣ್ಯ ಇಲಾಖೆಗೆ ಮೀಸಲಿರಿಸಲಾಗಿದೆ. ಅದರಲ್ಲಿ ಒಂದು ಹೆಕ್ಟೇರ್‌ ಅಂದರೆ ಸರಿ ಸುಮಾರು 2.5 ಎಕರೆಯಿಂದ 3 ಎಕರೆವರೆಗೆ ನರ್ಸರಿ ಮಾಡಿ ವಿವಿಧ ತಳಿಗಳ ಸಸಿಗಳನ್ನು ತಯಾರಿಸಲಾಗಿದೆ. ನರ್ಸರಿ ಸ್ಥಳದಲ್ಲಿ ಒಂದು ಬೋರ್‌ವೆಲ್‌ ಇದೆ. ಆದರೆ ಆ ಬೋರ್‌ವೆಲ್‌ ನೀರು ಸಾಕಾಗದೆ ಇರುವುದರಿಂದ ಖಾಸಗಿಯವರ ಬೋರ್‌ವೆಲ್‌ ಬಳಸಿ ಸಸಿ ಸಂರಕ್ಷಿಸುವ ಕಾರ್ಯವನ್ನು ಪ್ರಾದೇಶಿಕ ಅರಣ್ಯ ಇಲಾಖೆಯವರು ಮಾಡಿದ್ದಾರೆ.

ಫೆಬ್ರವರಿ ತಿಂಗಳಿನಿಂದಲೇ ಪ್ಲಾಸ್ಟಿಕ್‌ ಕವರ್‌ಗಳಲ್ಲಿ ಮಣ್ಣು ತುಂಬಿಸಿ ಅದರಲ್ಲಿ ಬೀಜ ನೆಟ್ಟು ನೀರು ಹಾಕಿ ಆರೈಕೆ ಮಾಡಲಾಗಿದೆ. ಜೂನ್‌ ತಿಂಗಳಿನಲ್ಲಿ ಮಳೆಯಾದ ತಕ್ಷಣ ರೈತರಿಗೆ ಉಪಯೋಗವಾಗುವ ಸಸಿಗಳನ್ನು ಕಡಿಮೆ ಬೆಲೆಯಲ್ಲಿ ನೀಡಲಾಗುತ್ತದೆ. ಸದ್ಯ ನರ್ಸರಿಯಲ್ಲಿ ಸಾಗ್ವಾನಿ, ಹೆಬ್ಬೇವು, ಸೀತಾಫಲ, ಪೆರಲ, ನುಗ್ಗೆ, ಬಾರಿ, ನಿಂಬೆ, ನೇರಳೆ, ನೆಲ್ಲಿ, ಹುಣಸೆ, ಸಿಹಿ ಹುಣಸೆ, ಶಿವಣಿ, ಬನ್ನಿ, ಬಿಲ್ವ ಪತ್ರಿ, ತಪಸ್ವಿ, ಬಸವನಪಾದ, ಗ್ಲೀರಿಸಿಡಿಯಾ, ಹಲಸು, ಹೊಂಗೆ ಸೇರಿದಂತೆ ಇನ್ನಿತರ ಸಸಿಗಳನ್ನು ತಯಾರಿಸಲಾಗಿದೆ.

ತಿಮ್ಮಕ್ಕಗೆ ಗೌರವ: ತಮ್ಮ ಜೀವಮಾನದ ಅವಧಿಯಲ್ಲಿ ಮಕ್ಕಳಿಗಿಂತ ಹೆಚ್ಚಿಗೆ ಕಾಳಜಿ ಮಾಡಿ ಸಾಲು-ಸಾಲಾಗಿ ಸಸಿ ನೆಟ್ಟು ಪರಿಸರ ರಕ್ಷಣೆಯಲ್ಲಿಯೇ ತಮ್ಮ ಇಡಿ ಜೀವನ ಮುಡುಪಾಗಿಟ್ಟ ಸಾಲುಮರದ ತಿಮ್ಮಕ್ಕನನ್ನು ಗೌರವಿಸುವ ಉದ್ದೇಶದಿಂದ ಜೇವೂರ ಗ್ರಾಮದ ನರ್ಸರಿ ಪಕ್ಕದಲ್ಲಿಯೇ 10 ಎಕರೆ ಜಾಗದಲ್ಲಿ ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನ ಎಂದು ನಾಮಕರಣ ಮಾಡಿ ಅದರಲ್ಲಿ ಮಕ್ಕಳ ಆಟಿಕೆ, ಪ್ಯಾರಾಗೋಲ, ವಾಕಿಂಗ್‌ ಪಾರ್ಕ್‌, ವಾಟರ್‌ ಟ್ಯಾಂಕ್‌, ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟು ಒಂದುವರೆ ಲಕ್ಷ ಸಸಿಗಳನ್ನು ತಯಾರಿಸಲಾಗಿದೆ. ಸಸಿಗಳ ಬೆಲೆ ಕೇವಲ 1, 3, 5 ರೂ. ಇದ್ದು ರೈತರು ತಮಗೆ ಬೇಕಾದ ಸಸಿಗಳನ್ನು ಪಡೆಯಲು ಅರಣ್ಯ ರಕ್ಷಕ ಡಿ.ಎ. ಮುಜಗೊಂಡ (9845703782) ಅವರನ್ನು ಸಂಪರ್ಕಿಸಬೇಕೆಂದು ತಿಳಿಸಲಾಗಿ¨

ಪ್ರತಿ ವರ್ಷ ಅರಣ್ಯ ಇಲಾಖೆಯಿಂದ ಸಸಿ ತಯಾರಿಸಿ ರಸ್ತೆ ಬದಿಯಲ್ಲಿ ಸಸಿ ನೆಟ್ಟು ಇಲಾಖೆ ಘೋಷಿಸುತ್ತಿದೆ. ಸಾರ್ವಜನಿಕರು ಸಹ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಮಾಡಿ ಅರಣ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು.
ಆರ್‌.ಆರ್‌. ಚವ್ಹಾಣ, ವಲಯ ಅರಣ್ಯಾಧಿಕಾರಿ

Advertisement

ನಾವು ಜೇವೂರ ನರ್ಸರಿಯಲ್ಲಿ ಇಷ್ಟು ಪ್ರಮಾಣದಲ್ಲಿ ಸಸಿಗಳನ್ನು ತಯಾರಿಸಬೇಕೆಂದರೆ ನಮ್ಮ ಮೇಲಾ ಧಿಕಾರಿಗಳಾದ ಆರ್‌.ಆರ್‌. ಚವ್ಹಾಣ ಹಾಗೂ ಜಿಲ್ಲಾ ಉಪವಲಯ ಸಂರಕ್ಷಣಾಧಿಕಾರಿ ಕೆ.ವಿ. ನಾಯಕ ಅವರ ಸಹಕಾರವಿದೆ.
ಡಿ.ಎ. ಮುಜಗೊಂಡ,  ಅರಣ್ಯ ರಕ್ಷಕ, ಜೇವೂರ

ನಮ್ಮ ಗ್ರಾಮದ ಹತ್ತಿರವೇ ನರ್ಸರಿ ಮಾಡಿದ್ದಾರೆ. ಪ್ರತಿ ವರ್ಷವೂ ಉತ್ತಮ ಮತ್ತು ಬೇರೆ-ಬೇರೆ ತಳಿ ಸಸಿಗಳನ್ನು
ತಯಾರಿಸುತ್ತಾರೆ. ಹೀಗಾಗಿ ಈ ಭಾಗದಲ್ಲಿ ರೈತರಿಗೆ ಈ ನರ್ಸರಿಂದ ತುಂಬಾ ಅನುಕೂಲವಾಗಿದೆ. 
ಶಿವುಗೌಡ ಬಿರಾದಾರ,  ಜೇವೂರ ರೈತ

„ಉಮೇಶ ಬಳಬಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next