Advertisement

ಗೋಮಾತೆ ಸಂರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ: ಪ್ರಭು ಚವ್ಹಾಣ್

09:04 AM Nov 06, 2021 | Team Udayavani |

ಬೀದರ: ಗೋವುಗಳು ಈ ನೆಲದ ಅತ್ಯಮೂಲ್ಯ ಸಂಪತ್ತು. ಈ ನಿಟ್ಟಿನಲ್ಲಿ ಗೋಮಾತೆ ಸಂರಕ್ಷಣೆಗೆ ನಮ್ಮ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಪಶುಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಹೇಳಿದರು.

Advertisement

ದೀಪಾವಳಿ ಬಲಿಪಾಡ್ಯಮಿ ದಿನದಂದು ರಾಜ್ಯದ ಎಲ್ಲಾ ಹಿಂದೂ ದೇವಾಲಯಗಳಲ್ಲಿ ಗೋಪೂಜೆ ನಡೆಸಲು ಧಾರ್ಮಿಕ ದತ್ತಿ ಇಲಾಖೆಯಿಂದ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಔರಾದ್ ಪಟ್ಟಣದ ಸುಕ್ಷೇತ್ರ ಅಮರೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಗೋಮಾತೆಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಗೋವುಗಳನ್ನು ಯಾವುದೇ ಕಾರಣಕ್ಕೂ ಹತ್ಯೆ ಮಾಡಬಾರದು. ಗೋವುಗಳನ್ನು ಸಂರಕ್ಷಣೆ ಮಾಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಗೋ ಸಂರಕ್ಷಣೆಗೆ ವಿಶೇಷ ಪ್ರಾಮುಖ್ಯತೆ ನೀಡಿದೆ. ಗೋರಕ್ಷಣೆಯ ಮಹತ್ವದ ಸಂದೇಶವನ್ನು ಎಲ್ಲೆಡೆ ಸಾರುವ ನಿಟ್ಟಿನಲ್ಲಿ ಮುಜರಾಯಿ ಇಲಾಖೆಯಿಂದ ಗೋಮಾತೆಗೆ ಪೂಜೆ ಸಲ್ಲಿಸುವ ಕಾರ್ಯಕ್ರಮ ಮೂಲಕ ನಾಡಿನಾದ್ಯಂತ ದೀಪಾವಳಿ ಹಬ್ಬವನ್ನು ಆಚರಣೆ ಮಾಡುತ್ತಿದ್ದೇವೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.

ಇದನ್ನೂ ಓದಿ:ಜನಮನ್ನಣೆಗೆ ತಕ್ಕಂತೆ ಸರಕಾರದಿಂದ ಗೌರವ : ಅಪ್ಪು ನಿವಾಸದಲ್ಲಿ ಸಿಎಂ ಬೊಮ್ಮಾಯಿ

ನಮ್ಮ ದೇಶದಲ್ಲಿ ಗೋಮಾತೆ ರಕ್ಷಣೆಗಾಗಿ ಅಂಬ್ಯುಲೆನ್ಸ್ ನೀಡಿದ ಕೊಡುಗೆ ನಮ್ಮ ಸರ್ಕಾರಕ್ಕೆ ಸಲ್ಲುತ್ತದೆ. ಇಡೀ ದೇಶಾದ್ಯಂತ ಯಾರು ಕೊಡದಂತಹ 275 ಅಂಬ್ಯುಲೆನ್ಸ್ ಗೋವುಗಳ ರಕ್ಷೆಣೆಗೆಂದೇ ನೀಡಿದ್ದೇವೆ. ಗೋಮಾತೆ ಸಂರಕ್ಷಣೆಗಾಗಿ ಎಲ್ಲ ತಾಲೂಕುಗಳಿಗೆ ಅಂಬ್ಯುಲೆನ್ಸ್ ನೀಡುತ್ತಿದ್ದೇವೆ. ಆರೋಗ್ಯ ಸೇವೆಗಾಗಿ 108 ಹೇಗಿದೆಯೋ ಅದೇ ಮಾದರಿಯಲ್ಲಿ ಗೋಮಾತೆ ಸೇವೆಗಾಗಿ ಅಂಬ್ಯುಲೆನ್ಸ್ ನೀಡುತ್ತಿದ್ದೇವೆ. ಗೋಸೇವೆಯನ್ನು ಸಹ ಮಾನವ ಸೇವೆ, ಮಾನವೀಯ ಸೇವೆ ಎಂದೇ ಭಾವಿಸಿದ್ದೇವೆ ಎಂದು ಸಚಿವರು ತಿಳಿಸಿದರು.

Advertisement

ಈ ಸಂದರ್ಭದಲ್ಲಿ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯ ಬಂಡೆಪ್ಪ ಕಂಠೆ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಬಸವರಾಜ ದೇಶಮುಖ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಸಂತೋಷ, ತಹಸೀಲ್ದಾರರಾದ ಮಲಶೆಟ್ಟಿ ಚಿದ್ರೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರವಿ ಸುಕುಮಾರ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next