ಕಲಬುರಗಿ: ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ನಡೆದ ಇನ್ನೋವೇಶನ್ ಫೆಸ್ಟಿವಲ್ 2018ರಲ್ಲಿ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪುರಸ್ಕಾರ ಪಡೆದರು. ವಿವಿಧ ಕಾಲೇಜುಗಳಿಂದ ಪ್ರಾಯೋಜಿಸಲ್ಪಟ್ಟ ಸುಮಾರು 63 ವಿದ್ಯಾರ್ಥಿಗಳು ಯೋಜನೆಗಳೊಂದಿಗೆ ಭಾಗವಹಿಸಿದ್ದರು.
ಪೈಪೋಟಿ ನಡೆಸಿದ 32 ಪ್ರೋಜೆಕ್ಟ್ಗಳಲ್ಲಿ ಪೂಜ್ಯ ದೊಡ್ಡಪ್ಪ ಅಪ್ಪಾ ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿನಿಗಳಾದ ಐಶ್ವರ್ಯ ಎಸ್. ಕಲಬುರ್ಗಿ ಹಾಗೂ ವೈಷ್ಣವಿ ಜಿ.ಕೆ. ಅವರ ಪ್ರೋಜೆಕ್ಟ್ಗೆ ದ್ವಿತೀಯ ಪುರಸ್ಕಾರ ಲಭಿಸಿದೆ. ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಡಾ| ಜಿ.ಆರ್. ನಾಯಕ ಪುರಸ್ಕಾರ ನೀಡಿ ಅಭಿನಂದಿಸಿದರು.
ಪ್ರದರ್ಶನಕ್ಕೆ ಅರ್ಹವಾದ ಮತ್ತೂಂದು ಪ್ರೋಜೆಕ್ಟ್‌ನಲ್ಲಿ ಇದೇ ವಿಭಾಗದ ವಿದ್ಯಾರ್ಥಿನಿಯರಾದ ವೈಭವಿ, ಅಕ್ಷತಾ ಮತ್ತು ಅಪೂರ್ವ ಅವರಿಗೆ ಮೆಚ್ಚುಗೆ ಪತ್ರ ನೀಡಿ ಪುರಸ್ಕರಿಸಲಾಯಿತು. ವಿದ್ಯುನ್ಮಾನ ವಿಭಾಗ ಮತ್ತು ಕಂಪ್ಯೂಟರ್ ಸಾಯಿನ್ಸ್ ವಿಭಾಗದ ವಿದ್ಯಾರ್ಥಿಗಳು ಜಂಟಿಯಾಗಿ ಪ್ರದರ್ಶಿಸಿದ ಪ್ರೋಜೆಕ್ಟ್ ಸ್ಮಾರ್ಟ್ ಹೆಲ್ಮಟ್ ಗೆ ಮೆಚ್ಚುಗೆ ವ್ಯಕ್ತವಾಗಿದ್ದು ಅವರಿಗೂ ಕೂಡ ಮೆಚ್ಚುಗೆ ಪತ್ರ ನೀಡಿ ಪುರಸ್ಕರಿಸಲಾಯಿತು.
ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಿಂದ ಸುಮಾರು ನಾಲ್ಕು ಪ್ರೋಜೆಕ್ಟ್ಗಳು ಭಾಗವಹಿಸಿದ್ದು ಇದರಲ್ಲಿ ಎರಡು ಪ್ರೋಜೆಕ್ಟ್ಗಳು ಪ್ರದರ್ಶನಕ್ಕೆ ಅರ್ಹಗೊಂಡವು. ಐಶ್ವರ್ಯ ಎಸ್. ಕಲಬುರ್ಗಿ ಹಾಗೂ ವೈಷ್ಣವಿ ಜಿ.ಕೆ. ಅವರ ರಿಮೋಟ್ ಸಿಸ್ಟಮ್ ಮಾನಿಟರಿಂಗ್ ಯುಜಿಂಗ್ ಪೈಥಾನ್ ಪ್ರೋಜೆಕ್ಟ್ ಆಧುನಿಕ ತಂತ್ರಜ್ಞಾನದಿಂದ ಒಳಗೊಂಡಿದ್ದು, ಪೈಥಾನ್ ಪ್ರೋಗ್ರಾಮಿಂಗ್ ಕೌಶಲ್ಯತೆ ಹೊಂದಿದೆ.
ವಿಭಾಗದ ಮುಖ್ಯಸ್ಥೆ ಹಾಗೂ ಪ್ರಾಧ್ಯಾಪಕಿ ಡಾ| ಭಾರತಿ ಹರಸೂರ ಅವರ ಮಾರ್ಗದರ್ಶನದಲ್ಲಿ ಪ್ರೋಜೆಕ್ಟ್ ನಡೆದಿದೆ.
ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ| ಭಾರತಿ ಹರಸೂರ, ಮಹಾವಿದ್ಯಾಲಯದ ಪ್ರಿನ್ಸಿಪಾಲ್ ಡಾ| ಎಸ್.ಎಸ್. ಆವಂತಿ, ಉಪ- ಪ್ರಿನ್ಸಿಪಾಲರಾದ ಡಾ| ಮಹಾದೇವಪ್ಪ ಗಾದಗೆ, ಡಾ| ಓಂಪ್ರಕಾಶ ಹೆಬ್ಟಾಳ, ಡೀನ್ ಅಕಾಡೆಮಿಕ್ಸ್ ಡಾ| ರಾಜೇಂದ್ರಕುಮಾರ ಹರಸೂರ ಹಾಗೂ ಮಾಹಿತಿ ವಿಜ್ಞಾನ ವಿಭಾಗದ ಡಾ| ವಿಶ್ವನಾಥ ಬುರಕಪಳ್ಳಿ, ಪ್ರೊ| ಉದಯ ಬಳಗಾರ, ಪ್ರೊ| ಅಶೋಕ ಪಾಟೀಲ, ಡಾ| ರಾಕೇಶಕುಮಾರ ಗೋದಿ, ಪ್ರೊ| ನಿತಿನ ಕಟ್ಟಿಶೆಟ್ಟರ, ಪ್ರೊ| ಪೂರ್ವಿಕಾ ಹರಸೂರ ಮೆಚ್ಚುಗೆ ವ್ಯಕ್ತಪಡಿಸಿದರು.