Advertisement

ಇನ್ನೋವಾ ಟಯರ್‌ ಸ್ಫೋಟಗೊಂಡು ಲಾರಿಗೆ ಢಿಕ್ಕಿ : ಐವರ ದುರ್ಮರಣ

10:29 AM May 02, 2019 | Vishnu Das |

ಚಿತ್ರದುರ್ಗ: ಇನ್ನೋವಾದ ಟಯರ್‌ ಸಿಡಿದು ಡಿವೈಡರ್‌ ಹಾರಿ ಲಾರಿಗೆ ಢಿಕ್ಕಿಯಾದ ಪರಿಣಾಮ ಒಂದೇ ಕುಟುಂಬದ ಐವರು ದಾರುಣವಾಗಿ ಸಾವನ್ನಪ್ಪಿದ ಭೀಕರಅವಘಡ ಗುರುವಾರ ಬೆಳಗ್ಗೆಹಿರಿಯೂರಿನ ಮೇಟಿಕುರ್ಕೆ ಬಳಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಓರ್ವರನ್ನ ಹಿರಿಯೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಮೃತ ದುರ್‌ದೈವಿಗಳು ತಾಯಮ್ಮ (59), ಸುಶ್ಮಿತಾ (12), ಲತಾ (26)ವೀಣಿಕಾ(3), ಜಾನವಿ (3) ಎಂದು ಗುರುತಿಸಲಾಗಿದೆ.

ಭದ್ರಾವತಿಯಲ್ಲಿ ಜಾತ್ರೆ ಮುಗಿಸಿ ಬೆಂಗಳೂರಿಗೆ ವಾಪಾಸಾಗುತ್ತಿದ್ದ ವೇಳೆ ಅವಘಡ ಸಂಭವಿಸಿದೆ.

ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next