Advertisement

ಗೋಡೆಗೆ ಢಿಕ್ಕಿಯಾಗಿ ಪಲ್ಟಿಯಾದ ಇನ್ನೋವಾ ಕಾರು: ಇಬ್ಬರು ಸ್ಥಳದಲ್ಲೇ ಸಾವು, ನಾಲ್ವರಿಗೆ ಗಾಯ

09:14 AM Mar 18, 2022 | Team Udayavani |

ಹುಬ್ಬಳ್ಳಿ: ನಗರದ ಹೊರವಲಯದ ಗಬ್ಬೂರ ಬೈಪಾಸ್ ಬಳಿ ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ವೃತ್ತ ಬಳಿಯ ಗೋಡೆಗೆ ಢಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಚಾಲಕ ಮತ್ತು ಪ್ರಯಾಣಿಕರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ.

Advertisement

ಅಪಘಾತದಲ್ಲಿ ದೊಡ್ಡಬಳ್ಳಾಪುರ ಚಾಲಕ ರಂಜಿತ ಮತ್ತು ಪ್ರಯಾಣಿಕ ರಾಕೇಶ ಮೃತಪಟ್ಟಿದ್ದಾರೆ. ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಇದನ್ನೂ ಓದಿ:ಉಡುಪಿ: ಕೃಷಿಗೆ ಶರಣಾದ ಮುಂಬಯಿ ಪತ್ರಕರ್ತ, ಹೊಟೇಲ್‌ ಉದ್ಯಮಿ

ದೊಡ್ಡ ಬಳ್ಳಾಪುರದಿಂದ ದಾಂಡೇಲಿಗೆ ಹೊರಟಿದ್ದಾಗ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ನಿತಿನ್, ಲೋಕೇಶ, ಅಮಿತ, ಪ್ರಮೋದ್ ಗಾಯಗೊಂಡಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next