Advertisement

INLD ನಫೆ ಸಿಂಗ್‌ ಹತ್ಯೆ: ಬಿಜೆಪಿ ನಾಯಕ ಸೇರಿ 7 ಮಂದಿ ವಿರುದ್ಧ ಎಫ್ಐಆರ್‌

10:46 AM Feb 27, 2024 | Team Udayavani |

ಚಂಡೀಗಢ: ಇಂಡಿಯನ್‌ ನ್ಯಾಶನಲ್‌ ಲೋಕದಳದ (ಐಎನ್‌ಎಲ್‌ಡಿ) ಹರಿಯಾಣ ಅಧ್ಯಕ್ಷ ನಫೆ ಸಿಂಗ್‌ ರಾಥೀ ಅವರ ಹತ್ಯೆ ಪ್ರಕರಣದಲ್ಲಿ ಬಿಜೆಪಿ ನಾಯಕ ನರೇಶ್‌ ಕೌಶಿಕ್‌ ಹಾಗೂ ಬಹದ್ದೂರ್‌ ಘರ್‌ ನಗರಪಾಲಿಕೆ ಅಧ್ಯಕ್ಷ ಸರೋಜ್‌ ರಾಥೀ ಸೇರಿ 7 ಮಂದಿ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದೆ. ಮತ್ತೂಂದೆಡೆ ನಫೆ ಅವರನ್ನು ಹತ್ಯೆಗೈಯ್ಯಲು ಹ್ಯುಂಡೈ ಐ10 ವಾಹನದಲ್ಲಿ ಬಂದಿದ್ದ ಕೊಲೆಗಾರರ ಚಲನವಲನಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅವುಗಳ ಆಧಾರದಲ್ಲಿ ಕೊಲೆಗಾರರ ಪತ್ತೆಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next