Advertisement

ಕಾರವಾರದಲ್ಲಿ ಕೊಂಕಣಿ ನಾಮಫಲಕಗಳಿಗೆ ಮಸಿ; ಉಗ್ರ ಹೋರಾಟದ ಎಚ್ಚರಿಕೆ

01:54 PM Jun 18, 2022 | Team Udayavani |

ಪಣಜಿ: ಕಾರವಾರದಲ್ಲಿ ಕೊಂಕಣಿ ಭಾಷೆಯಲ್ಲಿ ಬರೆದಿರುವ ನಾಮಫಲಕಗಳಿಗೆ ಕಪ್ಪು ಮಸಿ ಬಳಿದಿರುವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಬಂಧಿಸಿ 15 ದಿನಗಳ ಒಳಗೆ ಆ ನಾಮಫಲಕದಲ್ಲಿ ಮತ್ತೆ ಕೊಂಕಣಿ ಭಾಷೆಯಲ್ಲಿ ಬರೆಸಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಮರಾಠಿ ಭಾಷಾ ಪ್ರೇಮಿಗಳು ಎಚ್ಚರಿಕೆ ನೀಡಿದ್ದಾರೆ.

Advertisement

ಮರಾಠಿ ಭಾಷಾಭಿಮಾನಿಗಳು ಪಣಜಿಯ ಆಜಾದ್ ಮೈದಾನದಲ್ಲಿ ಮರಾಠಿ ಆಡಳಿತ ಭಾಷೆ ಹಕ್ಕಿಗಾಗಿ ಪ್ರತಿಭಟನೆ ನಡೆಸಿದರು.ಮರಾಠಿ ಭಾಷಾ ಸಂಸ್ಥಾಪನಾ ಸಮಿತಿ, ಗೋಮಾಂತಕ ಮರಾಠಿ ಅಕಾಡಮಿ, ಕೊಂಕಣಿ ಮರಾಠಿ ಪರಿಷತ್ ಗೋವಾ, ಮರಾಠಿ ಅಸೆ ಆಮಚಿ ಮಾಯಬೋಲಿ ಗ್ರೂಪ್, ಗೋಮಾಂತಕ ಮರಾಠಿ ಸಾಹಿತ್ಯ ಪರಿಷತ್, ಗೋಮಾಂತಕ ಮರಾಠಿ ಭಾಷಾ ಪರಿಷತ್ ಸಂಘಟನೆಯ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕೊಂಕಣಿ ಮರಾಠಿ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಸಾಗರ ಜಾವಡೇಕರ್, ಮರಾಠಿ ಅಧಿಕೃತ ಭಾಷಾ ಸಮಿತಿ ಸಂಚಾಲಜ ಗೋ.ರಾ.ಧವಳೀಕರ್ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next