ಬ್ಯಾಡಗಿ: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಬೆಂಬಲ ಬೆಲೆ ಮತ್ತು ಖರೀದಿ ಕೇಂದ್ರಗಳು ಕಾಗದಕ್ಕೆ ಮಾತ್ರಸೀಮಿತವಾಗಿರುವ ಘೋಷಣೆಗಳಾಗಿವೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯದೆ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯ ಹಾಗೂ ಕೃಷಿಕ ಸಮಾಜ ಅಧ್ಯಕ್ಷ ಗಂಗಣ್ಣ ಎಲಿ ಆರೋಪಿಸಿದರು.
ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ವರ್ಷ ಗೋವಿನ ಜೋಳ ಬೆಳೆದ ರೈತರು ಇದ್ದೂ ಸತ್ತಂತಾಗಿದೆ. ಖಾಸಗಿ ವ್ಯಾಪಾರಸ್ಥರು, ಪ್ರತಿ ಕ್ವಿಂಟಲ್‌ಗೆ ಕೇವಲ 1300 ರೂ.ಗೆ ಖರೀದಿಸುತ್ತಿದ್ದಾರೆ. ಇದರಿಂದ ರೈತರು ಆರ್ಥಿಕ ಹಿನ್ನಡೆ ಅನುಭವಿಸುವಂತಾಗಿದೆ. ಘೋಷಣೆ ಮಾಡಿದಂತೆ ಖರೀದಿ ಕೇಂದ್ರ ತೆರೆಯದೇ ಸರಕಾರಗಳು ರೈತರ ಬದುಕಿನ ಜೊತೆಯಲ್ಲಿ ಆಟವಾಡುತ್ತಿವೆ.
ಅಲ್ಲದೇ, ಒಂದು ಅಂಕಿ ಅಂಶದ ಪ್ರಕಾರ ಹಾವೇರಿ ಜಿಲ್ಲೆಯ ರೈತರಿಗೆ 600 ಕೋಟಿ ರೂ.ಗೂ ಅಧಿ ಕ ಹಣ ನಷ್ಟವಾಗಿದೆ. ಗೋವಿನಜೋಳ ಖರೀದಿ ಕೇಂದ್ರ ತೆರೆಯದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಹಾಗಾಗಿ, ಕೂಡಲೇ ಖರೀದಿ ಕೇಂದ್ರ ಆರಂಭಿಸುವಂತೆ ಆಗ್ರಹಿಸಿದರು. ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ರೈತರು ಎಂದೂ ಕೂಡ ಸಾಲ ಮನ್ನಾ ಮಾಡಿ ಎಂದು ಸರಕಾರಗಳನ್ನು ಕೇಳಿಲ್ಲ.
ಇದನ್ನೂ ಓದಿ:ರೈತರ ಹೋರಾಟದಲ್ಲಿ ಕೆಲವು ಪಕ್ಷಗಳು ರಾಜಕೀಯ ಬೇಳೆ ಬೇಯಿಸಲು ಪ್ರಯತ್ನಿಸುತ್ತಿವೆ : HDK
ಇವೆಲ್ಲ ಸರಕಾರ ನಡೆಸುತ್ತಿರುವ ರಾಜಕಾರಣಿಗಳ ಮತಬೇಟೆಗೆ ಮಾಡಿಕೊಂಡ ಯೋಜನೆಗಳು ಮಾತ್ರ. ಅಲ್ಲದೇ, ರೈತರ ಆದಾಯ ದ್ವಿಗುಣ ಎಂಬ ಹೆಸರಿನಲ್ಲಿ ಜಾರಿಗೆ ತರಲಾದ ಕೃಷಿ ಮಸೂದೆಗಳು ರೈತರ ಪಾಲಿಗೆ ಮರಣ ಶಾಸನಗಳಾಗಿವೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿರುದ್ರನಗೌಡ್ರ ಕಾಡನಗೌಡ್ರ, ರೈತ ಮುಖಂಡರು ಉಪಸ್ಥಿತರಿದ್ದರು.