ಮುಂಬೈ: ಜಸ್ಪ್ರೀತ್ ಬುಮ್ರಾ ಅವರು ಗುಣಮುಖರಾಗಿ ಮತ್ತೆ ಕಣಕ್ಕಿಳಿಯುತ್ತಾರೆಂಬ ಟೀಂ ಇಂಡಿಯಾ ಮತ್ತು ಮುಂಬೈ ಇಂಡಿಯನ್ಸ್ ಗೆ ಮತ್ತೆ ಹಿನ್ನಡೆಯಾಗಿದೆ. ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಚೇತರಿಕೆ ಮತ್ತಷ್ಟು ವಿಳಂಬವಾಗುತ್ತಿದೆ.
ಬಾರ್ಡರ್- ಗಾವಸ್ಕರ್ ಟ್ರೋಫಿಯಿಂದ ಹೊರಗುಳಿದ ಬಲಗೈ ವೇಗಿ ಬುಮ್ರಾ ಈಗ ಐಪಿಎಲ್ ಮಾತ್ರವಲ್ಲದೆ ಜೂನ್ ನಲ್ಲಿ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಕೂಡಾ ತಪ್ಪಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಬುಮ್ರಾ ಅವರು ಇನ್ನು ಬಹುತೇಕ ವಿಶ್ವಕಪ್ 2023 ರ ಹೊತ್ತಿಗೆ ಹಿಂದಿರುಗ ಬಹುದು ಎನ್ನಲಾಗಿದೆ.
ಇದನ್ನೂ ಓದಿ:ಕೊರಿಯಾ ರಾಯಭಾರಿಗಳ “ನಾಟು’ ಡಾನ್ಸ್‌ಗೆ ಮೋದಿ ಮೆಚ್ಚುಗೆ
ಬೆನ್ನುನೋವಿನಿಂದ ಬಳಲುತ್ತಿರುವ ಜಸ್ಪ್ರೀತ್ ಬುಮ್ರಾ ಅವರು ಕಳೆದ ಸಪ್ಟೆಂಬರ್ ಬಳಿಕ ಯಾವುದೇ ವೃತ್ತಿಪರ ಕ್ರಿಕೆಟ್ ಆಡಿಲ್ಲ. ಅವರಿಗೆ ಇನ್ನೂ ಎನ್ ಸಿಎ ಗ್ರೀನ್ ಸಿಗ್ನಲ್ ನೀಡಿಲ್ಲ.
ವರದಿಯ ಪ್ರಕಾರ, ಬುಮ್ರಾ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಅವರ ಗಾಯದ ಹಿನ್ನೆಲೆ ಮತ್ತು ಭಾರತ ತಂಡದಲ್ಲಿ ಅವರ ಪ್ರಾಮುಖ್ಯತೆಯ ಕಾರಣದಿಂದ ಬಿಸಿಸಿಐ ಅವರಿಗೆ ಮತ್ತಷ್ಟು ವಿಶ್ರಾಂತಿ ನೀಡುತ್ತಿದೆ.