Advertisement

ದೌರ್ಜನ್ಯ ಹೆಚ್ಚಳ ತಲೆ ತಗ್ಗಿಸುವ ವಿಚಾರ

12:48 PM Jan 11, 2017 | Team Udayavani |

ದಾವಣಗೆರೆ: ಬಸವಾದಿ ಶರಣರ ನಾಡಿನಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಕಿರುಕುಳ, ದೌರ್ಜನ್ಯ ನಡೆಯುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರು ಬಸವ ಸ್ವಾಮೀಜಿ ವಿಷಾದಿಸಿದ್ದಾರೆ. 

Advertisement

ಮಂಗಳವಾರ ಹದಡಿ ರಸ್ತೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಕದಳಿ ಮಹಿಳಾ ವೇದಿಕೆಯ 8ನೇ ವಾರ್ಷಿಕೋತ್ಸವ, ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಕದಳಿಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಹೊಸ ವರ್ಷದ ಸ್ವಾಗತ ಸಂಭ್ರಮದ ಸಂದರ್ಭದಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದು ನಮ್ಮ ಭಾರತೀಯ ಸಂಸ್ಕೃತಿಗೆ ಮಾಡಿದಂತಹ ಘೋರ ಅಪಚಾರ ಎಂದರು. ಮಹಿಳೆಯರಿಗೆ ದೈವತ್ವದ ಸ್ಥಾನಮಾನ ನೀಡಿರುವಂತಹ ಬಸವಾದಿ ಶರಣರ ನಾಡಿನಲ್ಲಿ ಮಹಿಳೆಯರೊಂದಿಗೆ ಗೌರವಯುತವಾಗಿ ನಡೆದುಕೊಳ್ಳದೇ ಇರುವಂತಹ ಘಟನೆಗಳು ನಡೆಯುತ್ತಿರುವುದು ವಿಪರ್ಯಾಸ.

ತಾಯಿ, ಸಹೋದರಿ ಹೀಗೆ ಎಲ್ಲ ಸ್ಥಾನದಲ್ಲಿರುವ ಮಹಿಳೆಯರಿಗೆ ಗೌರವ ನೀಡಬೇಕು ಎಂದು ತಿಳಿಸಿದರು. ಪ್ರಸ್ತುತ ವಾತಾವರಣದಲ್ಲಿ ಎಲ್ಲ ಕ್ಷೇತ್ರದಲ್ಲಿ ಮಹಿಳೆಯರು ಪುರುಷರಿಗೆ ಸಮಾನರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಹಾನ್‌ ಗುರು ಬಸವಣ್ಣನವರು 12ನೇ ಶತಮಾನದಲ್ಲೇ ಮಹಿಳೆಯರಿಗೆ ಸ್ಥಾನ ಮಾನ ನೀಡಿದ್ದರು. ಮಹಿಳೆಯರಿಗೆ ಧ್ವನಿಯಾದವರು. ಬಸವಾದಿ ಶರಣರು ಮಹಿಳಾ ಸಮಾನತೆಯ ಸಂದೇಶ ಸಾರಿದರು.

ಅಂತಹವರ ವಿಚಾರಧಾರೆ, ತತ್ವಾದರ್ಶಗಳನ್ನು ಮನೆ, ಮನಕ್ಕೆ ಮುಟ್ಟಿಸಬೇಕು. ಕದಳಿ ಮಹಿಳಾ ವೇದಿಕೆಯ ಪದಾಧಿಕಾರಿಗಳು ಅಂತಹಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಸಮಾಜದಲ್ಲಿ ಜಾಗೃತವಾಗಿರುವ ಮೌಡ್ಯತೆ, ಕಂದಾಚಾರದ ವಿರುದ್ಧ ಹೋರಾಡಬೇಕು ಎಂದು ತಿಳಿಸಿದರು. ಮನೆಯೇ ಮೊದಲ ಪಾಠ ಶಾಲೆ. ಮಹಿಳೆ ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿದೆ.

Advertisement

ಎಲ್ಲರ ಮೊದಲ ಗುರುವಾಗಿರುವ ತಾಯಂದಿರು ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಕಲಿಸಿಕೊಡಬೇಕು. ಮಕ್ಕಳು ತಮ್ಮ ಜೀವನದ ಗುರಿ ಸಾಧನೆಗೆ ಆಸರೆ, ಆಶ್ರಯದಾತರಾಗಬೇಕು. ಮಕ್ಕಳನ್ನು ವೈಜ್ಞಾನಿಕ, ವೈಚಾರಿಕ ಚಿಂತನೆಯಲ್ಲಿ ಬೆಳೆಸಬೇಕು. ತಾಯಿಯ ವಾತ್ಯಲ್ಯಕ್ಕೆ ಬೆಲೆ ಕಟ್ಟಲಿಕ್ಕೆ ಆಗುವುದೇ ಇಲ್ಲ. ಅಂತಹ ತಾಯಂದಿರು ಗಂಡು, ಹೆಣ್ಣು ಮಕ್ಕಳನ್ನು ಸಮಾನವಾಗಿ ಕಾಣಬೇಕು.

ಗಂಡು ಎಂದರೆ ಹೆಚ್ಚು ಪೀತಿ, ಹೆಣ್ಣು ಅಂದರೆ ತಾತ್ಸಾರ, ನಿರ್ಲಕ್ಷé ಮಾಡಬಾರದು. ಹೆಣ್ಣಿಗೆ ಹೆಣ್ಣೇ ಶತೃ… ಎನ್ನುವಂತೆ ನಡೆದುಕೊಳ್ಳಬಾರದು ಎಂದು ತಿಳಿಸಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್‌ ಅಧೀಕ್ಷಕಿ ಯಶೋಧಾ ಎಸ್‌. ವಂಟಿಗೋಡಿ ಮಾತನಾಡಿ, ನಮ್ಮ ಮಕ್ಕಳನ್ನು ಇನ್ನೊಬ್ಬರ ಮಕ್ಕಳೊಂದಿಗೆ ಹೋಲಿಕೆ ಮಾಡಿ ಮಾತನಾಡುವುದು ಸರಿಯಲ್ಲ. ಇಂಥದ್ದೇ, ಹೀಗೆಯೇ ಓದಬೇಕು. ಇಷ್ಟೇ ಮಾರ್ಕ್ಸ್ ತೆಗೆಯಬೇಕು.

ಇದೇ ಆಗಬೇಕು ಎಂಬ ಒತ್ತಡ ಹೇರುವುದು, ಸದಾ ಋಣಾತ್ಮಕ ಮಾತುಗಳಾಡುವುದರಿಂದ ನಮ್ಮ ಮಕ್ಕಳಳು ಹಾದಿ ತಪ್ಪಲು ನಾವೇ ಕಾರಣವಾಗುತ್ತೇವೆ. ಮಕ್ಕಳ ಆಸಕ್ತಿ, ಅಭಿರುಚಿಗೆ ತಕ್ಕಂತೆ ಓದಿಸಬೇಕು. ಒಳ್ಳೆಯ ನಾಗರಿಕನ್ನಾಗಿ ರೂಪಿಸಬೇಕು ಎಂದು ತಿಳಿಸಿದರು. ಕದಳಿಶ್ರೀ ಪ್ರಶಸ್ತಿ ಸೀÌಕರಿಸಿದ ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಕಿರುವಾಡಿ ಗಿರಿಜಮ್ಮ ಮಾತನಾಡಿ, ಕದಳಶ್ರೀ ಪ್ರಶಸ್ತಿಯು ಕದಳಿ ವೇದಿಕೆಯ ಎಲ್ಲ ಪದಾಧಿಕಾರಿಗಳಿಗೆ ಸಲ್ಲುತ್ತದೆ.

ತವರು ಮತ್ತು ಗಂಡನ ಮನೆಯಲ್ಲಿ ದೊರೆತ ಪ್ರೋತ್ಸಾಹ, ಸಹಕಾರದಿಂದಾಗಿಯೇ ತಾವು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಾಗ ಬಹಳಷ್ಟು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಹಣಕಾಸು ವಿಚಾರದಲ್ಲಿ ಎಚ್ಚರವಹಿಸಬೇಕು ಎಂದು ಕಿವಿಮಾತು ಹೇಳಿದರು. 

ಸುತ್ತೂರಿನ ಶ್ರೀ ನಿರಂಜನ ದೇವರು, ಸುಧಾ ದಿಬ್ದಳ್ಳಿ, ಪ್ರಮೀಳಾ ನಟರಾಜ್‌, ಯಶಾ ದಿನೇಶ್‌, ನಿರ್ಮಲಾ ಶಿವಕುಮಾರ್‌ ಇತರರು ಇದ್ದರು. ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಶಾಲಾ ಮಕ್ಕಳ ಶೈಕ್ಷಣಿಕ ದತ್ತು ಸೀÌಕಾರ, ಮಕ್ಕಳಿಗೆ ಪರಿಕರ ವಿತರಣೆ, ವಚನ ಗಾಯನ, ನೃತ್ಯ, ರೂಪಕ, ಕಿರು ನಾಟಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.   

Advertisement

Udayavani is now on Telegram. Click here to join our channel and stay updated with the latest news.

Next