ಸವಣೂರು: ಭವಿಷ್ಯದ ರೂವಾರಿಗಳಾದ ಮಕ್ಕಳಿಗೆ ಎಳವೆ ಯಿಂದಲೇ ಸಂಸ್ಕಾರ, ಸಂಸ್ಕೃತಿ ಸಿಗಬೇಕು. ಇದನ್ನು ಅಂಗನವಾಡಿಗಳು ನೀಡುತ್ತಿವೆ. ವ್ಯಕ್ತಿ ನಿರ್ಮಾಣದಲ್ಲಿ ಅಂಗನವಾಡಿಗಳ ಪಾತ್ರ ಮಹತ್ವದ್ದು. ಅಂಗನವಾಡಿಗಳು ಮಕ್ಕಳ ಶೈಕ್ಷಣಿಕ ಹಾದಿಗೆ ಮೈಲುಗಲ್ಲು ಎಂದು ಸುಳ್ಯ ಶಾಸಕ ಎಸ್. ಅಂಗಾರ ಅವರು ಹೇಳಿದರು.
ಅವರು ಬುಧವಾರ ಸವಣೂರು ಗ್ರಾಮದ ಪಣೆಮಜಲು ಅಂಗನವಾಡಿ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಜಿ.ಪಂ. ಸದಸ್ಯೆ ಪ್ರಮೀಳಾ ಜನಾರ್ದನ, ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ಎ.ಪಿ.ಎಂ.ಸಿ. ನಿರ್ದೇಶಕ ದಿನೇಶ್ ಮೆದು, ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ.ಕೆ., ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ ಬಟ್ಟೋಡಿ, ಗ್ರಾ.ಪಂ. ಉಪಾಧ್ಯಕ್ಷ ರವಿಕುಮಾರ್ ಬಿ.ಕೆ., ಸದಸ್ಯರಾದ ಅಬ್ದುಲ್ ರಜಾಕ್ ಕೆನರ, ಗಿರಿಶಂಕರ್ ಸುಲಾಯ, ಎಂ.ಎ. ರಫೀಕ್, ಚೆನ್ನು ಮಾಂತೂರು, ಮೀನಾಕ್ಷಿ ಬಂಬಿಲ, ಗಾಯತ್ರಿ ಬರೆಮೇಲು, ರಾಜೀವಿ ಶೆಟ್ಟಿ, ಪ್ರಕಾಶ್ ಕುದ್ಮನಮಜಲು, ಸತೀಶ್ ಬಲ್ಯಾಯ ಕನಡಕುಮೇರು, ನಾಗೇಶ್ ಓಡಂತರ್ಯ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ತಾರಾನಾಥ ಕಾಯರ್ಗ, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ. ಸುಪ್ರಿತ್ ರೈ ಖಂಡಿಗ, ಎಸ್‌ಡಿಪಿಐ ಕಾರ್ಯದರ್ಶಿ ಅಶ್ರಫ್ ಜನತಾ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಅಂಗನವಾಡಿ ಕೇಂದ್ರ ಬಾಲವಿಕಾಸ ಸಮಿತಿ ಅಧ್ಯಕ್ಷೆ ಅಸ್ಮಾನ್ ಲತೀಫ್, ಸವಣೂರು ಸ.ಹಿ.ಪ್ರಾ. ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಕೇಕುಡೆ, ಕಾಣಿಯೂರು ಗ್ರಾ.ಪಂ. ಸದಸ್ಯ ಗಣೇಶ್ ಉದನಡ್ಕ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ವಿಜಯಾ ಈಶ್ವರ ಗೌಡ ಕಾಯರ್ಗ ಸ್ವಾಗತಿಸಿ, ಸಹಾಯಕಿ ಸೌಮ್ಯಾ ವಂದಿಸಿದರು.