Advertisement
ಇದರಿಂದಾಗಿ ಶಿಕ್ಷಕರು ಮಕ್ಕಳ ಸಮೇತ ಶಾಲೆಯ ಆವರಣದಲ್ಲಿದ್ದ ಮರವೊಂದರ ಕೆಳಗೆ ಕಲಿಕಾ ಚಟುವಟಿಕೆ ನಡೆಸುವ ಅನಿವಾರ್ಯತೆಗೆ ಈಡಾಗಬೇಕಾಯಿತು. 4 ವರ್ಷಗಳ ಹಿಂದೆ ರಾಜೇಶ್ವರಿ ಇದೇ ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ನಂತರ ಕೆಲವೇ ದಿನಗಳಲ್ಲಿ ವಿಜಯಪುರದ ಗ್ರಾಮೀಣ ಬಿಇಒ ಕಚೇರಿಗೆ ಡೆಪ್ಯೂಟೇಶನ್ ಮೇಲೆ ತೆರಳಿದರು. ಅಲ್ಲಿಂದ ಇಲ್ಲೀವರೆಗೂ ಅವರು ಇಲ್ಲಿ ಸೇವೆಗೆ ಬಂದಿಲ್ಲ. ಇದರಿಂದ ಶಾಲೆಯ ಕಚೇರಿ ಕೆಲಸ ಕಾರ್ಯಗಳಿಗೆ ಸಾಕಷ್ಟು ತೊಂದರೆ ಆಗಿದ್ದು ಶಿಕ್ಷಕರೇ ಕಚೇರಿ ಕೆಲಸ ಮಾಡುವ ಅನಿವಾರ್ಯತೆ ಬಂದಿದೆ. ಮೇಲಾಗಿ ರಾಜೇಶ್ವರಿ ಅವರು ಇಲ್ಲೇ ಸಂಬಳ ಪಡೆಯುತ್ತಿರುವುದರಿಂದ ಇಲ್ಲಿಗೆ ಬೇರೊಬ್ಬರನ್ನು ತೆಗೆದುಕೊಳ್ಳಲೂ ಸಹಿತ ಅವಕಾಶ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ತೋಡಿಕೊಂಡರು.
Related Articles
Advertisement
ಪ್ರತಿಭಟನೆ ವಿಷಯ ತಿಳಿದ ಮುದ್ದೇಬಿಹಾಳ ಬಿಇಒ ಹಣಮಂತಗೌಡ ಮಿರ್ಜಿ ಅವರು ಶಾಲೆಗೆ ಧಾವಿಸಿ ಬಂದು ವಿಚಾರಣೆ ನಡೆಸಿದರು. ರಾಜೇಶ್ವರಿ ಅವರ ಬಿಡುಗಡೆ ವಿಷಯದಲ್ಲಿ ನಡೆದಿರುವ ಲೋಪವನ್ನು ಡಿಡಿಪಿಐ ಅವರ ಗಮನಕ್ಕೆ ತರಲಾಗಿದೆ. ಶುಕ್ರವಾರವೇ ರಾಜೇಶ್ವರಿ ಅವರನ್ನು ಅಲ್ಲಿಂದ ಬಿಡುಗಡೆಗೊಳಿಸಿ ಇಲ್ಲಿಯೇ ಸೇವೆ ಸಲ್ಲಿಸಲು ಕಳಿಸುತ್ತಾರೆ. ಆದ್ದರಿಂದ ಬೀಗ ತೆರವುಗೊಳಿಸಿ ಕಲಿಕಾ ಚಟುವಟಿಕೆ ಎಂದಿನಂತೆ ನಡೆಯಲು ಆಸ್ಪದ ಮಾಡಿಕೊಡಬೇಕು ಎಂದು ಕೋರಿದರು.
ಮೊದಲು ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು ಈಗಾಗಲೇ ಹಲವು ಬಾರಿ ಇಂಥದ್ದೇ ಭರವಸೆ ನೀಡಲಾಗಿದೆ. ಆದರೆ ರಾಜೇಶ್ವರಿ ಅವರು ಪ್ರಭಾವ ಬಳಸಿ ಅಲ್ಲೇ ಉಳಿಯುತ್ತಿದ್ದಾರೆ. ಅವರು ಇಲ್ಲಿಗೆ ಬಂದು ಕರ್ತವ್ಯಕ್ಕೆ ಹಾಜರಾಗಬೇಕು ಇಲ್ಲವೇ ಅವರನ್ನು ಇಲ್ಲಿಂದ ವರ್ಗಾವಣೆಗೊಳಿಸಿ ಅವರ ಸ್ಥಾನದಲ್ಲಿ ಬೇರೊಬ್ಬರನ್ನು ನೇಮಿಸಿ ಪರ್ಯಾಯ ವ್ಯವಸ್ಥೆ ಮಾಡಬೇಕು.
ಆಗಲೇ ಬೀಗ ತೆರವುಗೊಳಿಸುವುದಾಗಿ ಪಟ್ಟು ಹಿಡಿದರು. ಕೊನೆಗೂ ಕೆಲ ಹೊತ್ತಿನ ಹಗ್ಗಜಟ್ಟಾಟ, ಮನವೊಲಿಕೆ ಪರಿಣಾಮ ಗ್ರಾಮಸ್ಥರು ಬೀಗ ತೆರವುಗೊಳಿಸಿ ಕಲಿಕಾ ಚಟುವಟಿಕೆಗೆ ಅವಕಾಶ ಮಾಡಿಕೊಟ್ಟರು. ಬಿಇಓ ಕೊಟ್ಟ ಭರವಸೆ ಈಡೇರದಿದ್ದರೆ ಈ ಬಾರಿ ಮುದ್ದೇಬಿಹಾಳಕ್ಕೆ ಬಂದು ಬಿಇಓ ಕಚೇರಿಗೆ ಬೀಗ ಜಡಿದು ಪ್ರತಿಭಟಿಸುವ ಎಚ್ಚರಿಕೆ ನೀಡಿದರು.