Advertisement

ಜಿಎಸ್‌ಟಿ ನೆಟ್‌ವರ್ಕ್‌ ಸಮಸ್ಯೆಗೆ ವಿವರಣೆ ನೀಡುವಂತೆ ನಿಲೇಕಣಿಗೆ ಕೇಂದ್ರ ಸೂಚನೆ

09:24 AM Mar 11, 2020 | Hari Prasad |

ಹೊಸದಿಲ್ಲಿ: ಸರಕು ಸೇವೆ ಮತ್ತು ತೆರಿಗೆಯ (ಜಿಎಸ್‌ಟಿ) ತಾಂತ್ರಿಕ ವ್ಯವಸ್ಥೆ ನಿರ್ಮಿಸಿ ಕೊಟ್ಟ ಇನ್ಫೋಸಿಸ್‌ ಸಂಸ್ಥೆಗೆ ಜಿಎಸ್‌ಟಿ ನೆಟ್‌ವರ್ಕ್‌ನಲ್ಲಿ ಉಂಟಾಗಿರುವ ಸಮಸ್ಯೆ ಬಗ್ಗೆ ವಿವರಣೆ ನೀಡುವಂತೆ ಕೇಂದ್ರ ಸರಕಾರ ಸೂಚಿಸಿದೆ.

Advertisement

ಹೀಗಾಗಿ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಇನ್ಫೋಸಿಸ್‌ ಅಧ್ಯಕ್ಷ ನಂದನ್‌ ನಿಲೇಕಣಿ ಮುಂದಿನ ವಾರ ಜಿಎಸ್‌ಟಿ ಮಂಡಳಿ ಮುಂದೆ ಸಮಸ್ಯೆಗಳು ಮತ್ತು ಅದರ ನಿವಾರಣೆಯ ಬಗ್ಗೆ ಸೂಕ್ತ ಪ್ರಾತ್ಯಕ್ಷಿಕೆ ನೀಡುವಂತೆ ಸೂಚಿಸಿದೆ.

ಸಮಸ್ಯೆಗಳಿದ್ದರೂ, ಅದಕ್ಕೆ ಪರಿಹಾರ ಕಂಡುಕೊಳ್ಳದೇ ಇರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ನಿರ್ಧರಿಸಲಾಗಿದೆ. ಶನಿವಾರ ನವದಿಲ್ಲಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾ ರಾಮನ್‌ ನೇತೃತ್ವದಲ್ಲಿ ಜಿಎಸ್‌ಟಿ ಮಡಳಿ ಸಭೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next