Advertisement

ಮೂಲಸೌಕರ್ಯ ಅವಶ್ಯ: ಡಾ|ಜಯಮಾಲಾ

01:05 AM Mar 03, 2019 | Team Udayavani |

ಬ್ರಹ್ಮಾವರ: ಆಸ್ಪತ್ರೆಗೆ ಹೊಸ ಕಟ್ಟಡದ ಜತೆಗೆ ಮೂಲಸೌಕರ್ಯ ಅತೀಅವಶ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ಹೇಳಿದರು.

Advertisement

ಅವರು ಶನಿವಾರ ಬ್ರಹ್ಮಾವರದಲ್ಲಿ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಮತ್ತು ಸುಧಾರಣೆ ಯೋಜನೆಯನ್ವಯ ನಿರ್ಮಿಸಲಾದ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಮುದಾಯ ಆರೋಗ್ಯ ಕೇಂದ್ರ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆಯಾಗಿ ಬದಲಾಗಬೇಕು. ವೈದ್ಯರು ಮತ್ತು ದಾದಿಯರು ಸಂಘಟಿತರಾಗಿ ದುಡಿದಲ್ಲಿ ಆಸ್ಪತ್ರೆಗೆ ಉತ್ತಮ ಹೆಸರು ಬರುತ್ತದೆ ಎಂದರು.

ಹೆರಿಗೆ ತಜ್ಞರು
ಕೇಂದ್ರಕ್ಕೆ ನೇಮಕವಾದ ಹೆರಿಗೆ ತಜ್ಞರನ್ನು ಉಡುಪಿಗೆ ನಿಯೋಜನೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಅವರನ್ನು ಇಲ್ಲಿಗೇ ನೇಮಕ ಮಾಡುವಲ್ಲಿ ಕಾರ್ಯನಿರ್ವಹಿಸುತ್ತೇನೆ. ಪ್ರಮೋದ್‌ ಮಧ್ವರಾಜ್‌ ಅವರು ಸಚಿವರಾಗಿದ್ದ ಅವಧಿಯಲ್ಲಿ ಉಡುಪಿ ಕ್ಷೇತ್ರಕ್ಕೆ 2,000 ಕೋಟಿ ರೂ.ಗೂ ಮಿಕ್ಕಿದ ಅನುದಾನ ತಂದಿದ್ದರು. ಈ ಕಟ್ಟಡವೂ ಅವರ ಅವಧಿಯಲ್ಲೇ ಮಂಜೂರಾಗಿತ್ತು ಎಂದು ಡಾ| ಜಯಮಾಲಾ ತಿಳಿಸಿದರು.

ವಾರಂಬಳ್ಳಿ ಗ್ರಾ.ಪಂ. ಅಧ್ಯಕ್ಷ ನವೀನ್‌ಚಂದ್ರ ನಾಯಕ್‌ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಸದಸ್ಯರಾದ ಕುಸುಮಾ ಪೂಜಾರಿ, ಸುಧೀರ್‌ ಕುಮಾರ್‌ ಶೆಟ್ಟಿ, ವಸಂತಿ ಪೂಜಾರಿ, ಸ್ಥಳೀಯ ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಸರಸ್ವತಿ ನಾಯ್ಕ, ಜಯಲಕ್ಷ್ಮೀ ಶೆಟ್ಟಿ, ಪ್ರತಿಮಾ ಶೆಟ್ಟಿ, ಜಿಲಾ ಆರೋಗ್ಯಾಧಿಕಾರಿ ಡಾ| ಓಂಪ್ರಕಾಶ್‌ ಉಪಸ್ಥಿತರಿದ್ದರು.

Advertisement

ಸಮ್ಮಾನ
ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯಾ ಧಿಕಾರಿಗಳನ್ನು ಮತ್ತು ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಿಸಿದ ಪ್ರಭಾಕರ್‌ ಯೆಯ್ನಾಡಿ ಅವರನ್ನು ಸಮ್ಮಾನಿಸಲಾಯಿತು.ತಾಲೂಕು ಆರೋಗ್ಯಾ ಧಿಕಾರಿ ಡಾ| ನಾಗರತ್ನಾ ಸ್ವಾಗತಿಸಿ, ಮಂಜುನಾಥ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next