ಬೆಂಗಳೂರು: ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಈವರೆಗೆ ಶಿಥಿಲಾವಸ್ಥೆಯಲ್ಲಿದ್ದ ಎಷ್ಟು ಶಾಲಾ ಕಟ್ಟಡಗಳನ್ನು ದುರಸ್ತಿ ಮಾಡ ಲಾಗಿದೆ. ಎಷ್ಟು ಕಟ್ಟಡಗಳನ್ನು ನವೀಕರಣ ಗೊಳಿಸಲಾಗಿದೆ ಎಂಬ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
“ಆ್ಯಂಟಿ ಕರಪ್ಷನ್ ಕೌನ್ಸಿಲ್ ಆಫ್ ಇಂಡಿಯಾ’ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾ ಬಿ.ವಿ. ನಾಗರತ್ನ ಅವರ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ವಿಚಾರಣೆ ವೇಳೆ ಶಿಕ್ಷಣ ಇಲಾಖೆ ಹೆಚ್ಚುವರಿ ನಿರ್ದೇಶಕ ಪ್ರಮಾಣಪತ್ರ ಸಲ್ಲಿಸಿ, 584 ಶಾಲಾ ಕಟ್ಟಡಗಳ ನವೀಕರಣ ಮಾಡಲಾಗಿದ್ದು, 573 ಹೊಸ ತರಗತಿ ಕೊಠಡಿಗಳನ್ನು ಹಾಗೂ 640 ಹೊಸ ಶೌಚಾ ಲಯಗಳನ್ನು ನಿರ್ಮಿಸಲಾಗುತ್ತಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಇದನ್ನೂ ಓದಿ:ಜಿಲ್ಲಾಸ್ಪತ್ರೆಗೆ ಡಿಸಿ ದಿಢೀರ್ ಭೇಟಿ
ಅದನ್ನು ಪರಿಶೀಲಿಸಿದ ನ್ಯಾಯಪೀಠ, ಪ್ರಮಾಣ ಪತ್ರದಲ್ಲಿ ನವೀಕರಣ, ದುರಸ್ತಿ ಕಾರ್ಯದ ಬಗ್ಗೆ ಸಮಗ್ರ ವಿವರಗಳಿಲ್ಲ, ಅಲ್ಲದೆ ಎಷ್ಟು ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ, ಎಷ್ಟು ಗುರುತಿಸಲಾಗಿದೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಸುಮ್ಮನೆ “ಗಾಳಿ ಯಲ್ಲಿ ಗುಂಡು’ ಹಾರಿಸಿದಂತೆ ಮಾಹಿತಿ ನೀಡಲಾಗಿದೆ.
ಇದನ್ನು ಪರಿಗಣಿಸಿ ನಾವು ಆ ರೀತಿ ಗಾಳಿಯಲ್ಲಿ ಆದೇಶಗಳನ್ನು ನೀಡಲು ಸಾಧ್ಯವಿಲ್ಲ. ಆದ್ದರಿಂದ ಈ ಪ್ರಮಾಣಪತ್ರವನ್ನು ಒಪ್ಪಲಾಗದು ಎಂದು ನ್ಯಾಯ ಪೀಠ ಹೇಳಿತು. ಅಲ್ಲದೆ, ಸರ್ಕಾರ ಯಾವ್ಯಾವ ಕಾಮ ಗಾರಿಗಳನ್ನು ಕೈಗೊಂಡಿದೆ ಎಂಬ ಕುರಿತು ಎಲ್ಲಾ ಕಾಮ ಗಾರಿಗಳ ವಿಳಾಸ ಸಹಿತ ಮಾಹಿತಿಯನ್ನು ಫೆ.25ರೊಳಗೆ ನೀಡಬೇಕು ಎಂದು ಆದೇಶಿಸಿ ವಿಚಾರಣೆಯನ್ನು ಮುಂದೂಡಿತು.