Advertisement

ಕೆಂಪೇಗೌಡ ಬಡಾವಣೆಗೆ ಮೂಲಸೌಕರ್ಯ

12:28 PM Feb 08, 2022 | Team Udayavani |

ಬೆಂಗಳೂರು: ಬಹುನಿರೀಕ್ಷಿತ ನಾಡಪ್ರಭು ಕೆಂಪೇಗೌಡ ಬಡಾವಣೆಯ ಸುಮಾರು 26 ಸಾವಿರ ನಿವೇಶನದಾರರಿಗೆ ಮೂಲಭೂತ ಸೌಕರ್ಯಕಲ್ಪಿಸುವ ಕಾರ್ಯಕ್ಕೆ ಬೆಂಗಳೂರು ಅಭಿವೃದ್ಧಿಪ್ರಾಧಿಕಾರ (ಬಿಡಿಎ) ಮುಂದಾಗಿದ್ದು ಇದೇ ವರ್ಷದ ಜೂನ್‌ ಅಥವಾ ಜುಲೈ ವೇಳೆಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಿಯಾ ಯೋಜನೆ ರೂಪಿಸಿದೆ.

Advertisement

2016ರ ಅವಧಿಯಲ್ಲಿ ಆರಂಭವಾದ ನಾಡಪ್ರಭು ಕೆಂಪೇಗೌಡ ಬಡಾವಣೆ ಕಾರ್ಯ ಕುಂಟುತ್ತ ಸಾಗಿದ್ದುನಿವೇಶನದಾರರ ಒತ್ತಡಕ್ಕೆ ಮಣಿದು ಇದೀಗ ಮೂಲಸೌಕರ್ಯ ಕಾಮಗಾರಿಗಳಿಗೆ ವೇಗ ಕೊಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ಕೋವಿಡ್‌ ಹಿನ್ನೆಲೆಯಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆ ನಿವೇಶನದಾರರಿಗೆ ಮೂಲಭೂತ ಸೌಲಭ್ಯಕಲ್ಪಿಸುವಲ್ಲಿ ವಿಳಂಬವಾಗಿತ್ತು. . ಕೋವಿಡ್‌ ಲೌಕ್‌ಡೌನ್‌ ವೇಳೆ ಸಿಮೆಂಟ್‌ ಸೇರಿದಂತೆ ಮತ್ತಿತರರಪರಿಕರಗಳು ಸಕಾಲಕ್ಕೆ ದೊರಕ ಹಿನ್ನೆಲೆಯಲ್ಲಿನಾಡಪ್ರಭುವ ಕೆಂಪೇಗೌಡ ನಿವೇಶನದಾರರಿಗೆಮೂಲಸೌಕರ್ಯ ಒದಿಗಸುವ ಆಗಿರಲಿಲ್ಲ. ಆಹಿನ್ನೆಲೆಯಲ್ಲಿ ಇದೀಗ ಬೆಂಗಳೂರು ಅಭಿವೃದ್ಧಿಪ್ರಾಧಿಕಾರ ಜೂನ್‌ ಅಥವಾ ಜುಲೈ ವೇಳೆಗೆಸಂಪೂರ್ಣವಾಗಿ ಕಾಮಗಾರಿ ಪೂರ್ಣಗೊಳಿಸಲು ಗುರಿ ಹಾಕಿಕೊಂಡಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆಯಸರಿಯಾದ ಅಂದಾಜು ಮಾಡುವ ಬಗ್ಗೆ ಬಿಡಿಎ ಈ ಹಿಂದೆ ಖಾಸಗಿ ಕಂಪನಿಗೆ ನೀಡಿತ್ತು. ಆದರೆ ಆ ವೇಳೆರೈತರು ಹೋರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಭಯಪಟ್ಟ ಆ ಕಂಪನಿಯ ಅಧಿಕಾರಿಗಳು ನಾಡಪ್ರಭು ಕೆಂಪೇಗೌಡ ಬಡಾವಣೆಯನ್ನು ಸರಿಯಾಗಿ ಅಂದಾಜುಮಾಡಿರಲಿಲ್ಲ. ಇದು ಕೂಡ ಒಂದು ರೀತಿಯಲ್ಲಿಕೆಂಪೇಗೌಡ ಬಡಾವಣೆಯ ಕಾಮಗಾರಿ ವಿಳಂಬಕ್ಕೆಕಾರಣವಾಗಿದೆ ಎಂದು ಬಿಡಿಎ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

ಈಗಾಗಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 26 ಸಾವಿರ ಸೈಟ್‌ಗಳನ್ನು ಹಂಚಿಕೆ ಮಾಡಿದೆ. ಈಗಾಗಲೇ ನಿವೇಶನ ಹಂಚಿಕೆ ಮಾಡಿರುವಂತಹ ನಿವೇಶನದಾರರಿಗೆ ರಸ್ತೆ, ವಿದ್ಯುತ್‌, ನೀರು ಸೇರಿದಂತೆ ಎಲ್ಲಾ ರೀತಿಯಸವಲತ್ತುಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಕೂಡ ನಡೆದಿದೆ ಎಂದು ಮಾಹಿತಿ ನೀಡುತ್ತಾರೆ.

Advertisement

ಎರಡು ಹಂತಗಳಲ್ಲಿ ಸೈಟ್‌ ಹಂಚಿಕೆ: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 2016 ಮತ್ತು2018ರಲ್ಲಿ ಒಟ್ಟು ಎರಡು ಹಂತಗಳಲ್ಲಿ ನಿವೇಶನಗಳನ್ನುಹಂಚಿಕೆ ಮಾಡಲಾಗಿತ್ತು. 2016ರಲ್ಲಿ ರಲ್ಲಿ 5 ಸಾವಿರಸೈಟ್‌ಗಳನ್ನು ಹಂಚಿಕೆ ಮಾಡಲಾಗಿದೆ. ಹಾಗೆಯೇ2018ರಲ್ಲಿ 2 ಸಾವಿರ ಸೈಟ್‌ಗಳನ್ನು ಬಿಡಿಎ ವತಿಯಿಂದ ಹಂಚಿಕೆ ಮಾಡಲಾಗಿದೆ. ಇದರ ಜತೆಗೆ ಜಮೀನುನೀಡಿದ ರೈತರಿಗೆ ಕೂಡ 12 ರಿಂದ 13 ಸಾವಿರ ಸೈಟ್‌ಗಳನ್ನು ನೀಡಲಾಗಿದೆ. ಹಾಗೆಯೇ 3500 ಕಾರ್ನರ್‌ ಸೈಟ್‌ಗಳಿವೆ. ಜತೆಗೆ 1600 ನಿವೇಶನಗಳನ್ನು ಅರ್ಕಾವತಿ ಬಡಾವಣೆಯಲ್ಲಿ ಬದಲಿ ನಿವೇಶನದಾರರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನೀಡಿದೆ.

ರೇರಾ ಮೆಟ್ಟಿಲೇರಿದ್ದ ನಿವೇಶನದಾರರು :

ಈ ಹಿಂದೆ ನಾಡಪ್ರಭು ಕೆಂಪೇಗೌಡ ಬಡಾವಣೆಯ ನಿವೇಶನದಾರರ ಮುಕ್ತ ವೇದಿಕೆ ಮೂಲ ಸೌಲಭ್ಯಕಲ್ಪಿಸುವ ನಿರ್ಲಕ್ಷ್ಯ ತಾಳುತ್ತಿರುವ ಬಿಡಿಎ ಧೋರಣೆ ವಿರುದ್ಧ ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ (ರೇರಾ)ಗೆ ದೂರು ನೀಡಿತ್ತು. ಈ ಬಗ್ಗೆಕಳೆದ ಡಿಸೆಂಬರ್‌ನಲ್ಲಿ ನಡೆದ ವಿಚಾರಣೆ ವೇಳೆ ಹಾಜರಾಗಿದ್ದ ಬಿಡಿಎ ಅಧಿಕಾರಿಗಳು ಕೋವಿಡ್‌ ಹಿನ್ನೆಲೆಯಲ್ಲಿ ಸಕಾಲದಲ್ಲಿ ಮೂಲ ಭೂತ ಸೌಲಭ್ಯಗಳನ್ನು ಕಲ್ಪಿಸಲು ಆಗಲಿಲ್ಲ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಕಲಾವಕಾಶ ನೀಡುವಂತೆ ಮನವಿ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಾಡಪ್ರಭುಕೆಂಪೇಗೌಡ ಬಡಾವಣೆಯ ನಿವೇಶನದಾರರ ಮುಕ್ತವೇದಿಕೆ ಕಾರ್ಯದರ್ಶಿ ಸೂರ್ಯಕಿರಣ್‌, ಈ ಹಿಂದೆಅಂದರೆ 2016ರಲ್ಲಿ ನಮಗೆ ನಿವೇಶನ ನೀಡಿದ ವೇಳೆಬಿಡಿಎ 2018ರಲ್ಲಿ ಬಡಾವಣೆಗೆ ಸಂಪೂರ್ಣಮೂಲಭೂತ ಸೌಕರ್ಯ ಕಲ್ಪಿಸುವುದಾಗಿ ಹೇಳಿತ್ತು. ಆದರೆ 2022 ಬಂದರೂ ಇನ್ನೂ ಪೂರ್ಣವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೋವಿಡ್‌ ಹಿನ್ನೆಲೆಯಲ್ಲಿ ನಾಡುಪ್ರಭು ಕೆಂಪೇಗೌಡ ಬಡಾವಣೆಗೆ ಮೂಲಭೂತಸೌಕರ್ಯ ಕಲ್ಪಿಸುವಲ್ಲಿ ಸ್ವಲ್ಪಮಟ್ಟಿನವಿಳಂಬವಾಗಿದೆ. ಈಗಾಗಲೇ ನಾಡಪ್ರಭುಕೆಂಪೇಗೌಡ ಬಡಾವಣೆಯಲ್ಲಿ ವಿದ್ಯುತ್‌ಮತ್ತು ಸಮರ್ಪಕ ರಸ್ತೆ ಮಾಡುವ ಕೆಲಸ ಕೂಡಸಾಗಿದೆ. ಶೀಘ್ರದಲ್ಲೇ ಮೂಲ ಸೌಕರ್ಯ ಒದಗಿಸುವ ಕಾರ್ಯ ಪೂರ್ಣಗೊಳ್ಳಲಿದೆ. ಎಂ.ರಾಜೇಗೌಡ, ಬಿಡಿಎ ಆಯುಕ್ತ

 

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next