Advertisement
ಕಾರ್ಕಳ ಪುರಸಭೆ ವ್ಯಾಪ್ತಿಯ ಕತ್ತಿಮಾರ್ ಸಮೀಪ ಮುಗೇರ ಸಮುದಾಯದ ದಯಾನಂದ ಅವರು ವಯಸ್ಸಿಗೆ ಬಂದ ಹೆಣ್ಮಕ್ಕಳೊಂದಿಗೆ ತಟ್ಟಿಯ ಒಳಗೆ ಜೀವನ ಸಾಗಿಸುತ್ತಿದ್ದಾರೆ. 45ರ ವಯಸ್ಸಿನ ದಯಾನಂದ ಕೂಲಿ ಕೆಲಸಕ್ಕೆ ಹೋಗುತ್ತಿದ್ದರೂ ಇವರಿಗೆ ಆಗಾಗ್ಗೆ ಅನಾರೋಗ್ಯ ಕಾಡುತ್ತಿರುತ್ತದೆ. ಹೆಚ್ಚಿನ ದಿನಗಳಲ್ಲಿ ಮನೆಗಳಲ್ಲಿ ಉಳಿಯುವ ಪರಿಸ್ಥಿತಿ ಅವರದು ಎನ್ನುತ್ತಾರೆ ಮಕ್ಕಳು.
ಏಳನೇ ತರಗತಿವರೆಗೆ ಕಲಿತಿರುವ ಹಿರಿಯ ಮಗಳು ಸಂಗೀತಾರಿಗೆ 29 ವಯಸ್ಸು, 5ನೇ ತನಕ ವಿದ್ಯಾಭ್ಯಾಸ ಹೊಂದಿದ ಕಿರಿಯ ಮಗಳಿಗೆ 16ನೇ ವಯಸ್ಸು. ಹಿರಿಯ ಮಗಳು ಮನೆಯಲ್ಲೇ ಉಳಿದಿದ್ದರೆ, ಕಿರಿಯ ಮಗಳು ನರ್ಸರಿ ಯೊಂದಕ್ಕೆ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಇವರ ದುಡಿಮೆಯಿಂದ ಬಂದ ಆದಾಯದಿಂದ ಜೀವನ ಸಾಗಿಸುತ್ತಿದ್ದಾರೆ. ಮಳೆಗಾಲದಲ್ಲಿ ಇವರ ಪಾಡು ಶೋಚನೀಯ. ತಟ್ಟಿಯ ಸಂದಿಯಿಂದಲೂ ನೀರು ಬಂದು ಗುಡಿಸಲನ್ನು ಒ¨ªೆ ಮಾಡುತ್ತದೆ. ಅದೇ ಒ¨ªೆ ನೆಲದಲ್ಲಿ ಪ್ಲಾಸ್ಟಿಕ್ ಹಾಗೂ ಗೋಣಿ ಚೀಲ ಹಾಸಿ ರಾತ್ರಿ ಕಳೆಯುತ್ತಾರೆ. ಇನ್ನು ಮನೆಯಲ್ಲಿ ಸ್ನಾನದ ಕೊಠಡಿಯಿಲ್ಲ. ಆದ್ದರಿಂದ ರಾತ್ರಿಯಾದ ಮೇಲೆಯೇ ಹೆಣ್ಮಕ್ಕಳು ಸ್ನಾನ ಮಾಡುವ ಪರಿಸ್ಥಿತಿಯಿದೆ.
Related Articles
ಹಲವು ವರ್ಷಗಳಿಂದ ಇಲ್ಲೇ ಜೀವನ ಸಾಗಿಸುತ್ತಿರುವ ಈ ಕುಟುಂಬಕ್ಕೆ ಆರಂಭದಲ್ಲಿ ಮುಳಿಹುಲ್ಲಿನ ಮಾಡಿನ ಮನೆಯಿತ್ತು. ಅದು ಶಿಥಿಲಗೊಂಡಿದ್ದರಿಂದ ವಾರ್ಡ್‌ನ ಕೌನ್ಸಿಲರ್ ನಳಿನಿ ಅವರು ಛಾವಣಿಗೆ ಶೀಟ್ ಒದಗಿಸಿಕೊಟ್ಟಿದ್ದರು. ಸುತ್ತಲೂ ಗೋಡೆ ಶಿಥಿಲವಾದ್ದರಿಂದ ತಟ್ಟಿ ಕಟ್ಟಿದ್ದಾರೆ. ಇವರು ಪಡಿತರ ಚೀಟಿ, ಆಧಾರ್ ಕಾರ್ಡ್ ಇತ್ಯಾದಿ ಎಲ್ಲ ದಾಖಲೆ ಹೊಂದಿದ್ದಾರೆ. ಮನೆ ತೆರಿಗೆಯನ್ನೂ ಪಾವತಿಸುತ್ತಾರೆ. ಆದರೆ ಮನೆ ಜಾಗಕ್ಕೆ ದಾಖಲೆ ಇಲ್ಲ. ಈ ಬಗ್ಗೆ ಒಂದು ಬಾರಿ ಸಂಗೀತಾ ಅವರು ಪುರಸಭೆಗೆ ಹೋಗಿ ವಿಚಾರಿಸಿದ್ದರಾದರೂ ಪ್ರಯೋಜನವಾಗಿಲ್ಲ. ಕೂಲಿ ಆದಾಯ ಬಿಟ್ಟರೆ ಹೆಚ್ಚಿನ ಆದಾಯ ಇವರಿಗಿಲ್ಲ. ಮನೆ ಕಟ್ಟಿಕೊಳ್ಳಲು ಶಕ್ತಿ ಇಲ್ಲದ ಈ ಕುಟುಂಬ ಸಹಾಯದ ನಿರೀಕ್ಷೆಯಲ್ಲಿದೆ.
Advertisement