Advertisement
ನೂರಕ್ಕೂ ಅಧಿಕ ಮನೆಕಳಿಹಿತ್ಲು ಎನ್ನುವ ಊರು ಶಿರೂರು ಗ್ರಾಮದ ಕಡಲ ತಡಿಯ ಹಡವಿನಕೋಣೆ ಹಾಗೂ ಕೇರಿ ರಸ್ತೆಯ ನಡುವೆ ಇದೆ. ಸುಮಾರು ನೂರಕ್ಕೂ ಅಧಿಕ ಮನೆಗಳಿವೆ. ಭೂ ಹಿಡುವಳಿ ಮಸೂದೆಯಿಂದ ಕೆಲವರಿಗೆ ಜಾಗ ಮಂಜೂರಾದರೆ ಇನ್ನು ಕೆಲವರು ತಲೆತಲಾಂತರಗಳಿಂದ ಒಡೆಯರ ಜಾಗದಲ್ಲಿ ವಾಸಿಸುತ್ತಿದ್ದಾರೆ. 94/ಸಿ ಕೂಡ ಕೆಲವರಿಗೆ ಮಂಜೂರಾತಿ ಆಗಿಲ್ಲ.
ಊರಿನ ಒಳಭಾಗಕ್ಕೆ ಸಮರ್ಪಕವಾದ ರಸ್ತೆಗಳಿಲ್ಲ. ವರ್ಷ ಪೂರ್ತಿ ಉಪ್ಪು ನೀರಿನಿಂದಾಗಿ ಕುಡಿಯುವ ನೀರಿನ ಸಮಸ್ಯೆ ನಿತ್ಯ ಯಾತನೆಯಾಗಿದೆ. ಏಕೈಕ ಹಿ.ಪ್ರಾ. ಶಾಲೆ ಸ್ಥಳೀಯರ ಸಹಕಾರದಿಂದ ಒಂದಿಷ್ಟು ಅಭಿವೃದ್ಧಿ ಕಂಡಿದೆ. ಇನ್ನುಳಿದಂತೆ ನದಿಯ ಪಕ್ಕದಲ್ಲಿರುವ ಮನೆಯವರು ಒಂದು ಕೊಡ ನೀರಿಗಾಗಿ ಕಿ.ಮೀ. ದೂರ ನಡೆಯಬೇಕಿದೆ. ಸಮಸ್ಯೆಗಳ ನಿವಾರಣೆಗಾಗಿ ಮನವಿ ನೀಡಿದರೂ ಚುನಾಯಿತ ಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿಲ್ಲ ಎಂಬುದು ಸ್ಥಳೀಯರ ಆರೋಪ. ನೈಸರ್ಗಿಕವಾಗಿ ಸೌಂದರ್ಯ ಹೊಂದಿರುವ ಇಲ್ಲಿನ ಬೀಚ್ ಅಭಿವೃದ್ಧಿ ಕಾಣಬಹುದಾಗಿದೆ. ರಸ್ತೆ ಮುಂತಾದ ವಿಷಯದಲ್ಲಿ ಹಲವು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಗ್ರಾ.ಪಂ. ಕೂಡ ಈ ಬಗ್ಗೆ ಗಮನಹರಿಸಬೇಕಾಗಿದೆ. ಜಿಲ್ಲಾಡಳಿತ ಗಮನಹರಿಸಲಿ
ಕಳಿಹಿತ್ಲು ಕಳೆದ ಹಲವು ವರ್ಷಗಳಿಂದ ಮೂಲಭೂತ ಸಮಸ್ಯೆಗಳಿಂದ ನಲುಗುತ್ತಿದೆ. ಕನಿಷ್ಠ ಪಕ್ಷ ಇಲ್ಲಿನ ಜನರಿಗೆ ರಸ್ತೆ ಕೂಡ ಇಲ್ಲವಾದುದರಿಂದ ಮಳೆಗಾಲದಲ್ಲಿ ವಾಹನಬಿಟ್ಟು ನಡೆದುಕೊಂಡು ಬರಬೇಕಾಗಿದೆ. ಈ ಕುರಿತು ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಗಮನಹರಿಸಬೇಕಾಗಿದೆ.
-ವಸಂತ ಮೊಗೇರ ಕಳಿಹಿತ್ಲು, ಸ್ಥಳೀಯರು.