Advertisement

ಇನ್ಫಿ 4ನೇ ತ್ತೈಮಾಸಿಕದ ಲಾಭ ಶೇ.2.4 ಹೆಚ್ಚಳ

06:00 AM Apr 14, 2018 | Team Udayavani |

ನವದೆಹಲಿ: ನಿರೀಕ್ಷೆಯಂತೆಯೇ ಭಾರತದ ಐಟಿ ದಿಗ್ಗಜ ಇನ್ಫೋಸಿಸ್‌ ಲಿಮಿಟೆಡ್‌ನ‌ 4ನೇ ತ್ತೈಮಾಸಿಕ ಅವಧಿಯ ನಿವ್ವಳ ಲಾಭದ ಪ್ರಮಾಣ ಶೇ.2.4ರಷ್ಟು ಹೆಚ್ಚಳವಾಗಿದ್ದು, 36.90 ಶತಕೋಟಿ ರೂ. ಆಗಿದೆ.

Advertisement

 ಕಳೆದ ವರ್ಷದ ಇದೇ ಅವಧಿಯಲ್ಲಿ ಲಾಭದ ಪ್ರಮಾಣ 36.03 ಶತಕೋಟಿ ರೂ. ಆಗಿತ್ತು. ಆದರೆ, ಹಿಂದಿನ (ಡಿಸೆಂಬರ್‌) ತ್ತೈಮಾಸಿಕಕ್ಕೆ ಹೋಲಿಸಿದರೆ, ಈ ಬಾರಿ ಕಂಪನಿಯ ನಿವ್ವಳ ಲಾಭದಲ್ಲಿ ಶೇ.28ರಷ್ಟು ಇಳಿಕೆಯಾಗಿದೆ. 

ಇದೇ ವೇಳೆ, ಸಂಸ್ಥೆಯ ಆದಾಯವು ಜನವರಿ-ಮಾರ್ಚ್‌ ಅವಧಿಯಲ್ಲಿ ಶೇ.5.6ರಷ್ಟು ಹೆಚ್ಚಳವಾಗಿದ್ದು, 180.83 ಶತಕೋಟಿಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಆದಾಯವು 171.20 ಶತಕೋಟಿ ರೂ. ಆಗಿತ್ತು ಎಂದು ಕಂಪನಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next