Advertisement

ಇನ್ಫೋಸಿಸ್‌ ಲಾಭ ಶೇ.11 ಏರಿಕೆ

08:30 PM Oct 13, 2022 | Team Udayavani |

ನವದೆಹಲಿ: ಇನ್ಫೋಸಿಸ್‌ ಸಂಸ್ಥೆಯು 2022ನೇ ಆರ್ಥಿಕ ವರ್ಷದ ಎರಡನೇ ತ್ತೈಮಾಸಿಕದ ವರದಿಯನ್ನು ಗುರುವಾರ ಬಿಡುಗಡೆ ಮಾಡಿದೆ.

Advertisement

ಜು.1ರಿಂದ ಸೆ.30ರವರೆಗಿನ ತ್ತೈಮಾಸಿಕದಲ್ಲಿ ಸಂಸ್ಥೆಗೆ 6,021 ಕೋಟಿ ರೂ. ಲಾಭವಾಗಿದೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿ 5,421 ಕೋಟಿ ರೂ. ಇದ್ದಿದ್ದು, ಈ ಬಾರಿ ಲಾಭದಲ್ಲಿ ಶೇ.11.1 ಏರಿಕೆ ದಾಖಲಾಗಿದೆ. ಹಾಗೆಯೇ ಸಂಸ್ಥೆ ಈ ಆರ್ಥಿಕ ವರ್ಷದ 2ನೇ ತ್ತೈಮಾಸಿಕದಲ್ಲಿ 36,538 ಕೋಟಿ ರೂ. ಆದಾಯ ಗಳಿಸಿದೆ.

ಕಳೆದ ವರ್ಷ ಅದು 29,602 ಕೋಟಿ ರೂ. ಆಗಿತ್ತು. ಆದಾಯದಲ್ಲಿ ಶೇ.23.4 ಹೆಚ್ಚಳವಾಗಿದೆ. ಇದೇ ಆರ್ಥಿಕ ವರ್ಷದ ಮೊದಲನೇ ತ್ತೈಮಾಸಿಕಕ್ಕೆ ಹೋಲಿಕೆ ಮಾಡಿದರೆ ಸಂಸ್ಥೆಯ ಲಾಭದಲ್ಲಿ ಶೇ.12.3 ಹಾಗೂ ಆದಾಯದಲ್ಲಿ ಶೇ.6 ಏರಿಕೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಇದೇ ವೇಳೆ ಸಂಸ್ಥೆಯು 9,300 ಕೋಟಿ ರೂ. ಮೌಲ್ಯದ ಷೇರುಗಳನ್ನು ಓಪನ್‌ ಮಾರ್ಕೆಟ್‌ ಮುಖಾಂತರ ವಾಪಸು ಕೊಂಡುಕೊಳ್ಳುವುದಾಗಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next